Published on: January 19, 2023

ಬುಡಕಟ್ಟು ಮಹಿಳೆಯರಿಗೆ ಪ್ರೋತ್ಸಾಹಧನ

ಬುಡಕಟ್ಟು ಮಹಿಳೆಯರಿಗೆ ಪ್ರೋತ್ಸಾಹಧನ


ಸುದ್ದಿಯಲ್ಲಿ ಏಕಿದೆ? ಬುಡಕಟ್ಟು ಸಮುದಾಯದ ಮಹಿಳೆಯರು ಹೆಚ್ಚು ಮಕ್ಕಳನ್ನು ಹೆರುವುದನ್ನು ಉತ್ತೇಜಿಸಲು ಸಿಕ್ಕಿಂ ಸರ್ಕಾರವು ಪ್ರೋತ್ಸಾಹಧನವನ್ನು ಘೋಷಿಸಿದೆ


ಮುಖ್ಯಾಂಶಗಳು

  • ದಕ್ಷಿಣ ಸಿಕ್ಕಿಂ ನ ಜೊರೆಥಂಗ್ ನಗರದಲ್ಲಿ ನಡೆದ ಮಘೆ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ಅವರು ಈ ಘೋಷಣೆ ಮಾಡಿದರು.

ಯೋಜನೆ ಘೋಷಿಸಲು ಕಾರಣ  

  • ‘ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಫಲವಂತಿಕೆ ದರವು ಕಡಿಮೆಯಾಗುತ್ತಿದೆ. ಒಬ್ಬ ಮಹಿಳೆಯು ಒಂದು ಮಗುವನ್ನು ಮಾತ್ರ ಹೆರುತ್ತಿದ್ದಾರೆ. ಆದ್ದರಿಂದ ಬುಡಕಟ್ಟು ಸಮುದಾಯದ ಜನಸಂಖ್ಯೆಯು ಕಡಿಮೆಯಾಗುತ್ತಿದೆ’.

ಯೋಜನೆಯ ಅಂಶಗಳು

  • ‘365 ದಿನದ ಮಾತೃತ್ವ ರಜೆಯನ್ನು ಸರ್ಕಾರ ಘೋಷಣೆ ಮಾಡಿದೆ.
  • ಪುರುಷರಿಗೆ 30 ದಿನಗಳ ಪಿತೃತ್ವ ರಜೆಯನ್ನು ನೀಡಲಾಗುತ್ತಿದೆ.
  • ಎರಡನೇ ಮಗು ಹೆರುವ ಉದ್ಯೋ ಗಸ್ಥ ಮಹಿಳೆಗೆ ವೇತನ ಬಡ್ತಿ ನೀಡಲಾಗುವುದು. ಮೂರನೇ ಮಗುವನ್ನು ಪಡೆದರೆ, ಎರಡು ವೇತನ ಬಡ್ತಿ ನೀಡುವ ಪ್ರಸ್ತಾವವಿದೆ.
  • ಆದರೆ, ಒಂದು ಮಗು ಹೆರುವ ಮಹಿಳೆಯರಿಗೆ ಈ ಹಣಕಾಸಿನ ನೆರವು ನೀಡಲಾಗುವುದಿಲ್ಲ’.
  • ‘ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲೂ ಕೃತಕ ಗರ್ಭಧಾರಣೆ ಸೌಲಭ್ಯ ಒದಗಿಸಲಾಗಿದೆ.
  • ಈ ಸೌಲಭ್ಯದ ಮೂಲಕ ಮಕ್ಕಳನ್ನು ಪಡೆಯುವ ಎಲ್ಲಾ ಮಹಿಳೆಯರಿಗೆ ರೂ.  3 ಲಕ್ಷ ಸಹಾಯಧನ ನೀಡಲಾಗುತ್ತಿದೆ.