Published on: February 3, 2024

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI) 2023

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI) 2023

ಸುದ್ದಿಯಲ್ಲಿ ಏಕಿದೆ? ಇತ್ತೀಚೆಗೆ, 2023 ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI) 2023 ಅನ್ನು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ನಿಂದ ಬಿಡುಗಡೆ ಮಾಡಲಾಗಿದೆ, ಇದು ಸಾರ್ವಜನಿಕ ವಲಯದ ಭ್ರಷ್ಟಾಚಾರವನ್ನು ನಿಭಾಯಿಸುವಲ್ಲಿ ಹೆಚ್ಚಿನ ದೇಶಗಳು ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ ಎಂದು ವರದಿ ಮಾಡಿದೆ.

ಮುಖ್ಯಾಂಶಗಳು

CPI ವಿಶ್ವದಾದ್ಯಂತ 180 ದೇಶಗಳು ಮತ್ತು ಪ್ರಾಂತ್ಯಗಳನ್ನು ಸಾರ್ವಜನಿಕ ವಲಯದ ಭ್ರಷ್ಟಾಚಾರದ ಗ್ರಹಿಸಿದ ಮಟ್ಟಗಳ ಮೂಲಕ ಶ್ರೇಣೀಕರಿಸಿದೆ, 0 (ಅತ್ಯಂತ ಭ್ರಷ್ಟ) ನಿಂದ 100 (ಅತ್ಯಂತ ಪ್ರಾಮಾಣಿಕ) ಪ್ರಮಾಣದಲ್ಲಿ ಸ್ಕೋರ್ ಗಳನ್ನು ನೀಡಿದೆ.

CPI 2023 ರ  ಮುಖ್ಯಾಂಶಗಳು:

ಅಗ್ರ ಮೂರು ದೇಶಗಳು: 90 ಅಂಕಗಳೊಂದಿಗೆ ಡೆನ್ಮಾರ್ಕ್ ಸತತ ಆರನೇ ವರ್ಷ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದೆ. ಫಿನ್ಲ್ಯಾಂಡ್ ಮತ್ತು ನ್ಯೂಜಿಲೆಂಡ್ ಕ್ರಮವಾಗಿ 87 ಮತ್ತು 85 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿವೆ.

ಉತ್ತಮ ಕಾರ್ಯನಿರ್ವಹಣೆಯ ನ್ಯಾಯ ವ್ಯವಸ್ಥೆಗಳ ಕಾರಣದಿಂದಾಗಿ, ಈ ದೇಶಗಳು ಕಾನೂನು ಸೂಚ್ಯಂಕದಲ್ಲಿ ಟಾಪ್ ಸ್ಕೋರರ್‌ಗಳಲ್ಲಿ ಸೇರಿವೆ.

ಅತ್ಯಂತ ಕೊನೆಯ ಸ್ಥಾನದಲ್ಲಿರುವ ದೇಶಗಳು: ಸೊಮಾಲಿಯಾ, ವೆನೆಜುವೆಲಾ, ಸಿರಿಯಾ, ದಕ್ಷಿಣ ಸುಡಾನ್ ಮತ್ತು ಯೆಮೆನ್, ಸೂಚ್ಯಂಕದಲ್ಲಿ ಕೆಳಗಿನ ಸ್ಥಾನಗಳನ್ನು ಪಡೆದುಕೊಂಡಿವೆ.

ಭಾರತದ ಶ್ರೇಯಾಂಕ ಮತ್ತು ಸ್ಕೋರ್:

CPI 2023 ರಲ್ಲಿ ಭಾರತವು 180 ದೇಶಗಳಲ್ಲಿ 93 ನೇ(39 ಅಂಕಗಳೊಂದಿಗೆ) ಸ್ಥಾನದಲ್ಲಿದೆ. 2022ಕ್ಕೆ ಹೋಲಿಸಿದರೆ 8 ಸ್ಥಾನಗಳನ್ನು ಕಳೆದುಕೊಂಡಿದೆ.

2022ರಲ್ಲಿ ಭಾರತ 85ನೇ(40 ಅಂಕಗಳೊಂದಿಗೆ) ಸ್ಥಾನದಲ್ಲಿತ್ತು.

ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್

ಸ್ಥಾಪನೆ: 1993

ಪ್ರಧಾನ ಕಚೇರಿ: ಜರ್ಮನಿಯ ಬರ್ಲಿನ್‌

ಅಂತರರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾಗಿದೆ