Published on: November 4, 2022
ಮಂಗಳ ಗ್ರಹದಲ್ಲಿ ಮಂಜು
ಮಂಗಳ ಗ್ರಹದಲ್ಲಿ ಮಂಜು

ಸುದ್ದಿಯಲ್ಲಿ ಏಕಿದೆ?
ಕೆಲವು ದಿನಗಳ ಹಿಂದೆ ಮಂಗಳಗ್ರಹ ಗೃಹಕ್ಕೆ ಉಲ್ಕೆಯೊಂದು ವೇಗದಿಂದ ಅಪ್ಪಳಿಸಿತು. ಅದು ಅಪ್ಪಳಿಸಿದ ರಭಸಕ್ಕೆ ಮಂಗಳನ ಅಂಗಳದ ಮೇಲೆ ಭೂಕಂಪನದ ಅಲೆಗಳೇ ಎದ್ದವು. ಬರೋಬ್ಬರಿ 490 ಅಡಿ ಅಗಲದ ಕುಳಿ ಉಂಟಾಯಿತು ಆ ಉಲ್ಕೆಯು ಅಪ್ಪಳಿಸಿದಾಗ ನೆಲದಿಂದ ಮೇಲೆದ್ದ ಮಣ್ಣಿನ ಜೊತೆಗೆ ಮಂಜಿನ(ಹಿಮ) ಕಣಗಳೂ ಹೊರ ಚಿಮ್ಮಿದವು.
ಮುಖ್ಯಾಂಶಗಳು
- ಮಂಗಳಗ್ರಹದ ಅಂಗಳದ ಮೇಲಿನ ಕಂಪನಗಳನ್ನು ಅಧ್ಯಯನ ಮಾಡಲೆಂದೇ ‘ನಾಸಾ’ ಪ್ರತಿಷ್ಠಾಪಿಸಿರುವ ‘ಇನ್ಸೈಟ್’ ಸಾಧನವು ಈ ಅಲೆಗಳನ್ನು ಗಮನಿಸಿ, ಮಂಗಳನನ್ನು ಪರಿಭ್ರಮಿಸುತ್ತಿರುವ ‘ಮಾರ್ಸ್ ರೀಕಾನ್ಸಾನ್ಸ್ ಆರ್ಬಿಟರ್’ ಉಪಗ್ರಹಕ್ಕೆ ರವಾನಿಸಿತು.
- ಉಪಗ್ರಹವು ತನಗೆ ಸಿಕ್ಕ ಸೂಚನೆಗಳನ್ನು ಆಧಾರವಾಗಿ ಇರಿಸಿಕೊಂಡು ಕೂಡಲೇ ಉಲ್ಕೆ ಅಪ್ಪಳಿಸುವ ಘಟನೆಯ ಛಾಯಾಚಿತ್ರಗಳನ್ನು ಸೆರೆಹಿಡಿದಿದೆ. ಈ ಎಲ್ಲ ಮೇಲಿನ ಪ್ರಕ್ರಿಯೆಗಳೂ ಮಾನವ ಸೂಚನೆಗಳಿಲ್ಲದೆ ತನಗೆ ತಾನೇ ಯಾಂತ್ರಿಕವಾಗಿ ಆದಂಥವು.
- ಆ ಉಲ್ಕೆಯು ಅಪ್ಪಳಿಸಿದಾಗ ಮಂಗಳನ ಅಂಗಳದ ಮೇಲೆ ನಾಲ್ಕರ ತೀವ್ರತೆಯಲ್ಲಿ ‘ಮಾರ್ಸ್ಕ್ವೇಕ್’ ಉಂಟಾಯಿತು ಈಗ ಸಿಕ್ಕಿರುವ ಮಾದರಿಯ ಕುಳಿಯ ಚಿತ್ರ ಇದುವರೆಗೂ ‘ನಾಸಾ’ಗೆ ಸಿಕ್ಕಿರಲಿಲ್ಲ.
ಮಂಗಳ ಗ್ರಹದಲ್ಲಿ ನೀರಿದೆಯೇ?
- ಚಿಮ್ಮಿರುವ ಹಿಮವು ಛಾಯಾಚಿತ್ರಗಳಲ್ಲಿ ದಾಖಲಾಯಿತು ಮಂಗಳನ ನೆಲದೊಳಗೆ ನೀರು ಇರಬಹುದು ಎಂಬುದು ಒಂದು ಪ್ರಮುಖವಾದ ಊಹೆ ಅಥವಾ ಸಿದ್ಧಾಂತ. ಅದಕ್ಕೆ ಕಾರಣ ಇಷ್ಟೇ , ಮಂಗಳನ ಮೇಲ್ಮೈ ಬಹುತೇಕ ಕಬ್ಬಿಣದಿಂದ ಕೂಡಿದೆ.
- ಮಂಗಳನ ವಾತಾವರಣ ಬಹು ತೆಳುವಾಗಿರುವ ಕಾರಣ ಸೂರ್ಯನ ಕಿರಣಗಳು ನೇರವಾಗಿ ನೆಲದ ಮೇಲೆ ಬಿದ್ದು ಉಷ್ಣಾಂಶ ಹೆಚ್ಚುತ್ತದೆ. ಹಾಗಾಗಿ, ಮಂಗಳನ ಮೇಲ್ಮೈ ಮೇಲೆ ನೀರು ಕಾಲಾಂತರದಲ್ಲಿ ಸಂಪೂರ್ಣವಾಗಿ ಆವಿಯಾಗಿ ಹೋಗಿದೆ ಎನ್ನುವುದು ವಾದ.
- ಆದರೆ, ಸೂರ್ಯನ ಶಾಖ ಮುಟ್ಟದ ನೆಲದಾಳದಲ್ಲಿ ನೀರು ಇನ್ನೂ ಇದೆ ಎಂಬುದು ವಾದ. ಅಲ್ಲದೇ, ‘ನಾಸಾ’ ಮಂಗಳನ ಅಂಗಳದ ಮೇಲೆ ಇಳಿಸಿರುವ ಅನೇಕ ವಾಹನ, ಸಾಧನಗಳು ನೀರು ನೆಲದಲ್ಲಿ ಇವೆ ಎಂಬ ವಾದವನ್ನು ಪುಷ್ಟೀ ಕರಿಸಿ ದತ್ತಾಂಶವನ್ನು ನೀಡಿವೆ.
- ಆದರೆ, ಮಂಗಳಗ್ರಹದ ಧ್ರುವ ಭಾಗಗಳಲ್ಲಿ ಬೆಳ್ಳನೆ ಹಿಮದಂತೆ ಕಾಣುವ ರಚನೆಗಳಿವೆ. ಅದೇನೆಂದು ಸಂಶೋಧಿಸಿದಾಗ, ಅದು ನೀರಿನಿಂದ ಉಂಟಾದ ಹಿಮವಲ್ಲ, ಬದಲಿಗೆ, ಅದು ಇಂಗಾಲದ ಡೈ ಆಕ್ಸೈ ಡ್ ಘನೀಭವಗೊಂಡು ಹಿಮವಾಗಿರುವುದು ಎಂಬ ಅಂಶ ಬೆಳಕಿಗೆ ಬಂದಿತು.
- ಹಾಗಾಗಿ, ಈಗ ‘ನಾಸಾ’ ಸೆರೆಹಿಡಿದಿರುವ ಛಾಯಾಚಿತ್ರದಲ್ಲಿ ಕಾಣುವ ಬೆಳ್ಳಗಿನ ಹಿಮವು ಇಂಗಾಲದ ಡೈ ಆಕ್ಸೈ ಡ್ ಇರಬಹುದೇ ಅಥವಾ ನೀರೇ ಹಿಮವಾಗಿದೆಯೇ ಎನ್ನುವುದು ಇನ್ನೂ ದೃಢಪಡಬೇಕಿದೆ
- ಮಂಗಳನ ಅಂಗಳದ ಮೇಲೆ ನೀರು ಹರಿದಿರುವ, ನದಿಗಳಿದ್ದ ಕುರುಹುಗಳು ಸಾಕಷ್ಟು ಸಿಕ್ಕಿವೆ.