Published on: November 10, 2023

ಪ್ರಳಯ್ ಖಂಡಾಂತರ ಕ್ಷಿಪಣಿ

ಪ್ರಳಯ್ ಖಂಡಾಂತರ ಕ್ಷಿಪಣಿ

ಸುದ್ದಿಯಲ್ಲಿ ಏಕಿದೆ? ಭಾರತವು ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಅಲ್ಪ ಶ್ರೇಣಿಯ ಪ್ರಳಯ್ ಖಂಡಾಂತರ ಕ್ಷಿಪಣಿಯ ಯಶಸ್ವಿ ಪರೀಕ್ಷೆಯನ್ನು ನಡೆಸಿದೆ. ಪರೀಕ್ಷಾರ್ಥ ಉಡಾವಣೆಯಲ್ಲಿಕ್ಷಿಪಣಿಯು ತನ್ನ ಸಂಪೂರ್ಣ ದೂರ ಸುಮಾರು 500 ಕಿ.ಮೀ. ತಲುಪಿದೆ.

ಮುಖ್ಯಾಂಶಗಳು

  • ವಾಸ್ತವ ಗಡಿ ರೇಖೆ (ಎಲ್ಎಸಿ) ಮತ್ತು ಗಡಿ ರೇಖೆ (ಎಲ್ಒಸಿ) ಉದ್ದಕ್ಕೂ ನಿಯೋಜನೆಗಾಗಿ ಪ್ರಳಯ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
  • ಉಕ್ರೇನ್ ಯುದ್ಧದಲ್ಲಿಬಳಸಲಾದ ಚೀನಾದ ‘ಡಾಂಗ್ ಫೆಂಗ್ 12’ ಮತ್ತುರಷ್ಯಾದ ‘ಇಸ್ಕಾಂಡರ್’ ನೊಂದಿಗೆ ‘ಪ್ರಳಯ್’ ಕ್ಷಿಪಣಿಯನ್ನು ಹೋಲಿಸಬಹುದು.

ಉದ್ದೇಶ ಮತ್ತು ಅಭಿವೃದ್ಧಿಪಡಿಸಿದವರು: ನೆರೆಯ ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ದೇಶದ ರಕ್ಷಣಾ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ  ಸಂಸ್ಥೆ (ಡಿಆರ್ಡಿಒ) ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ.

ಪ್ರಳಯ್  ಕ್ಷಿಪಣಿಯ ವಿವರ

  • 350-500 ಕಿ.ಮೀ ಕಿರು ಶ್ರೇಣಿಯ, ಮೇಲ್ಮೈಯಿಂದ ಮೇಲ್ಮೈಗೆ 500-1,000 ಕೆಜಿ ಪೇಲೋಡ್ ಸಾಮರ್ಥ್ಯದ ಕ್ಷಿಪಣಿಯಾಗಿದೆ.
  • ಘನ ಇಂಧನ, ಯುದ್ಧಭೂಮಿ ಕ್ಷಿಪಣಿಯು ಪೃಥ್ವಿ ಡಿಫೆನ್ಸ್ ವೆಹಿಕಲ್ ಅನ್ನು ಆಧರಿಸಿದೆ.
  • ಪ್ರಳಯ್ ಕ್ಷಿಪಣಿ ಖಂಡಾಂತರ ಮೇಲ್ಮೈನಿಂದ ಮೇಲ್ಮೈ ಕ್ಷಿಪಣಿಯಾಗಿದೆ.
  • ಗುರಿ: 150 ಕಿಮೀಯಿಂದ 500 ಕಿಮೀ ದೂರದಲ್ಲಿಇರುವ ಗುರಿಯನ್ನು ತಲುಪುತ್ತದೆ.
  • ತೂಕ: ಸುಮಾರು ಐದು ಟನ್
  • ಕ್ಷಿಪಣಿಯ ವಿಶೇಷತೆ : ಆಕಾಶದ ಮಧ್ಯಭಾಗದ ಪಥದಲ್ಲಿ ನಿರ್ದಿಷ್ಟ ದೂರದವರೆಗೆ ಕ್ರಮಿಸಿದ ಬಳಿಕ ತನ್ನ ಪಥವನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ’.