Published on: April 23, 2022
ಫೋಬೋಸ್
ಫೋಬೋಸ್
ಸುದ್ಧಿಯಲ್ಲಿ ಏಕಿದೆ? ನಾಸಾದ ಪರ್ಸಿವೆರೆನ್ಸ್ ಮಾರ್ಸ್ ರೋವರ್ ಮಂಗಳ ಗ್ರಹದಲ್ಲಿ ಸೂರ್ಯಗ್ರಹಣದ ದೃಶ್ಯವವೊಂದನ್ನು ಸೆರೆಹಿಡಿದಿದೆ. ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ಪ್ರಕಾರ, ಎಸ್ಯುವಿ ಗಾತ್ರದ ರೋವರ್ನಲ್ಲಿರುವ ಕ್ಯಾಮೆರಾ, ಮಂಗಳ ಗ್ರಹದ ನೈಸರ್ಗಿಕ ಉಪಗ್ರಹ ಫೋಬೋಸ್ ಸೂರ್ಯನ ಮುಂದೆ ಹಾದು ಹೋಗುವ ದೃಶ್ಯವನ್ನು ಸೆರೆಹಿಡಿದಿದೆ
ಮುಖ್ಯಾಂಶಗಳು
- ಇದರಿಂದಾಗಿ ಫೋಬೋಸ್ನ ಕಕ್ಷೆಯನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ಸಹಾಯವಾಗಿದೆ. ಅಲ್ಲದೇ ಫೋಬೋಸ್ನ ಗುರುತ್ವ ಬಲ ಮಂಗಳ ಗ್ರಹದ ಮೇಲ್ಮೈ ಮೇಲೆ ಬೀರುವ ಪರಿಣಾಮಗಳ ಕುರಿತು ಹೆಚ್ಚಿನ ಮಾಹಿತಿ ಕೂಡ ಲಭ್ಯವಾಗಿದೆ
- ಈ ಸೂರ್ಯಗ್ರಹಣದ ವಿದ್ಯಮಾನವನ್ನು ಪರ್ಸಿವೆರೆನ್ಸ್ ಮರ್ಸ್ ರೋವರ್ನ 397 ನೇ ಮಂಗಳದ ದಿನದಂದು ಸೆರೆಹಿಡಿಯಲಾಗಿದ್ದು, ಮಂಗಳ ಗ್ರಹ ಮತ್ತು ಅದರ ಚಂದ್ರ ಫೋಬೋಸ್ ನಡುವಿನ ಗುರುತ್ವ ಸಂಬಂಧವನ್ನು ತಿಳಿಯಲು ಸಹಾಯಕಾರಿಯಾಗಿದೆ
- ಫೋಬೋಸ್ನ ಗುರುತ್ವ ಬಲದ ಕಾರಣದಿಂದ ಮಂಗಳ ಗ್ರಹದ ಒಳಭಾಗದಲ್ಲಿ ಸಣ್ಣ ಉಬ್ಬರವಿಳಿತ ಸಂಭವಿಸುತ್ತದೆ ಎಂಬುದು ಹೊಸ ಸಂಶೋಧನೆಗಳಿಂದ ತಿಳಿದು ಬಂದಿದೆ. ಅಲ್ಲದೇ ಮಂಗಳ ಗ್ರಹದ ಗುರತ್ವ ಬಲದ ಕಾರಣದಿಂದಾಗಿ ಫೋಬೋಸ್ನ ಕಕ್ಷೆ ಅತ್ಯಂತ ನಿಧಾನ ಗತಿಯಲ್ಲಿ ಬದಲಾವಣೆ ಕಾಣುತ್ತಿದೆ
- ಫೋಬೋಸ್ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನಿಗಿಂತ ಗಾತ್ರದಲ್ಲಿ 157 ಪಟ್ಟು ಚಿಕ್ಕದಾಗಿದೆ. ಹೀಗಾಗಿ ಕೇವಲ 40 ಸೆಕೆಂಡ್ಗಳಲ್ಲಿ ಈ ಸೂರ್ಯಗ್ರಹಣದ ವಿದ್ಯಮಾನ ಮುಕ್ತಾಯವಾಗಿದೆ