Published on: January 3, 2022
‘ಬ್ಯಾಡ್ ಬ್ಯಾಂಕ್’
‘ಬ್ಯಾಡ್ ಬ್ಯಾಂಕ್’
ಸುದ್ಧಿಯಲ್ಲಿ ಏಕಿದೆ ? ಬ್ಯಾಂಕ್‌ಗಳ ಸುಸ್ತಿ ವಸೂಲಾತಿಗೆ ಕೇಂದ್ರ ಸರ್ಕಾರ ಸ್ಥಾಪಿಸಲು ಉದ್ದೇಶಿಸಿದ್ದ ‘ಬ್ಯಾಡ್ ಬ್ಯಾಂಕ್’ ಗೆ ಇದೀಗ ಕಾನೂನು ತೊಡರು ಎದುರಾಗಿದೆ. ಹೀಗಾಗಿ ಬ್ಯಾಡ್ ಬ್ಯಾಂಕ್ ಸ್ಥಾಪನೆ ಇನ್ನಷ್ಟು ವಿಳಂಬ ಆಗಲಿದೆ
ಹಿನ್ನಲೆ
- 2021-22ರ ಬಜೆಟ್‌ನಲ್ಲಿ, ಬ್ಯಾಂಕ್‌ಗಳ ಸುಸ್ತಿ ಸಾಲ ವಸೂಲಾತಿಗೆ ಬ್ಯಾಡ್ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು.
- ಸುಸ್ತಿ ಸಾಲ ವಸೂಲು ಮಾಡುವ ಉದ್ದೇಶದಿಮದ ಕೇಂದ್ರ ಸರ್ಕಾರ ಇಂಡಿಯಾ ಡೆಟ್ ರೆಸೆಲ್ಯೂಷನ್ ಕಂಪನಿ (IDRCL), ಹಾಗೂ ನ್ಯಾಷನಲ್ ಅಸೆಟ್ ರೆಸ್ಯೆಲ್ಯೂಷನ್ ಕಂಪನಿ (NARCL)ಯನ್ನು ಸ್ಥಾಪನೆ ಮಾಡಲಾಗಿತ್ತು. ಸದ್ಯ ಇವೆರಡೂ ಕಂಪನಿಗಳು ಸುಸ್ತಿ ಸಾಲ ವಸೂಲಿಯಲ್ಲಿ ತೊಡಗಿಕೊಂಡಿವೆ. ಈಗ ಸ್ಥಾಪನೆ ಮಾಡಲಾಗುತ್ತಿರುವ ಬ್ಯಾಡ್ ಬ್ಯಾಂಕ್ ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಂತ್ರಿಸಲಿದೆ.
ಬ್ಯಾಡ್ ಬ್ಯಾಂಕ್ ಎಂದರೇನು?
- ಬ್ಯಾಂಕಿನ ಸಾಲಗಾರರು ಪುನರಾವರ್ತಿತವಾಗಿ ತಮ್ಮ ಪಾವತಿಗಳಲ್ಲಿ ಡೀಫಾಲ್ಟ್ ಮಾಡಲು ಪ್ರಾರಂಭಿಸಿದಾಗ, ಸಾಲಗಳನ್ನು ‘ಕೆಟ್ಟ ಸಾಲಗಳು’ ಎಂದು ವರ್ಗೀಕರಿಸಲಾಗುತ್ತದೆ. ಮತ್ತು ಈ ಕೆಟ್ಟ ಸಾಲಗಳು ನಿರ್ವಹಿಸಬಹುದಾದ ಮಿತಿಗಳನ್ನು ಮೀರಿ ಹೆಚ್ಚಾದಾಗ, ಅವುಗಳನ್ನು ಸಾಮೂಹಿಕವಾಗಿ ನೋಡಿಕೊಳ್ಳಲು ಪ್ರತ್ಯೇಕ ಬ್ಯಾಂಕ್ ಅನ್ನು ರಚಿಸಬೇಕಾಗಬಹುದು. ಆ ಹೊಸ ಬ್ಯಾಂಕ್ ಅನ್ನು ಕೆಟ್ಟ ಬ್ಯಾಂಕ್ ಎಂದು ಕರೆಯಲಾಗುತ್ತದೆ.
ವಿಳಂಬವೇಕೆ?
- ಬ್ಯಾಡ್ ಬ್ಯಾಂಕ್‌ನಲ್ಲಿ, ಒಂದು ಸಂಸ್ಥೆ ಸಾಲಗಾರನ ಆಸ್ತಿ ವಸೂಲು ಮಾಡುತ್ತದೆ. ಹಾಗೂ ಇನ್ನೊಂದು ಸಂಸ್ಥೆ ಸಾಲ ನಿರ್ಣಯ ಮಾಡುತ್ತದೆ. ಇದಕ್ಕೆ ನಿಯಮಾವಳಿಗಲ್ಲಿ ಅವಕಾಶ ಇಲ್ಲ.ಇದನ್ನು ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸರ್ಕಾರಕ್ಕೆ ತಿಳಿಸಿದೆ. ಹೀಗಾಗಿ ಬ್ಯಾಡ್ ಬ್ಯಾಂಕ್ ಸ್ಥಾಪನೆ ವಿಳಂಬ ಆಗಲಿದೆ
- ಈಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸಲ್ಲಿಸಲಾಗಿರುವ ಪ್ರಸ್ತಾಪಿತ ಕರಡು ಪ್ರತಿಯಲ್ಲಿ, ರಾಷ್ಟ್ರೀಯ ಆಸ್ತಿ ಮರು ನಿರ್ಮಾಣ ಕಂಪನಿ ನಿಯಮಿತ ಬ್ಯಾಂಕ್‌ಗಳ ಸುಸ್ತಿ ಸಾಲದ ಆಸ್ತಿಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ. ಭಾರತೀಯ ಸಾಲ ನಿರ್ಣಯ ಕಂಪನಿ ನಿಯಮಿತ ಸಾಲ ನಿರ್ಣಯ ಮಾಡಲಿದೆ ಎಂದು ಹೇಳಲಾಗಿದೆ. ಆದರೆ ನಿಯಮಾವಳಿಗಲ್ಲಿ ಇದಕ್ಕೆ ಅವಕಾಶ ಇಲ್ಲದೇ ಇರುವುದರಿಂದ, ಬ್ಯಾಡ್ ಬ್ಯಾಂಕ್ ಸ್ಥಾಪನೆಗೆ ಆರ್‌ಬಿಐ ಅವಕಾಶ ಕೊಟ್ಟಿಲ್ಲ. ಹೀಗಾಗಿ ಬ್ಯಾಡ್ ಬ್ಯಾಂಕ್ ಸ್ಥಾಪನೆ ವಿಳಂಬವಾಗಲಿದೆ.
ರಾಷ್ಟ್ರೀಕೃತ ಬ್ಯಾಂಕ್‌ಗಳ ಪ್ರಸ್ತಾಪವೇನು ?
- ಬ್ಯಾಡ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನಿರಾಕರಣೆ ಹಿನ್ನೆಲೆ, ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತೊಂದು ಪ್ರಸ್ತಾಪವನ್ನು ಆರ್‌ಬಿಐನ ಮುಂದಿಟ್ಟಿದೆ. ಎನ್ಎಆರ್ಸಿಎಲ್ ಹಾಗೂ ಐಡಿಆರ್ಸಿಎಲ್ ನಡುವೆ ಏಜೆಂಟ್ ಒಬ್ಬರನ್ನು ನೇಮಿಸುವುದು. ಈ ಪ್ರಸ್ತಾವದನ್ವಯ, ಎನ್ಎಆರ್ಸಿಎಲ್, ಐಡಿಆರ್ಸಿಎಲ್ ನೊಂದಿಗೆ ಒಪ್ಪಂದ ಮಾಡಿಕೊಂಡು ಎನ್‌ಪಿಎ ನಿರ್ಣಯಕ್ಕೆ ಮೂರನೇ ಪಾರ್ಟಿಗೆ ಹೊರ ಗುತ್ತಿಗೆ ಕೊಡುವುದು. ಇದರಿಂದ ಐಡಿಆರ್ಸಿಎಲ್ ನೀಡುವ ನಿರ್ಣಯಗಳು ಎನ್ಎಆರ್ಸಿಎಲ್ ಮೇಲೆ ಅಲಂಬಿತವಾಗಿರುವುದಿಲ್ಲ.