Published on: November 19, 2023

‘ಬೆಂಗಳೂರು ಹವಾಮಾನ ಕ್ರಿಯಾ ಯೋಜನೆ’(ಸಿಎಪಿ)

‘ಬೆಂಗಳೂರು ಹವಾಮಾನ ಕ್ರಿಯಾ ಯೋಜನೆ’(ಸಿಎಪಿ)

ಸುದ್ದಿಯಲ್ಲಿ ಏಕಿದೆ? ಮುಂಬೈ , ಚೆನ್ನೈ ನಂತರ ಬೆಂಗಳೂರು ಸಿಎಪಿ ಕರಡು ಸಿದ್ಧಪಡಿಸಲಿದ್ದು, 2050ರ ವೇಳೆಗೆ ‘ತಟಸ್ಥ ಇಂಗಾಲ(ಕಾರ್ಬನ್ ನ್ಯೂಟ್ರಲ್)’ ಸಾಧಿಸುವ ನಗರವಾಗಿಸುವ ನೀಲನಕ್ಷೆ  ತಯಾರಿಸಲಾಗುತ್ತಿದೆ. 269 ಕ್ರಿಯೆಗಳನ್ನು ಒಳಗೊಂಡಿರುವ ಯೋಜನೆಯನ್ನು  ಸಭೆಯಲ್ಲಿ ಅಂತಿಮಗೊಳಿಸಲಾಗಿದೆ.

ಮುಖ್ಯಾಂಶಗಳು

  • ಹವಾಮಾನ ವೈಪರೀತ್ಯ ಎದುರಿಸುವ ‘ಸಿ40 ನಗರಗಳ ಜಾಗತಿಕ ಸಂಪರ್ಕ ಜಾಲ’ದಲ್ಲಿ ಬೆಂಗಳೂರು ಸಹ ನಾಯಕತ್ವವನ್ನು ಹೊಂದಿದೆ. ಈ ನಗರಗಳ ಪಟ್ಟಿಯಲ್ಲಿ ಮುಂಬೈ , ದೆಹಲಿ, ಕೊಲ್ಕತ್ತ, ಚೆನ್ನೈ, ಅಹಮದಾಬಾದ್ ನಗರಗಳೂ ಇವೆ.
  • ಗ್ಲೋಬಲ್ ಕನ್ಸ್ಟಲ್ಟೆಂಟ್ ಆಗಿರುವ ವರ್ಲ್ಡ್‌ ರಿಸೋರ್ಸ್‌ ಇನ್ಸ್ಟಿಟ್ಯೂಟ್ (ಡಬ್ಲ್ಯುಆರ್ ಐ) 269 ಕ್ರಿಯೆಗಳ ಯೋಜನೆಗಳನ್ನು ಪ್ರಸ್ತುತಪಡಿಸಿತ್ತು. ಇಂಧನ, ಕಟ್ಟಡ, ಸಾರಿಗೆ, ಘನತ್ಯಾಜ್ಯ ನಿರ್ವಹಣೆ, ವಾಯುಗುಣಮಟ್ಟ, ನೀರು, ನಗರ ಯೋಜನೆ, ಹಸಿರೀಕರಣ, ಜೀವ ವೈವಿಧ್ಯ ಮತ್ತು ವಿಪತ್ತು ನಿರ್ವಹಣೆ ಸೇರಿದಂತೆ ಹಲವು ಕ್ರಿಯೆಗಳನ್ನು ಈ ಯೋಜನೆ ಒಳಗೊಂಡಿದೆ. ಈ 269 ಕ್ರಿಯೆಗಳಲ್ಲಿ 143 ಕ್ರಿಯೆಗಳಿಗೆ ಬಿಬಿಎಂಪಿ ‘ಪ್ರಾಥಮಿಕವಾಗಿ’ ಜವಾಬ್ದಾರಿಯನ್ನು ಹೊಂದಿದೆ.

ಉದ್ದೇಶ

ನಗರದಲ್ಲಿ ಗ್ರೀನ ಹೌಸ್ ಗ್ಯಾಸ್ (GHG)ಹೊರಸೂಸುವಿಕೆಯನ್ನು ಕಡಿತಗೊಳಿಸುವುದು, ಹವಾಮಾನ ಬದಲಾವಣೆಯಿಂದ ಉಂಟಾಗುವ ವೈಪರೀತ್ಯಗಳ ವಿರುದ್ಧ ಸ್ಥಿತಿಸ್ಥಾಪಕವನ್ನು ನಿರ್ಮಿಸುವುದು ಕ್ರಿಯಾ ಯೋಜನೆಯ ಪ್ರಮುಖ ಉದ್ದೇಶವಾಗಿದೆ. 30 ವರ್ಷಗಳ ಹವಾಮಾನವನ್ನು ವಿಮರ್ಶಿಸಿ ಡಬ್ಲ್ಯುಆರ್ ಐ ಜಿಎಚ್ಜಿ ಮಟ್ಟವನ್ನು 2019ರಲ್ಲಿ ಸಿದ್ಧಪಡಿಸಿದೆ. ನಗರವನ್ನು ಶೇ 90ರಷ್ಟು ಸಾರಿಗೆ ಆಧಾರಿತ ಅಭಿವೃದ್ಧಿ ಪ್ರದೇಶವನ್ನಾಗಿಸುವುದು. ನಗರದಲ್ಲಿ ವಿದ್ಯುತ್ ಉತ್ಪಾದನೆ ಗ್ರಿಡ್ಗಳನ್ನು 2050ರ ವೇ ಳೆಗೆ ಶೇ 90ರಷ್ಟು ಹೆಚ್ಚಿಸುವುದು. 2026ರ ವೇಳೆಗೆ ವಾಯುಮಾಲಿನ್ಯ ಮಟ್ಟವನ್ನು ಶೇ 40ರಷ್ಟು ಕಡಿತಗೊಳಿಸುವುದು.