Published on: June 14, 2024

ಫ್ರೆಂಚ್ ಓಪನ್ ಪ್ರಶಸ್ತಿ 2024

ಫ್ರೆಂಚ್ ಓಪನ್ ಪ್ರಶಸ್ತಿ 2024

ಸುದ್ದಿಯಲ್ಲಿ ಏಕಿದೆ? ಮೂರನೇ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್(ಸ್ಪೇನ್) ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ನ ಫೈನಲ್ನಲ್ಲಿ ನಾಲ್ಕನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೇವ್(ಜರ್ಮನಿ) ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಕಾರ್ಲೋಸ್ ಅಲ್ಕರಾಜ್

  • ಮೂರು ಮಾದರಿಗಳ ಕೋರ್ಟ್‌ನಲ್ಲಿ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದ ಅತ್ಯಂತ ಕಿರಿವಯಸ್ಸಿನ ಆಟಗಾರ ಎಂಬ ಹಿರಿಮೆಗೆ ಪಾತ್ರವಾದರು.
  • 2022ರಲ್ಲಿ ಅಮೆರಿಕ ಓಪನ್ ಪ್ರಶಸ್ತಿ ಗೆದ್ದಿದ್ದ ಅಲ್ಕರಾಜ್, 2023 ರಲ್ಲಿ ವಿಂಬಲ್ಡನ್ ಫೈನಲ್ನಲ್ಲಿ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿ, ಕಿರೀಟವನ್ನು ಜಯಿಸಿದ್ದರು.

ಡಬಲ್ಸ್ ಗ್ರ್ಯಾನ್ಸ್ಲಾಮ್ ಪ್ರಶಸ್ತಿ

ವಿಜೇತರು: ಕೊಕೊ ಗಾಫ್(ಅಮೆರಿಕ) ಮತ್ತು ಕಟೆರಿನಾ ಸಿನಿಯಾಕೋವಾ(ಜೆಕ್ ಗಣರಾಣ್ಯ)

ಕೊಕೊ ಅವರಿಗೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಚೊಚ್ಚಲ ಡಬಲ್ಸ್ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದರು.

ಕಟೆರಿನಾ ಅವರಿಗೆ ಡಬಲ್ಸ್ನಲ್ಲಿ ಇದು ಎಂಟನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯಾಗಿದೆ.

ರನ್ನರ್ ಅಪ್: ಇಟಲಿಯ ಜಾಸ್ಮಿನ್ ಪಾವ್ಲೀನಿ ಮತ್ತು ಸಾರಾ ಎರಾನಿ

ಮಹಿಳೆಯರ ಸಿಂಗಲ್ಸ್

ವಿಜೇತರು: ಇಗಾ ಶ್ವಾಂಟೆಕ್(ಪೋಲೆಂಡ್)

ರನ್ನರ್ ಅಪ್: ಕೊಕೊ ಗಾಫ್(ಅಮೆರಿಕ)

ಪುರುಷ ಡಬಲ್ಸ್

ವಿಜೇತರು: ಮಾರ್ಸೆಲೊ ಅರೆವಾಲೊ ಮತ್ತು ಮೇಟ್ ಪಾವಿಕ್

ರನ್ನರ್ಸಿ ಅಪ್: ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಾಸ್ಸೋರಿ

ಮಿಶ್ರ ಡಬಲ್ಸ್

ವಿಜೇತರು: ಲಾರಾ ಸೀಗೆಮಂಡ್ ಮತ್ತು ಎಡ್ವರ್ಡ್ ರೋಜರ್-ವಾಸೆಲಿನ್

ರನ್ನರ್ ಅಪ್:  ಡೆಸಿರೆ ಕ್ರಾವ್‌ಜಿಕ್ ಮತ್ತು ನೀಲ್ ಸ್ಕುಪ್ಸ್ಕಿ

ಫ್ರೆಂಚ್ ಓಪನ್

  • ಇದನ್ನು ರೋಲ್ಯಾಂಡ್-ಗ್ಯಾರೋಸ್ ಎಂದೂ ಕರೆಯಲಾಗುತ್ತದೆ
  • ನಡೆಯುವ ಸ್ಥಳ: ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಸ್ಟೇಡ್ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ
  • ಸ್ಥಾಪನೆ: 1891
  • ಆವೃತ್ತಿಗಳು: 128 (2024), 94 ಗ್ರ್ಯಾಂಡ್ ಸ್ಲಾಮ್ ಪಂದ್ಯಗಳು (1925 ರಿಂದ) ಜರಿಗಿವೆ
  • ಹೆಚ್ಚಿನ ಪುರುಷ ಸಿಂಗಲ್ಸ್ ಶೀರ್ಷಿಕೆಗಳು: ರಾಫೆಲ್ ನಡಾಲ್ (14)
  • ಹೆಚ್ಚಿನ ಮಹಿಳಾ ಸಿಂಗಲ್ಸ್ ಶೀರ್ಷಿಕೆಗಳು: ಕ್ರಿಸ್ ಎವರ್ಟ್ (7)

ಗ್ರಾಂಡ್ ಸ್ಲ್ಯಾಮ್ಸ್

  • ಆಸ್ಟ್ರೇಲಿಯನ್ ಓಪನ್
  • ಫ್ರೆಂಚ್ ಓಪನ್
  • ವಿಂಬಲ್ಡನ್(ಲಂಡನ್ನಲ್ಲಿ ನಡೆಯುತ್ತದೆ)
  • ಯುಎಸ್ ಓಪನ್