Published on: February 17, 2023
‘ಬಂಧನ್’ ಕಾರ್ಯಕ್ರಮ
‘ಬಂಧನ್’ ಕಾರ್ಯಕ್ರಮ
ಸುದ್ದಿಯಲ್ಲಿ ಏಕಿದೆ? ಏರೋ ಇಂಡಿಯಾ-2023ರ ಭಾಗವಾಗಿ ಬೆಂಗಳೂರಿನಲ್ಲಿ ನಡೆದ ಬಂಧನ್ ಕಾರ್ಯಕ್ರಮದಲ್ಲಿ ಸುಮಾರು 32 ಕಂಪನಿಗಳೊಂದಿಗೆ 2,930 ಕೋಟಿ ರೂ.ಗಳ ಬಂಡವಾಳ ಹೂಡಿಕೆಯ ಮಹತ್ವದ ಒಪ್ಪಂದಗಳಿಗೆ ರಾಜ್ಯ ಸರಕಾರ ಸಹಿ ಹಾಕಿದೆ.
ಮುಖ್ಯಾಂಶಗಳು
- ಏರೋ ಇಂಡಿಯಾದಲ್ಲಿನ ಮಹತ್ವದ ಘಟ್ಟವಾದ ‘ಬಂಧನ್’ 201 ಎಂಒಯು, 53 ಪ್ರಮುಖ ಘೋಷಣೆಗಳು, 9 ಉತ್ಪನ್ನ ಬಿಡುಗಡೆ ಮತ್ತು ತಂತ್ರಜ್ಞಾನದ 3 ಹಸ್ತಾಂತರ ಸೇರಿದಂತೆ ಸುಮಾರು 80 ಸಾವಿರ ಕೋಟಿ ರೂ. ಮೌಲ್ಯದ 266 ಪಾಲುದಾರಿಕೆ ಒಪ್ಪಂದ ಮಾಡಿಕೊಳ್ಳಲಾಯಿತು.
- ಹಲವು ಎಂಎಸ್‌ಎಂಇ, ಸ್ಟಾರ್ಟ್ ಅಪ್‌ಗಳೂ ಸೇರಿದಂತೆ ಪ್ರಮುಖ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಪೈಕಿ ಕೆಲ ಕಂಪನಿಗಳು ಏರ್ ಬಸ್ ಮತ್ತು ಬೋಯಿಂಗ್ ಸೇರಿದಂತೆ ಉದ್ಯಮದಲ್ಲಿನ ಜಾಗತಿಕ ಪೂರೈಕೆದಾರರಾಗಿದ್ದಾರೆ.
- ಎಂಒಯುಗಳಿಗೆ ಸಹಿ ಹಾಕಿರುವ ಕೆಲ ಸ್ಟಾರ್ಟ್ ಅಪ್‌ಗಳು ಡ್ರೋನ್, ಬಾಹ್ಯಾಕಾಶ ಅಪ್ಲಿಕೇಶನ್, ಆ್ಯಂಟಿ ಡ್ರೋನ್ ಸಿಸ್ಟಮ್ ಮತ್ತು ಸುಧಾರಿತ ಸಂವಹನ ವ್ಯವಸ್ಥೆಗಳಂತಹ ಅತ್ಯಾಧುನಿಕ ಆವಿಷ್ಕಾರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
- 2023–24ರ ಸಾಲಿನ ರಕ್ಷಣಾ ಉತ್ಪನ್ನಗಳ ಖರೀದಿಗಾಗಿ ನಿಗದಿ ಮಾಡಿರುವ ಒಟ್ಟು ಮೊತ್ತದಲ್ಲಿ ಶೇ 75ರಷ್ಟನ್ನು ದೇಶೀಯ ಉದ್ಯಮಕ್ಕೆ ಮೀಸಲಿಡಲಾಗಿದೆ. ಕಳೆದ ಹಣಕಾಸು ವರ್ಷಕ್ಕಿಂ ತ ಇದು ಶೇ 7ರಷ್ಟು ಅಧಿಕವಾಗಿದೆ.
ಉದ್ದೇ ಶ
- ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಒಪ್ಪಂದಗಳನ್ನು ಉತ್ತೇ ಜಿಸುವ ಉದ್ದೇ ಶದಿಂದ ‘ಬಂಧನ್’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಒಪ್ಪಂದ ಮಾಡಿಕೊಂಡ ಕೆಲವು ಕಂಪನಿಗಳು
- ಬೆಲ್ಲಟ್ರಿಕ್ಸ್:ಈ ಸಂಸ್ಥೆ ನೀರನ್ನು ಇಂಧನವಾಗಿ ಬಳಸುವ ವಿಶ್ವದ ಮೊದಲ ವಾಣಿಜ್ಯ ವಿದ್ಯುತ್ ಸಿಸ್ಟಮ್‌ಗಳನ್ನು ವಿನ್ಯಾಸಗೊಳಿಸುತ್ತದೆ. ಸಂಸ್ಥೆ ರಾಜ್ಯದಲ್ಲಿ 630 ಕೋಟಿ ರೂ. ಹೂಡಿಕೆಮಾಡುತ್ತಿದೆ.
- ಪಿಕ್ಸೆಲ್:ಪಿಕ್ಸೆಲ್ ಜಗತ್ತಿನ ಅತ್ಯಾಧುನಿಕ ವಾಣಿಜ್ಯ ಹೈಪರ್ ಸ್ಪೆಕ್ಟ್ರಲ್ ಉಪಗ್ರಹಗಳ ಅಗತ್ಯ ಚಿತ್ರಣ ದತ್ತಾಂಶ ಒದಗಿಸುತ್ತಿದೆ. ಈ ಸಂಸ್ಥೆ ಭಾರತದಲ್ಲಿ ವಾಣಿಜ್ಯ ಉದ್ದೇಶಕ್ಕೆ 2022ರಲ್ಲಿ ನಿರ್ಮಿಸಲಾದ ಮೊದಲ ಭೂ ವೀಕ್ಷಣಾ ಉಪಗ್ರಹ ಆರಂಭಿಸಿತು. ಪಿಕ್ಸೆಲ್ ಸಂಸ್ಥೆ 300 ಕೋಟಿ ರೂ. ಹೂಡಿಕೆ ಮಾಡಲು ಮುಂದೆ ಬಂದಿದೆ.
3. ಡೈನಮ್ಯಾಟಿಕ್ ಟೆಕ್ನಾಲಜೀಸ್: ಏರ್‌ಬಸ್ ಮತ್ತು ಬೋಯಿಂಗ್‌ಗಳ ಪೂರೈಕೆದಾರ ಸಂಸ್ಥೆಯಾದ ಡೈನಮ್ಯಾಟಿಕ್ ಟೆಕ್ನಾಲಜೀಸ್ ಲಿಮಿಟೆಡ್ ಆಟೋಮೋಟಿವ್, ಏರೋನಾಟಿಕ್, ಹೈಡ್ರಾಲಿಕ್ಸ್ ಮತ್ತು ಭದ್ರತಾ ಅಪ್ಲಿಕೇಶನ್‌ಗಳಿಗಾಗಿ ಎಂಜಿನಿಯರಿಂಗ್ ಉತ್ಪನ್ನಗಳನ್ನು ವಿನ್ಯಾಸಗೊಳಿಸುತ್ತದೆ. ಈ ಸಂಸ್ಥೆ 250 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದೆ. - ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್: ಇದು ದೇಶದ ಮೊದಲ ಸಂಪೂರ್ಣ ಮೇಕ್ ಇನ್ ಇಂಡಿಯಾ ಯುಎವಿ ಕಂಪನಿ. ಎಲ್ಲಾ ರಕ್ಷಣಾ ವಿಭಾಗದ ಸ್ವಾಯತ್ತ ಮತ್ತು ಮಾನವರಹಿತ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಈ ಕಂಪನಿ 100 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದೆ.
5. ಸಾಸ್ಮೋಸ್:ಲಾಕ್‌ಹೀಡ್ ಮಾರ್ಟಿನಿಸ್‌ಗೆ ಪ್ರಮುಖ ವೈರಿಂಗ್ ಪೂರೈಕೆದಾರ ಹಾಗೂ ದೇಶದಲ್ಲಿ ಏರೋಸ್ಪೇಸ್, ರಕ್ಷಣಾ ಮತ್ತು ಸಾಗರ ಉದ್ಯಮ ಕ್ಷೇತ್ರದಲ್ಲಿ ಉತ್ಪನ್ನಗಳ ಪ್ರಮುಖ ತಯಾರಕ ಕಂಪನಿ. ಸಾಸ್ಮೋಸ್ ಸಂಸ್ಥೆಯು 75 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ. - ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ, ಹೆಲಿಕಾಪ್ಟರ್ ಎಂಜಿನ್ಗಳ ಬಾಳಿಕೆಯ ಕ್ಷಮತೆ ಹೆಚ್ಚಿಸುವುದಕ್ಕಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಹಾಗೂ ಫ್ರಾನ್ಸ್ನ ಸಫ್ರಾನ್ ಹೆಲಿಕಾಪ್ಟರ್ ಎಂಜಿನ್ ಸಂಸ್ಥೆಗಳ ನಡುವೆ ತಿಳಿವಳಿಕೆ ಒಪ್ಪಂದವಾಗಿದೆ.
- ಬಿಇಎಲ್ ಹಾಗೂ ಎಡಿಎ ನಡುವೆ ಸುಧಾರಿತ ಮಧ್ಯಮ ಯುದ್ಧ ವಿಮಾನಗಳಿಗಾಗಿ ಒಪ್ಪಂದವಾಗಿದೆ. ಭಾರತದಲ್ಲಿ ರಾಕೆಟ್ಗಳ (122 MM GRAD BMER ಹಾಗೂ NONER) ಉತ್ಪಾದನೆಗೆ ಬಲ್ಗೇ ರಿಯಾದ ಬುಲ್ಸ್ ಎಕ್ಸ್ಪ್ರೋ ಲಿಮಿಟೆಡ್ ಕಂಪನಿಯ ನಡುವೆ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಒಪ್ಪಂದ ಮಾಡಿಕೊಂಡಿದೆ.
- ಐಡೆಕ್ಸ್: ರಕ್ಷಣಾ ವಲಯದಲ್ಲಿ ನವೋದ್ಯಮಗಳನ್ನು ಉತ್ತೇ ಜಿಸುವ ಉದ್ದೇ ಶದಿಂದ ಐಡೆಕ್ಸ್ ಎಂಬ ಹೂಡಿಕೆ ತಾಣಕ್ಕೆ ರಕ್ಷಣಾ ಸಚಿವರು ಏರೋ ಇಂಡಿಯಾ ಪ್ರದರ್ಶನದಲ್ಲಿ ಚಾಲನೆ ನೀಡಿದರು. ಈ ಜಾಲತಾಣದ ಮೂಲಕವೇ ₹ 200 ಕೋಟಿಯಷ್ಟು ಬಂಡವಾಳ ಹೂಡಿಕೆ ಸಾಧ್ಯವಾಗಲಿದೆ. ಸೈಬರ್ ಭದ್ರತೆ ಕುರಿತಂತೆ 28 ಸಮಸ್ಯೆಗಳನ್ನು ಪಟ್ಟಿಮಾಡಿದ್ದು, ಅವುಗಳನ್ನು ಪರಿಹರಿಸುವ ಸವಾಲುಗಳಿವೆ, ‘ಡಿಫೆನ್ಸ್ ಇಂಡಿಯಾ ಸ್ಟಾರ್ಟ್ಅಪ್ ಚಾಲೆಂಜಸ್’ನ (ಡಿಐಎಸ್ಸಿ 9) ಒಂಬತ್ತನೇ ಆವೃತ್ತಿ ಮೂಲಕ ಈ ಸವಾಲುಗಳನ್ನು ಅನಾವರಣಗೊಳಿಸಲಾಯಿತು. ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನವೋದ್ಯಮಗಳು ತಲೆಎತ್ತಿದ್ದು, ಅಭಿವೃದ್ಧಿಯಲ್ಲಿ ಅವುಗಳ ಕೊಡುಗೆ ಮಹತ್ವದ್ದು.