Published on: October 25, 2022
ಬ್ರಿಟನ್ ನ ನೂತನ ಪ್ರಧಾನಿ ರಿಷಿ ಸುನಕ್
ಬ್ರಿಟನ್ ನ ನೂತನ ಪ್ರಧಾನಿ ರಿಷಿ ಸುನಕ್
ಸುದ್ದಿಯಲ್ಲಿ ಏಕಿದೆ?
ಬ್ರಿಟನ್ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಕನ್ಸರ್ವೇಟಿವ್ ಪಕ್ಷದ ಮುಖಂಡ ರಿಷಿ ಸುನಕ್ ಭಾರತದ ಮೊದಲ ಸಂಜಾತ ಹಾಗೂ ಯುಕೆಯ ಮೊದಲ ಹಿಂದೂ ಪ್ರಧಾನಿಯಾಗಿದ್ದಾರೆ.
ಮುಖ್ಯಾಂಶಗಳು
- ಇನ್ಫೋಸಿಸ್ ನ ನಾರಾಯಣ ಮೂರ್ತಿ-ಸುಧಾ ಮೂರ್ತಿ ಅವರ ಅಳಿಯನೂ ಆಗಿರುವ ರಿಷಿ ಸುನಕ್ ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿದ್ದಾರೆ.
- ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 45 ದಿನಗಳಲ್ಲೇ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು. ಇಂಗ್ಲೆಂಡ್ನಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಸಮಯದಲ್ಲಿ ಕನ್ಸರ್ವೇಟಿವ್ ಪಕ್ಷದ ಲಿಜ್ ಟ್ರಸ್ ಅಧಿಕಾರಕ್ಕೆ ಬಂದಿದ್ದರು. ಹೀಗಾಗಿ ಪ್ರಧಾನಿ ಪಟ್ಟದ ಜವಾಬ್ದಾರಿ ಇವರಿಗೆ ಸುಲಭದ ಹಾದಿಯಾಗಿರಲಿಲ್ಲ. ಇನ್ನು ಆರ್ಥಿಕ ಸುಧಾರಣೆ ಸಾಧ್ಯವಾಗದ ಕಾರಣ ಲಿಜ್ ಟ್ರಸ್ ರಾಜೀನಾಮೆ ನೀಡಬೇಕಾಯಿತು.
ರಿಷಿ ಸುನಕ್
- ಬ್ರಿಟನ್ ನೂತನ ಪ್ರಧಾನಿ 42ವರ್ಷದ ರಿಷಿ ಸುನಕ್ ಅವರ ಪೋಷಕರು ಭಾರತದ ಮೂಲದವರು. ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ 1960ರಲ್ಲಿ ವಲಸೆ ಹೋದರು. ಸುನಕ್ ಪೂರ್ವಿಕರು ಬ್ರಿಟಿಷ್ ಭಾರತದಿಂದ ಬಂದವರು. ಆದರೆ, ಅವರ ಜನ್ಮಸ್ಥಳ ಗುಜ್ರಾನ್ವಾಲಾ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದೆ ಎಂದು ಕೆಲವರು ಹೇಳುತ್ತಿದ್ದಾರೆ.
- ಸೌತಾಂಪ್ಟನ್ ಸುನಕ್ ಹುಟ್ಟಿದ ಸ್ಥಳವಾಗಿದೆ.
- ರಿಷಿ ಸುನಕ್ ಅವರು ವಿಂಚೆಸ್ಟರ್ ಕಾಲೇಜು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ವಿದ್ಯಾಭ್ಯಾಸ ಮುಗಿಸಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿ ನಂತರ, ಇನ್‌ವೆಸ್ಟ್ ಬ್ಯಾಂಕ್ ಕಂಪನಿಯೊಂದರಲ್ಲಿ ಅವರು ಅನಾಲಿಸ್ಟ್ ಆಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದಾರೆ. ಹೀಗೆ ವಿವಿಧ ಕಂಪನಿಗಳಲ್ಲಿ ಅವರು ಕೆಲಸ ಮಾಡಿದ್ದಾರೆ.
- ರಿಚ್ಮಂಡ್ ಕ್ಷೇತ್ರದಿಂದ 2015ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಚುನಾಯಿತರಾದರು. ನಂತರ 2017 ಹಾಗೂ 2019ರಲ್ಲಿ ಮತ್ತೆ ಸಂಸ್ಥೆದಾರಿ ಮೂರು ಭಾರಿ ಆಯ್ಕೆಯಾಗಿದ್ದರು. ಸಂಸತ್ತಿನಲ್ಲಿ ಭಗವದ್ಗೀತೆ ಮೇಲೆ ಯಾರ್ಕ್‌ಷೈರ್‌ನಿಂದ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿ ಬ್ರಿಟನ್‌ನ ಮೊದಲ ಸಂಸದರ ಗಾದಿಗೆ ಏರಿದ ಮೊದಲ ಭಾರತೀಯರು ಈ ರಿಷಿ ಸುನಕ್ ಅವರು.
- ಸಚಿವರಾಗಿ ಅನುಭವ ಹೊಂದಿರುವ ರಿಷಿ ಸುನಕ್ ಜುಲೈ 2019 ರಲ್ಲಿ ಸುನಕ್ ಅವರನ್ನು ಸರ್ಕಾರದ ಖಜಾನೆಗೆ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಜನವರಿ 2018 ರಲ್ಲಿ ಸ್ಥಳೀಯ ಸರ್ಕಾರದ ಸಚಿವರಾಗಿಯು ಅವರು ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಈ ಹಿಂದೆ ಬ್ರೀಟನ್ ದೇಶದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ರಿಷಿ ಸುನಕ್ ಮತ್ತವರ ಪತ್ನಿ ಅಕ್ಷತಾಮೂರ್ತಿ 222ನೇ ಅಗ್ರಸ್ಥಾನ ಅಲಂಕರಿಸಿದ್ದರು.