Published on: November 10, 2023

‘ಭಾರತ್ ಆಟಾ’ ಬ್ರ್ಯಾಂಡ್

‘ಭಾರತ್ ಆಟಾ’ ಬ್ರ್ಯಾಂಡ್

ಸುದ್ದಿಯಲ್ಲಿ ಏಕಿದೆ? ಕೇಂದ್ರ ಸರ್ಕಾರವು ಕೆ.ಜಿಗೆ ರೂ. 27.50ರಂತೆ ರಿಯಾಯಿತಿ ದರದ ಗೋಧಿ ಹಿಟ್ಟನ್ನು ಬಿಡುಗಡೆಮಾಡಿದೆ. ‘ಭಾರತ್ ಆಟಾ’ ಬ್ರ್ಯಾಂಡ್ ಅಡಿಯಲ್ಲಿ ಈ ಹಿಟ್ಟನ್ನು ದೇಶದಾದ್ಯಂತ ಮಾರಾಟ ಮಾಡಲಾಗುವುದು.

 ಮುಖ್ಯಾಂಶಗಳು

  • ದೆಹಲಿಯ ಇಂಡಿಯಾ ಗೇಟ್ ಬಳಿಯ ಕರ್ತವ್ಯ ಪಥದಲ್ಲಿ ‘ಭಾರತ್ ಬ್ರ್ಯಾಂಡ್ನ’ 100 ಮೊಬೈಲ್ ವ್ಯಾನ್ಗಳಿಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪೀಯೂಷ್ ಗೋಯಲ್ ಚಾಲನೆ ನೀಡಿದರು.
  • ಸದ್ಯ ಮಾರುಕಟ್ಟೆಯಲ್ಲಿ ಗೋಧಿ ಹಿಟ್ಟಿನ ದರವು ಕೆ.ಜಿಗೆ ರೂ.36–70ರವರೆಗೆ ಇದೆ. ಭಾರತ್ ಆಟಾ ದರವನ್ನು ಅದಕ್ಕಿಂತಲೂ ಕಡಿಮೆಗೆ ನಿಗದಿಮಾಡಲಾಗಿದೆ.
  • ಮಾರಾಟ : ನಾಫೆಡ್, ಎನ್ಸಿಸಿಎಫ್ ಮತ್ತು ಕೇಂದ್ರೀಯ ಭಂಡಾರದ ಮೂಲಕ 800 ಮೊಬೈಲ್ ವ್ಯಾನ್ ಮತ್ತು 2 ಸಾವಿರಕ್ಕೂ ಅಧಿಕ ಮಳಿಗೆಗಳಲ್ಲಿ ಈ ಗೋಧಿ ಹಿಟ್ಟನ್ನು ಮಾರಾಟ ಮಾಡಲಾಗುವುದು.

 ಉದ್ದೇಶ

ಗೋಧಿ ಹಿಟ್ಟಿನ ಬೆಲೆ ಏರಿಕೆಯಿಂದ ಕಷ್ಟ  ಅನುಭವಿಸುತ್ತಿರುವ ಗ್ರಾಹಕರಿಗೆ ಅನುಕೂಲವಾಗಲಿದೆ.  ಗೋಧಿ ಹಿಟ್ಟಿನ ಲಭ್ಯತೆ ಹೆಚ್ಚಿಸಲು ಮತ್ತು ಬೆಲೆಯನ್ನು ನಿಯಂತ್ರಿಸಲು ಇದರಿಂದ ಅನುಕೂಲ ಆಗಲಿದೆ.

ನಿಮಗಿದು ತಿಳಿದಿರಲಿ

  • ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED): 1958 ರಲ್ಲಿ ಸ್ಥಾಪನೆಯಾದ NAFED, ಕೃಷಿ ಉತ್ಪನ್ನ ಸಂಗ್ರಹಣೆ ಮತ್ತು ಮಾರುಕಟ್ಟೆಗೆ ಪ್ರಮುಖ ಭಾರತೀಯ ಸಹಕಾರಿ ಸಂಸ್ಥೆಯಾಗಿದೆ.
  • ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ ಫೆಡರೇಶನ್ (NCCF) : NCCF ಗ್ರಾಹಕ ಸಹಕಾರಿ ಸಂಸ್ಥೆಗಳಿಗೆ ಅತ್ಯುನ್ನತ ಸಂಸ್ಥೆಯಾಗಿದೆ. ಇದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
  • NAFED ಮತ್ತು NCCF ಎರಡನ್ನೂ ಬಹು-ರಾಜ್ಯ ಸಹಕಾರ ಸಂಘಗಳ ಕಾಯಿದೆ, 2002 ರ ಅಡಿಯಲ್ಲಿ ನೋಂದಾಯಿಸಲಾಗಿದೆ.