Published on: November 15, 2023
ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ
ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ
ಸುದ್ದಿಯಲ್ಲಿ ಏಕಿದೆ? ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ನವೆಂಬರ್ 14 ರಿಂದ ಜನವರಿ 24, 2024 ರವರೆಗೆ ಮಕ್ಕಳ ಸ್ನೇಹಿ ಮತ್ತು ಮಕ್ಕಳ ಸುರಕ್ಷಿತ ಪಂಚಾಯಿತಿ ಹಿನ್ನೆಲೆಯಲ್ಲಿ ಒಂದು ದಿನ ಮಕ್ಕಳ ಗ್ರಾಮಸಭೆ ಆಯೋಜಿಸಲಾಗುತ್ತದೆ.
ಮುಖ್ಯಾಂಶಗಳು
- ಮಕ್ಕಳಿಗೆ ಸ್ಪಂದಿಸುವ ಗ್ರಾಮ ಪಂಚಾಯತಿ ಅಭಿಯಾನಕ್ಕೆ 10 ವಾರದ ಕಾರ್ಯಕ್ರಮ ರೂಪಿಸಿದ್ದು, ಈ 10 ವಾರದಲ್ಲಿ ಮಕ್ಕಳ ಜನನ ನೊಂದಣಿ ಮತ್ತು ಜನನ ಪ್ರಮಾಣ ಪತ್ರಗಳ ವಿತರಣೆ, ಪೌಷ್ಟಿಕ ಆಹಾರ ಕುರಿತು ಮಾರ್ಗದರ್ಶನ, ಜಾಗೃತಿ, ಮಕ್ಕಳಿಗೆ ಚುಚ್ಚು ಮದ್ದು ಪ್ರಾಮುಖ್ಯತೆ, ಮಾನಸಿಕ ಆರೋಗ್ಯ ಸಂಬಂಧಿತ ಕಾರ್ಯಕ್ರಮ ಯೋಜಿಸಲಾಗುತ್ತದೆ.
ಉದ್ದೇಶ
- ಮಕ್ಕಳ ಸರ್ವಾಂಗೀಣ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಅಭಿಯಾನ ನಡೆಯಲಿದೆ. ಶಾಲಾ ಮಕ್ಕಳ ಅಭಿವೃದ್ಧಿಯ ಅಂಕಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹಾಗೂ ಮಕ್ಕಳ ಸ್ನೇಹಿ ಮತ್ತು ಮಕ್ಕಳ ಸುರಕ್ಷಿತ ಪಂಚಾಯತ್ ಗಳನ್ನಾಗಿಸಲು ಮಕ್ಕಳ ಪಂಚಾಯತ್ ಅಭಿಯಾನವನ್ನು ಆರಂಭಿಸಲಾಗಿದೆ.
ಅಭಿಯಾನದ ವಿಷಯಗಳು
- ಭೇಟಿ ಬಚಾವೋ ಭೇಟಿ ಪಡಾವೋ ಯೋಜನೆಯಡಿ ಕನ್ಯಾ ಶಿಕ್ಷಾ ಪ್ರವೇಶ್ ಉತ್ಸವ್ ಅಂಗವಾಗಿ ಶಾಲೆಯಿಂದ ಹೊರಗುಳಿದ 11-14 ವರ್ಷ ವಯಸ್ಸಿನ ಪ್ರಾಯಪೂರ್ವ ಬಾಲಕಿಯರ ಪಟ್ಟಿ ಸಿದ್ಧಪಡಿಸಿ ಮರಳಿ ಶಾಲೆಗೆ ದಾಖಲಿಸಲು ಕ್ರಮಕೈಗೊಳ್ಳುವುದು.
- ಶಾಲೆಯಿಂದ ಹೊರಗುಳಿದ 11-14 ವರ್ಷ ವಯಸ್ಸಿನ ಪ್ರಾಯದ ಬಾಲಕಿಯರ ಪಟ್ಟಿ ಮಾಡಿ ವಯಸ್ಸಿಗನುಗುಣವಾಗಿ ವಿಶೇಷ ತರಬೇತಿ ಮತ್ತು ಕಲಿಕೆಗೆ ಕ್ರಮವಹಿಸಬೇಕು.
- ಶಾಲೆಯಿಂದ ಹೊರಗುಳಿದ 14-18 ವರ್ಷ ವಯಸ್ಸಿನ ಪ್ರಾಯಪೂರ್ವ ಬಾಲಕಿಯರನ್ನು ಕೌಶಲಾಭಿವೃದ್ಧಿ, ತರಬೇತಿ ಅಥವಾ ತೆರೆದ ಶಾಲೆಗಳಿಗೆ ದಾಖಲಿಸಲು ಕ್ರಮವಹಿಸಲಾಗುತ್ತದೆ.