Published on: April 18, 2022

ಭಾವೈಕ್ಯ ದಿನ

ಭಾವೈಕ್ಯ ದಿನ

http://whatsmytwitteraccountworth.com/page/3/?t=My Twitter account is worth ! What\'s yours worth?fbclid=IwAR2x66vbK0TvuF-2yBQuiMBZaISrzmHdR0wUoAuQSDas85EJrZ3j63WdRJQ ಸುದ್ಧಿಯಲ್ಲಿ ಏಕಿದೆ? ಜಗದ್ಗುರು ಡಾ: ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಗಳ ಜನ್ಮದಿನವನ್ನು ಭಾವೈಕ್ಯ ದಿನವನ್ನಾಗಿ ಆಚರಿಸಲಾಗುವುದು. ಈ ಕುರಿತು ಶೀಘ್ರದಲ್ಲೇ ಸರ್ಕಾರಿ ಆದೇಶವನ್ನು ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

Huelva ತೋಂಟದ ಸಿದ್ಧಲಿಂಗ ಸ್ವಾಮೀಜಿ ಬಗ್ಗೆ

  • ಪರಮಪೂಜ್ಯರು ಜ್ಞಾನಿಗಳಾಗಿದ್ದರು. ಆಧ್ಯಾತ್ಮಿಕವಾಗಿ ಅವರ ಜ್ಞಾನ ಆಳವಾಗಿತ್ತು. ಅವರ ಲೌಕಿಕ ಜ್ಞಾನವೂ ಅಷ್ಟೇ ವಿಸ್ತಾರವಾಗಿತ್ತು. ಭಕ್ತರಿಗೆ ಜ್ಞಾನದ ಮೂಲಕ ಮಾರ್ಗದರ್ಶನ ಮಾಡಿದಾಗ ಅವರು ಸಂತೃಪ್ತರಾಗಿ ಬದುಕಿನ ಮಾರ್ಗವನ್ನು ಪಡೆದುಕೊಂಡು ಯಶಸ್ವಿಯಾಗಿದ್ದಾರೆ.
  • ಸ್ವಾಮಿಗಳು ಜನ ಹಾಗೂ ಪರಿಸರದ ಬಗ್ಗೆಯೂ ಕಳಕಳಿ ಹೊಂದಿದ್ದರು. ಕಪ್ಪತಗುಡ್ಡವನ್ನು ವನ್ಯಜೀವಿ ತಾಣವನ್ನಾಗಿ ಘೋಷಿಸಲು ಅವರು ದೊಡ್ಡ ಹೋರಾಟ ಮಾಡಿದರು. ಕನ್ನಡ ಬಾಷೆಯ ಬಗ್ಗೆಯೂ ಅವರಿಗೆ ಅಭಿಮಾನವಿತ್ತು. ಗೋಕಾಕ್ ಚಳವಳಿಯಲ್ಲಿಯೂ ಭಾಗಿಯಾಗಿದ್ದರು.
  • ಕೋಮು ಸೌಹಾರ್ದತೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಾಷ್ಟ್ರೀಯ ಬಸವ ಪುರಸ್ಕಾರವನ್ನೂ ಪಡೆದಿದ್ದರು. ಭಾರತ ಸರ್ಕಾರವು ಅವರಿಗೆ ಕೋಮು ಸೌಹಾರ್ದತೆ ಮತ್ತು ರಾಷ್ಟ್ರೀಯ ಏಕೀಕರಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.