Published on: December 29, 2022

ಪ್ರಳಯ್‌ ಕ್ಷಿಪಣಿ

ಪ್ರಳಯ್‌ ಕ್ಷಿಪಣಿ

ಸುದ್ದಿಯಲ್ಲಿ ಏಕಿದೆ? ಪಾಕಿಸ್ತಾನ ಮತ್ತು ಚೀನಾ ಗಡಿ ಕಾವಲಿಗೆ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಪ್ರಳಯ ಕ್ಷಿಪಣಿಗಳನ್ನು ನಿಯೋಜನೆ ಮಾಡಲು ರಕ್ಷಣಾ ಇಲಾಖೆ ತೀರ್ಮಾನಿಸಿದ್ದು, 120 ಖಂಡಾತರ ಕ್ಷಿಪಣಿ ಖರೀದಿ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ.

ಮುಖ್ಯಾಂಶಗಳು

  • ದೇಶಿ ನಿರ್ಮಿತ ಮೇಲ್ಮೈಯಿಂದ ಮೇಲ್ಮೈಗೆ ಹಾರುವ ಖಂಡಾಂತರ ಪ್ರಳಯ್‌ ಕ್ಷಿಪಣಿ ಇತ್ತಿಚೆಗಷ್ಟೇ ಯಶಸ್ವಿ ಪರೀಕ್ಷೆ ನಡೆಸಿತ್ತು.

ಉದ್ದೇಶ

  • ಆಗಾಗ್ಗೆ ಗಡಿಯಲ್ಲಿ ತಂಟೆ ಮಾಡುವ ಚೀನಾ ಮತ್ತು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ರಕ್ಷಣಾ ಇಲಾಖೆ ನಿರ್ಧರಿಸಿದ್ದು, ಯುದ್ಧ ತಂತ್ರದ ಭಾಗವಾಗಿ ಕ್ಷಿಪಣಿ ನಿಯೋಜಿಸಲು ತೀರ್ಮಾನಿಸಿದೆ.

ಪ್ರಳಯ್‌ ಕ್ಷಿಪಣಿ

  • ಖಂಡಾಂತರ ಮೇಲ್ಮೈನಿಂದ ಮೇಲ್ಮೈ ಕ್ಷಿಪಣಿಯಾಗಿದೆ.
  • ಪ್ರಳಯ್ ಮೊದಲ ಬಾರಿಗೆ ಡಿಸೆಂಬರ್ 2021 ರಲ್ಲಿ ಪರೀಕ್ಷಾರ್ಥವಾಗಿ ನಡೆದ ಉಡಾವಣೆಯು ಯಶಸ್ವಿಯಾಗಿದೆ
  • ವಿನ್ಯಾಸ: ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ (DRDO), ಭಾರತೀಯ ಖಂಡಾಂತರ ಕ್ಷಿಪಣಿ ಕಾರ್ಯಕ್ರಮದ ಪೃಥ್ವಿ ರಕ್ಷಣಾ ವಾಹನದ ಆಧಾರದಲ್ಲಿ ಅಭಿವೃದ್ಧಿಪಡಿಸಿದೆ.
  • ಸಾಮರ್ಥ್ಯ:  500- 1000 ಕೆಜಿ ತೂಕದ ಸಿಡಿತಲೆಗಳನ್ನು ಹೊರಬಲ್ಲ ಪ್ರಳಯ್ ಕ್ಷಿಪಣಿ
  • ಈ ಅತ್ಯಾಧುನಿಕ ಕ್ಷಿಪಣಿ ಪ್ರತಿರೋಧ ಕ್ಷಿಪಣಿಗಳನ್ನು ಸೋಲಿಸುವ ಸಾಮರ್ಥ್ಯದೊಂದಿಗೆ ಅಭಿವೃದ್ಧಿ ಹೊಂದಿದೆ.
  • ಗುರಿ: 150 ಕಿಮೀಯಿಂದ 500 ಕಿಮೀ ದೂರದಲ್ಲಿ ಇರುವ ಗುರಿಯನ್ನು ತಲುಪುತ್ತದೆ.
  • ತೂಕ: ಸುಮಾರು ಐದು ಟನ್

ಕ್ಷಿಪಣಿಯ ವಿಶೇಷತೆಗಳು :

  • ಆಕಾಶದ ಮಧ್ಯಭಾಗದ ಪಥದಲ್ಲಿ ನಿರ್ದಿಷ್ಟ ದೂರದವರೆಗೆ ಕ್ರಮಿಸಿದ ಬಳಿಕ ತನ್ನ ಪಥವನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ’.
  • ಪೃಥ್ವಿ ಡಿಫೆನ್ಸ್ ವೆಹಿಕಲ್ (ಪಿಡಿವಿ) ಎಕ್ಸೋ-ಅಟ್ಮಾಸ್ಫಿಯರಿಕ್ ಇಂಟರ್‌ಸೆಪ್ಟರ್‌ನ ವ್ಯುತ್ಪನ್ನ, ಕುಶಲ ಶಸ್ತ್ರಾಸ್ತ್ರ ವ್ಯವಸ್ಥೆಯು ಶತ್ರುಗಳನ್ನು ನಾಶಪಡಿಸಬಹುದಾಗಿದೆ. ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರತಿಬಂಧಕಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ.