Published on: December 1, 2021
ಬಾರ್ಬಡೋಸ್
ಬಾರ್ಬಡೋಸ್
ಸುದ್ಧಿಯಲ್ಲಿ ಏಕಿದೆ? ಬಾರ್ಬಡೋಸ್ ತನ್ನನ್ನು ಹೊಸ ಗಣರಾಜ್ಯವೆಂದು ಘೋಷಿಸಿಕೊಂಡಿದ್ದು, ಸಾಂಡ್ರಾ ಮೇಸನ್ ಅವರನ್ನು ತನ್ನ ಮೊದಲ ಅಧ್ಯಕ್ಷೆಯನ್ನಾಗಿ ಚುನಾಯಿಸಿದೆ. ಈ ಮೂಲಕ 400 ವರ್ಷಗಳ ಬ್ರಿಟನ್ ಅಧಿಪತ್ಯವನ್ನು ಬಾರ್ಬಡೋಸ್ ಕೊನೆಗಾಣಿಸಿದೆ.
- ಬಾರ್ಬಡೋಸ್ ಈಗ ಗಣರಾಜ್ಯವಾಗಿದ್ದರೂ ಕಾಮನ್ವೆಲ್ತ್ ಸಂಘದಲ್ಲಿ ಉಳಿದುಕೊಳ್ಳಲಿದೆ. ಆಫ್ರಿಕಾ, ಏಷ್ಯಾ, ಅಮೆರಿಕ ಹಾಗೂ ಯೂರೋಪ್ನ ಸುಮಾರು 54 ರಾಷ್ಟ್ರಗಳು ಕಾಮನ್ವೆಲ್ತ್ ಸಂಘದಲ್ಲಿವೆ. 1992ರಲ್ಲಿ ಮಾರಿಷಸ್ ಬ್ರಿಟನ್ ಅಧಿಪತ್ಯವನ್ನು ಕೊನೆಗಾಣಿಸಿ ಗಣರಾಜ್ಯವನ್ನು ಘೋಷಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಿನ್ನೆಲೆ
- ಬಾರ್ಬಡೋಸ್ ಅನ್ನು ಬ್ರಿಟಿಷರು ‘ಗುಲಾಮ ಸಮಾಜ’ವನ್ನಾಗಿ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಇದು ಮೊದಲು 1625 ರಲ್ಲಿ ಇಂಗ್ಲಿಷ್ ವಸಾಹತು ಆಯಿತು. 1966 ರಲ್ಲಿ ಸ್ವಾತಂತ್ರ್ಯ ಗಳಿಸಿತು.