Published on: August 3, 2021
ಪ್ರೊಫೆಸರ್ ಸಿಆರ್ ರಾವ್ ಶತಮಾನೋತ್ಸವ ಚಿನ್ನದ ಪದಕ
ಪ್ರೊಫೆಸರ್ ಸಿಆರ್ ರಾವ್ ಶತಮಾನೋತ್ಸವ ಚಿನ್ನದ ಪದಕ
ಸುದ್ಧಿಯಲ್ಲಿ ಏಕಿದೆ ? ಭಾರತೀಯ ಅರ್ಥಶಾಸ್ತ್ರ ಸೊಸೈಟಿ(ಟಿಐಇಎಸ್) ಟ್ರಸ್ಟ್ ತನ್ನ ಚೊಚ್ಚಲ ಪ್ರೊ ಸಿಆರ್ ರಾವ್ ಶತಮಾನೋತ್ಸವ ಚಿನ್ನದ ಪದಕವನ್ನು ಇಬ್ಬರು ಪ್ರಖ್ಯಾತ ಭಾರತೀಯ ವಿದ್ವಾಂಸರಾದ ಡಾ. ಜಗದೀಶ್ ಭಗವತಿ ಮತ್ತು ಡಾ ಸಿ ರಂಗರಾಜನ್ ಅವರಿಗೆ ನೀಡಿ ಗೌರವಿಸಿದೆ.
- ಡಾ ಭಗವತಿ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ, ಕಾನೂನು ಮತ್ತು ಅಂತರಾಷ್ಟ್ರೀಯ ಸಂಬಂಧಗಳ ಪ್ರಾಧ್ಯಾಪಕರು ಮತ್ತು ಭಾರತೀಯ ಆರ್ಥಿಕ ನೀತಿಗಳ ರಾಜ್ ಕೇಂದ್ರದ ನಿರ್ದೇಶಕರಾಗಿದ್ದಾರೆ.
- ಡಾ ರಂಗರಾಜನ್ ಅವರು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷರು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಮಾಜಿ ಗವರ್ನರ್.
- ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಪ್ರೊಫೆಸರ್ ರಾವ್ ಅವರ ಕೊಡುಗೆಯನ್ನು ಸ್ಮರಿಸಲು ಟಿಐಇಎಸ್ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ. ರಾವ್ ಅವರು ಕಳೆದ ವರ್ಷ ಸೆಪ್ಟೆಂಬರ್ 10 ರಂದು ತಮ್ಮ 100ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
- ಅರ್ಥಶಾಸ್ತ್ರದ ಸೈದ್ಧಾಂತಿಕ ಮತ್ತು ಅನ್ವಯಿಕ ಅಂಶಗಳು ಮತ್ತು ಅಧಿಕೃತ ಅಂಕಿಅಂಶಗಳ ಕ್ಷೇತ್ರಗಳಿಗೆ ನೀಡಿದ ಜೀವಮಾನದ ಕೊಡುಗೆಗಳಿಗಾಗಿ ಭಾರತೀಯ ಅಥವಾ ಭಾರತೀಯ ಮೂಲದ ವಿದ್ವಾಂಸರಿಗೆ ಎರಡು ವರ್ಷಗಳಿಗೊಮ್ಮೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.