Published on: December 10, 2021

ಪ್ರಾದೇಶಿಕ ಕೌಶಲ ಸ್ಪರ್ಧೆ:

ಪ್ರಾದೇಶಿಕ ಕೌಶಲ ಸ್ಪರ್ಧೆ:

ಸುದ್ಧಿಯಲ್ಲಿ ಏಕಿದೆ ? ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಪ್ರಾದೇಶಿಕ ಕೌಶಲ ಸ್ಪರ್ಧೆಯಲ್ಲಿ ಕರ್ನಾಟಕ ತಂಡ 14 ಚಿನ್ನ ಮತ್ತು 13 ಬೆಳ್ಳಿ ಪದಕಗಳ ಸಹಿತ ಒಟ್ಟು 27 ಪದಕಗಳನ್ನು ಮಡಿಲಿಗೆ ಹಾಕಿಕೊಂಡು ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದೆ.

ಮುಖ್ಯಾಂಶಗಳು

  • ಕರ್ನಾಟಕವೂ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಒಡಿಶಾ ರಾಜ್ಯದ ತಂಡಗಳು ಈ ಪ್ರಾದೇಶಿಕ ಮಟ್ಟದ ಸುತ್ತಿನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
  • ಈ ಸ್ಪರ್ಧಿಗಳಲ್ಲಿ 17 ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಕೌಶಲಾಭಿವೃದ್ಧಿ ನಿಗಮ ಮತ್ತು 10 ಸ್ಪರ್ಧಿಗಳಿಗೆ ಸರ್ಕಾರಿ ಉಪಕರಣ ಕಾರ್ಯಾಗಾರದ ವತಿಯಿಂದ ತರಬೇತಿ ನೀಡಲಾಗಿತ್ತು.
  • ರಾಜ್ಯದ ಸ್ಪರ್ಧಿಗಳು ಮೆಕಾಟ್ರಾನಿಕ್ಸ್, ಮುದ್ರಣ ತಂತ್ರಜ್ಞಾನ, ಆಭರಣ ತಯಾರಿಕೆ, ಕೈಗಾರಿಕಾ ನಿಯಂತ್ರಣ, ಕಾರ್ ಪೇಂಟಿಂಗ್, ಅಡುಗೆ ತಯಾರಿಕೆ, ಪ್ಲಾಸ್ಟಿಕ್ ಡೈ ಎಂಜಿನಿಯರಿಂಗ್, ಬೇಕರಿ ಪದಾರ್ಥಗಳ ತಯಾರಿಕೆ ಮತ್ತು ಕ್ಲೌಡ್ ಕಂಪ್ಯೂಟಿಂಗ್ ವಿಭಾಗಗಳಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
  • ಉಳಿದಂತೆ ಎಂ-ಕ್ಯಾಡ್, ಕೇಶವಿನ್ಯಾಸ, ಗ್ರಾಫಿಕ್ ವಿನ್ಯಾಸ, ವಿಷುಯಲ್ ಮರ್ಕಂಡೈಸಿಂಗ್, 3ಡಿ ಡಿಜಿಟಲ್ ಗೇಮ್ ಆರ್ಟ್ ಮತ್ತು ವಾಟರ್ ಟೆಕ್ನಾಲಜಿ ಮತ್ತಿತರ ವಿಭಾಗಗಳಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.