Published on: November 1, 2021
ಬಿಬಿಎಂಪಿಗೆ ಪ್ರಶಸ್ತಿ
ಬಿಬಿಎಂಪಿಗೆ ಪ್ರಶಸ್ತಿ
ಸುದ್ಧಿಯಲ್ಲಿ ಏಕಿದೆ? ಬೆಂಗಳೂರು ನಗರದಲ್ಲಿನ 18 ಕೆರೆಗಳ ಪುನಶ್ಚೇತನ ಮತ್ತು ಏಳಕ್ಕೂ ಹೆಚ್ಚು ಕೆರೆಗಳ ಸಂರಕ್ಷಣೆ ಕೆಲಸಕ್ಕಾಗಿ ಬಿಬಿಎಂಪಿಗೆ ಅರ್ಥ್ ಡೆ ನೆಟ್ ವರ್ಕ್ ಸ್ಟಾರ್ ಮುನ್ಸಿಪಾಲ್ ಲೀಡರ್ ಶಿಪ್ ಪ್ರಶಸ್ತಿಯನ್ನು ಪಡೆದಿದೆ.
- ಈ ಪ್ರಶಸ್ತಿಗಾಗಿ ಪುಟ್ಟೇನಹಳ್ಳಿ ನೆರೆಹೊರೆಯ ಕೆರೆ ಸುಧಾರಣಾ ಟ್ರಸ್ಟ್ (ಪಿಎನ್ ಎಲ್ ಐಟಿ) ಬಿಬಿಎಂಪಿಯನ್ನು ನಾಮನಿರ್ದೇಶನ ಮಾಡಿತ್ತು. ಪುಟ್ಟೇನಹಳ್ಳಿ ಕೆರೆ ಪುನಶ್ಚೇತನಕ್ಕಾಗಿ 2009ರಿಂದಲೂ ಈ ಟ್ರಸ್ಟ್ ಬಿಬಿಎಂಪಿಯೊಂದಿಗೆ ಕೆಲಸ ಮಾಡುತ್ತಿದೆ.
- ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಂತಹ ಯೋಜನೆ ಹಾಗೂ ಕಾರ್ಯ ಕೈಗೊಂಡ ಸ್ಥಳೀಯ ಸಂಸ್ಥೆಗಳಿಗೆ ಅರ್ಥ್ ಡೇ 50ನೇ ವರ್ಷಚಾರಣೆ ಪ್ರಯುಕ್ತ ಅರ್ಥ್ ಡೇ ನೆಟ್ ವರ್ಕ್ ಇಂಡಿಯಾದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
- ಚಿಕ್ಕಬಸ್ತಿ, ಗುಬ್ಬಲಾಲ, ಯಲ್ಲನಹಳ್ಳಿ, ತಲಘಟ್ಟಪುರ, ಬೈರಸಂದ್ರ, ಬಸವನಪುರ, ಸಿದ್ದಾಪುರ, ನಗರೇಶ್ವರ ನಾಗೇನಹಳ್ಳಿ, ಮಹಾದೇವಪುರ-2, ಸಾರಕ್ಕಿ, ಬೇಗೂರು, ಹೂರಮಾವು, ಭಟ್ಟರ ಹಳ್ಳಿ, ಕೊತ್ತನೂರು, ನಲ್ಲೂರಳ್ಳಿ, ಗುಂಜೂರು ಪಾಳ್ಯ, ದೇವರಕೆರೆ ಮತ್ತಿತರ ಕೆರೆಗಳ ಅಭಿವೃದ್ಧಿ ಕಾರ್ಯವನ್ನು ಬಿಬಿಎಂಪಿ ಈ ವರ್ಷ ಮಾಡಿದೆ.