Published on: September 3, 2022

‘ಬೆಳಕು’ ಕಲಿಕಾ ಕೇಂದ್ರ

‘ಬೆಳಕು’ ಕಲಿಕಾ ಕೇಂದ್ರ

Lingayen ಸುದ್ದಿಯಲ್ಲಿ ಏಕಿದೆ?

cytotec no prescription ಬೆಂಗಳೂರು ನಗರದಲ್ಲಿನ ಕೊಳಚೆ ಪ್ರದೇಶದ ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೆರವಾಗಲು ಬಿಬಿಎಂಪಿ ಕಲ್ಯಾಣ ಇಲಾಖೆ ಎಲ್ಲಾ ವಾರ್ಡ್ ಗಳಲ್ಲಿ ಬೆಳಕು ಕಲಿಕಾ ಕೇಂದ್ರವೊಂದನ್ನು ಸ್ಥಾಪಿಸುತ್ತಿದೆ. ಈ ಕೇಂದ್ರದಲ್ಲಿ ಓರ್ವ ನುರಿತ ಶಿಕ್ಷಕ, ಸುಸಜ್ಜಿತ ಕೊಠಡಿ ಹಾಗೂ ಪುಸ್ತಕಗಳು ಇರಲಿವೆ.

ಮುಖ್ಯಾಂಶಗಳು

  • ಇಂತಹ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗದ ಖಾತ್ರಿ ಈ ಯೋಜನೆಯದ್ದಾಗಿದೆ. ಮನೆಯಲ್ಲಿ ಅಧ್ಯಯನ ಮಾಡಲು ಸೂಕ್ತ ವಾತವಾರಣ ಇಲ್ಲದಂತಹ ದುರ್ಬಲ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಿಬಿಎಂಪಿ ಕಲ್ಯಾಣ ಇಲಾಖೆ ವಿದ್ಯಾರ್ಥಿ ಬೆಳಕು ಯೋಜನೆ ಜಾರಿಗೊಳಿಸುತ್ತಿದೆ.
  • ವಿದ್ಯಾರ್ಥಿಗಳ ಮನೆಗಳಿಗೆ 500 ಮೀಟರ್ ಗಳಿಂದ 1 ಕಿ.ಮೀ ವ್ಯಾಪ್ತಿಯಲ್ಲಿ ಈ ಕೇಂದ್ರಗಳು ಸ್ಥಾಪನೆಯಾಗಲಿವೆ. ಸರಿಯಾಗಿ ಅಧ್ಯಯನ ನಡೆಸದ ಇಂತಹ ಅನೇಕ ವಿದ್ಯಾರ್ಥಿಗಳಿಗಾಗಿ ಇಲಾಖೆ ಈ ಕಾರ್ಯಕ್ರಮ ಆರಂಭಿಸುತ್ತಿದೆ.
  • ಎನ್ ಜಿಒ ಮತ್ತು ಸ್ವಯಂ ಸೇವಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮೂಲಸೌಕರ್ಯ ಹಾಗೂ ಅಧ್ಯಯನ ಸಾಮಾಗ್ರಿಗಳನ್ನು ಇಲಾಖೆ ಕಡೆಯಿಂದ ಒದಗಿಸಲಾಗುತ್ತದೆ.
  • ಈ ಕೇಂದ್ರಗಳು ಸಂಜೆ 5-30 ರಿಂದ 7-30ರವರೆಗೂ ತೆರೆದಿರುತ್ತವೆ. ಈ ಕೇಂದ್ರಗಳ ನಿರ್ವಹಣೆಗಾಗಿ ಮಾಸಿಕ ರೂ. 1,500 ರಿಂದ ರೂ. 2,000 ತಿಂಗಳ ಗೌರವಧನದೊಂದಿಗೆ ಪದವೀಧರರನ್ನು ಎನ್ ಜಿಒಗಳು ಗುತ್ತಿಗೆಗೆ ಪಡೆದುಕೊಳ್ಳಬೇಕು, ಈ ಕೇಂದ್ರಗಳ ಶಿಕ್ಷಕರಿಗೆ 15 ದಿನ ತರಬೇತಿ ನೀಡಲಾಗುವುದು, ಪ್ರತಿ ಸೆಂಟರ್ ಗೆ ರೂ. 42, 500 ಅನುದಾನ ಹಂಚಿಕೆ ಮಾಡಲಾಗುವುದು.

ಉದ್ದೇಶ

  • ವಿದ್ಯಾರ್ಥಿಗಳಿಗೆ ನಾಯಕತ್ವ, ಸಂವಹನ ಮತ್ತಿತರ ಕೌಶಲ್ಯಗಳನ್ನು ಹೇಳಿಕೊಡಲಾಗುವುದು, ಅವರು ತಮ್ಮ ಪರೀಕ್ಷೆ ಪಾಸು ಮಾಡಲು ತರಬೇತಿದಾರರ ನೆರವು ಪಡೆದುಕೊಳ್ಳಬಹುದು. ಪೈಲಟ್ ಆಧಾರದ ಮೇಲೆ ಈಗಾಗಲೇ 10 ಕೇಂದ್ರಗಳನ್ನು ತೆರೆಯಲಾಗಿದ್ದು, ಶೀಘ್ರದಲ್ಲಿಯೇ ಎಲ್ಲಾ ವಾರ್ಡ್ ಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಾಗುವುದು.