Published on: July 27, 2023
‘ಬ್ರ್ಯಾಂಡ್ ಬೆಂಗಳೂರು’ ಅಭಿವೃದ್ಧಿ
‘ಬ್ರ್ಯಾಂಡ್ ಬೆಂಗಳೂರು’ ಅಭಿವೃದ್ಧಿ
ಸುದ್ದಿಯಲ್ಲಿ ಏಕಿದೆ? ‘ಬ್ರ್ಯಾಂಡ್ ಬೆಂಗಳೂರು’ ಅಭಿವೃದ್ಧಿ ಉದ್ದೇಶದಿಂದ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯು (ಬಿಬಿಎಂಪಿ) ವರ್ಲ್ಡ್ ಡಿಸೈನ್ ಆರ್ಗನೈಷೇಷನ್ (ಡಬ್ಲ್ಯೂಡಿಒ) ಜತೆ ಒಪ್ಪಂದ ಮಾಡಿಕೊಂಡಿದೆ.
ಮುಖ್ಯಾಂಶಗಳು
- ‘ಡಬ್ಲ್ಯೂಡಿಒ ಸಂಸ್ಥೆಯು ನಗರದಲ್ಲಿ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳಿಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡಲಿದೆ. ಇವರು ನೀಡುವ ಸಲಹೆಗಳನ್ನು ಆಧರಿಸಿ, ಜಿಲ್ಲಾ ಕೇಂದ್ರಗಳು ಹಾಗೂ ತಾಲ್ಲೂಕು ಕೇಂದ್ರಗಳಿಗೆ ರೂಪ ನೀಡುವ ಗುರಿಯನ್ನು ಹೊಂದಲಾಗಿದೆ.
- ‘ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವ ಕೆಲವು ಪ್ರದೇಶಗಳಲ್ಲಿ ಅನಿಲ ಹಾಗೂ ತ್ಯಾಜ್ಯ ಇಂಧನ ಉತ್ಪಾದನೆ ಯೋಜನೆಗಳ ಬಗ್ಗೆ ಗಮನಹರಿಸಲಾಗುತ್ತಿದೆ. ಈ ಬಗ್ಗೆ ಅಧ್ಯಯನ ಮಾಡಲು ಮುಂಬೈ, ದೆಹಲಿ, ಇಂದೋರ್ಗಳಿಗೆ ಭೇಟಿ ನೀಡಲಾಗುವುದು.
ಉದ್ದೇಶ:
- ಬೆಂಗಳೂರನ್ನು ವಾಸಯೋಗ್ಯ ನಗರವಾಗಿ ನಿರ್ಮಿಸುವುದು.
- ಬೆಂಗಳೂರನ್ನು ಜಾಗತಿಕ ನಗರವಾಗಿ ಮಾಡಲು ಸರ್ಕಾರದ ಬದ್ಧತೆ, ಯಾವುದೇ ಯೋಜನೆಗೆ ಅದರದೇ ಆದ ಯೋಜನೆ ರೂಪಿಸಲು, ಈಗಿರುವ ಬೆಂಗಳೂರಿನಲ್ಲಿ ಯಾವ ರೀತಿಯ ಬದಲಾವಣೆ ಮಾಡಬಹುದು, ಮುಂದೆ ಬೆಳೆಯಲಿರುವ ಬೆಂಗಳೂರನ್ನು ಹೇಗೆ ರೂಪಿಸಬೇಕು, ಹೊಸ ಸ್ಯಾಟಲೈಟ್ ಟೌನ್ ಹೇಗೆ ರೂಪಿಸಬೇಕು ಎಂಬ ಬಗ್ಗೆ ಸಲಹೆ ನೀಡಲು ಈ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.
ವರ್ಲ್ಡ್ ಡಿಸೈನ್ ಆರ್ಗನೈಸೇಶನ್ (WDO)
- ಜಾಗತಿಕವಾಗಿ ಗುರುತಿಸಲ್ಪಟ್ಟ ಸರ್ಕಾರೇತರ ಸಂಸ್ಥೆಯಾಗಿದ್ದು, ಹಿಂದೆ ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಸೊಸೈಟೀಸ್ ಆಫ್ ಇಂಡಸ್ಟ್ರಿಯಲ್ ಡಿಸೈನ್ ಎಂದು ಕರೆಯಲಾಗುತ್ತಿತ್ತು, WDO ಪ್ರಪಂಚದಾದ್ಯಂತ ಉತ್ತಮ ವಿನ್ಯಾಸವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
- ಸಂಸ್ಥೆಯು ವಿಶ್ವದ ಅತ್ಯುತ್ತಮ ವಾಸ್ತುಶಿಲ್ಪಿಗಳನ್ನು ಹೊಂದಿದೆ.
- ಈ ಸಂಸ್ಥೆಯನ್ನು 1957 ರಲ್ಲಿ ಸ್ಥಾಪಿಸಲಾಯಿತು.
- ಕೇಂದ್ರ ಕಚೇರಿ : ಕೆನಡಾ,