Published on: November 6, 2021
ಬೂಕರ್ ಪ್ರಶಸ್ತಿ
ಬೂಕರ್ ಪ್ರಶಸ್ತಿ
ಸುದ್ಧಿಯಲ್ಲಿ ಏಕಿದೆ? ದಕ್ಷಿಣ ಆಫ್ರಿಕಾದ ಲೇಖಕ ಡೇಮನ್ ಗಾಲ್ಗಟ್ ಅವರ ಕಾದಂಬರಿ ‘ದಿ ಪ್ರಾಮಿಸ್’ ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿನ ವರ್ಣಭೇದ ನೀತಿ ಮತ್ತು ಬಿಳಿಯ ವರ್ಣದ ಕುಟುಂಬದ ಕಥೆಯನ್ನು ಕಾದಂಬರಿ ಒಳಗೊಂಡಿದೆ.
- ಪ್ರಶಸ್ತಿಯು 50,000 ಪೌಂಡ್ (ಸುಮಾರು ₹50 ಲಕ್ಷ) ಬಹುಮಾನವನ್ನು ಒಳಗೊಂಡಿದೆ.
- ಡೇಮನ್ ಗಾಲ್ಗಟ್ ಅವರ ಕಾದಂಬರಿಯು ಬೂಕರ್ ಪ್ರಶಸ್ತಿಯ ಆಯ್ಕೆ ಪಟ್ಟಿಗೆ ಈ ಹಿಂದೆಯೂ ಎರಡು ಬಾರಿ ಸೇರ್ಪಡೆಯಾಗಿತ್ತು. ಆದರೆ, ಮೂರನೇ ಬಾರಿಗೆ ಪ್ರಶಸ್ತಿ ಒಲಿದಿದೆ. 2003ರಲ್ಲಿ ‘ದಿ ಗುಡ್ ಡಾಕ್ಟರ್’ ಹಾಗೂ 2010ರಲ್ಲಿ ‘ಇನ್ ಎ ಸ್ಟ್ರೇಂಜ್ ರೂಂ’ ಕೃತಿಗಳು ಆಯ್ಕೆ ಪಟ್ಟಿಗೆ ಸೇರ್ಪಡೆಯಾಗಿದ್ದವು.
- 2021ರ ನೊಬೆಲ್ ಸಾಹಿತ್ಯ ಪುರಸ್ಕಾರ ಪಡೆದ ಸಾಹಿತಿ ಅಬ್ದುಲ್ ರಜಾಕ್ ಗುರ್ನಾ ಸಹ ಆಫ್ರಿಕಾದವರು ಎಂಬುದನ್ನು ಡೇಮನ್ ಗಾಲ್ಗಟ್ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.
- 1969ರಿಂದ ಇಂಗ್ಲಿಷ್ನಲ್ಲಿ ಪ್ರಕಟವಾಗಿರುವ ಕೃತಿಗಳಿಗೆ ಬೂಕರ್ ಪ್ರಶಸ್ತಿ ನೀಡಲಾಗುತ್ತಿದೆ.