Published on: November 5, 2022
ಮಣ್ಣು ರಹಿತ ಕೃಷಿ ಪದ್ಧತಿ
ಮಣ್ಣು ರಹಿತ ಕೃಷಿ ಪದ್ಧತಿ
ಸುದ್ದಿಯಲ್ಲಿ ಏಕಿದೆ?
ಕೃಷಿ ಮೇಳ-2022ರಲ್ಲಿ ಮಣ್ಣು ರಹಿತ ಕೃಷಿ ಪದ್ಧತಿಯ ಪ್ರಾತ್ಯಕ್ಷಿತೆ ನೀಡಲಾಯಿತು.
- ಮಣ್ಣು ರಹಿತ ಕೃಷಿ ಪದ್ಧತಿಯ ವಿಧಗಳು: ಹೈಡ್ರೋಪೋನಿಕ್ಸ್, ಅಕ್ವಪೋನಿಕ್ಸ್ ಮತ್ತು ಏರೋಪೋನಿಕ್ಸ್ ಇವುಗಳಲ್ಲಿ ಹೈಡ್ರೋಪೋನಿಕ್ಸ್ ಜನಪ್ರಿಯವಾಗಿದೆ. ಕಾರಣ ಈ ವಿಧಾನದಲ್ಲಿ ಸಂಪನ್ಮೂಲಗಳ ಸಮರ್ಥ ನಿರ್ವಹಣೆ ಮತ್ತು ಆಹಾರ ಉತ್ಪಾದನೆ ಮಾಡಬಹುದಾಗಿದೆ.
ಹೈಡ್ರೋಫೋನಿಕ್ಸ್ ತಂತ್ರಜ್ಞಾನ :
- ಹೈಡ್ರೋಫೋನಿಕ್ಸ್ ಎನ್ನುವುದು ಪೌಷ್ಟಿಕಾಂಶದ ದ್ರಾವಣಗಳಲ್ಲಿ ಸಸ್ಯಗಳನ್ನು ಬೆಳೆಸುವ ಒಂದು ವಿಧಾನವಾಗದೆ.
- ಹೈಡ್ರೋಫೋನಿಕ್ಸ್ ಪದವು ಗ್ರೀಕ್ ಪದಗಳಾದ ಹೈಡೋ ಎಂದರೆ ನೀರು ಮತ್ತು ಪೊಣೊಸ್ ಎಂದರೆ ಶ್ರಮ ಪದಗಳಿಂದ ಪಡೆಯಲಾಗಿದೆ.
- ಯಾವ ಪದಾರ್ಥಗಳ ಬಳಕೆ : ಇದರಲ್ಲಿ ಯಾಂತ್ರಿಕ ಬೆಂಬಲವನ್ನು ಒದಗಿಸಲು ಜಡ ಮಾಧ್ಯಮಗಳಾದ ಜಲ್ಲಿ, ವೇರ್ಮಿಕ್ಯುಲೈಟ್, ಪೀಟ್ ಪಾಚಿ, ಗರಗಸ ಧೂಳು, ಕಾಯಿರ್ ಧೂಳು, ತೆಂಗಿನ ನಾರು, ರಾಕ್ ವೂಲ್ ನಂತಹ ಪದಾರ್ಥಗಳನ್ನು ಬಳಸಬಹುದಾಗಿದೆ.
- ಹೆಚ್ಚಿನ ಹೈಡ್ರೋಪೋನಿಕ್ ವ್ಯವಸ್ಥೆಗಳಲ್ಲಿ ಸಸ್ಯಗಳ ಅಗತ್ಯಕ್ಕೆ ತಕ್ಕ ಹಾಗೆ ನೀರು, ಬೆಳಕು, ಮತ್ತು ಪೋಷಕಾಂಶಗಳನ್ನು ಒದಗಿಸಲು ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಯಿದೆ.
ಅಕ್ವಾಫೋನಿಕ್ಸ್
- ಸರಳವಾಗಿ ಮೀನು ಸಾಕಣೆ ಜೊತೆಯಲ್ಲಿ ಗಿಡಗಳನ್ನು ಬೆಳೆಸುವುದಕ್ಕೆ ಅಕ್ವಾಫೋನಿಕ್ಸ್ ಎನ್ನುತ್ತಾರೆ. ಮೂಲತಃ ಮೀನುಸಾಕಾಣಿಕೆಯ ಮುಂದುವರಿದ ಭಾಗವಾಗಿ ಅಭಿವೃದ್ಧಿ ಹೊಂದಿದ ಈ ತಂತ್ರಜ್ಞಾನ ಅಮೆರಿಕಾದ ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಡಾ. ಜೇಮ್ಸ್ ರಾಕಿ ಎಂಬುವವರಿಂದ ಬಹಳಷ್ಟು ಸುಧಾರಣೆಗೆ ಒಳಪಟ್ಟಿದೆ.
- ಬೆಳೆಸುವ ಪದ್ಧತಿ ವಿಧಾನ :ಇಲ್ಲಿ ಒಂದು ಟ್ಯಾಂಕಿನಲ್ಲಿ ಮೀನನ್ನು ಬೆಳೆಸುತ್ತಾರೆ. ಮೀನಿನ ತ್ಯಾಜ್ಯಯುಕ್ತ ಪೋಷಕಾಂಶಗಳಿಂದ ಕೂಡಿದ ನೀರನ್ನು ಇನ್ನೊಂದು ಕಲ್ಲು-ಜಲ್ಲಿ ತುಂಬಿದ ಟ್ರೇಯೊಳಗೆ ಹಾಯಿಸುತ್ತಾರೆ. ಈ ಟ್ರೇಯಲ್ಲಿ ಗಿಡಗಳನ್ನು ಬೆಳೆಸುತ್ತಾರೆ.
- ಸಾಧಾರಣವಾಗಿ ಈ ವಿಧಾನದಲ್ಲಿ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಟ್ರೇಯೊಳಗೆ ನೀರನ್ನು ಹಾಯಿಸಿದಾಗ ಬ್ಯಾಕ್ಟೀರಿಯಾಗಳಿಂದ ನೀರಿನಲ್ಲಿರುವ ಅಮೋನಿಯ ನೈಟ್ರೇಟ್ ಆಗಿ ಪರಿವರ್ತನೆ ಹೊಂದಿ ಸಸ್ಯಗಳಿಗೆ ಪೋಷಕಾಂಶವಾಗಿ ಒದಗುತ್ತದೆ. ಈ ಪ್ರಕ್ರಿಯೆಯಲ್ಲಿ ನೀರು ಸ್ವಚ್ಛವಾಗುತ್ತದೆ. ಘನತ್ಯಾಜ್ಯಗಳು ಕಲ್ಲುಗಳಲ್ಲಿ ತಡೆಹಿಡಿಯಲ್ಪಡುತ್ತವೆ. ನಿರ್ಮಲವಾದ ನೀರು ಪುನಃ ಮೀನಿನ ಟ್ಯಾಂಕಿಗೆ ಸೇರುತ್ತದೆ.
- ಈ ಚಕ್ರೀಯ ಪ್ರಕ್ರಿಯೆ ಆಗುತ್ತಲೇ ಇರುತ್ತದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಸಂಶೋಧನಾ ಕೇಂದ್ರಗಳಲ್ಲಿ ಮೇವಿನ ಬೆಳೆಗಳನ್ನು ಈ ವಿಧಾನದಲ್ಲಿ ಬೆಳೆಯುವ ಪ್ರಯತ್ನಗಳು ನಡೆಯುತ್ತಿವೆ
- ಒಟ್ಟಿನಲ್ಲಿ ಕಡಿಮೆ ಪ್ರದೇಶದಲ್ಲಿ ಹೆಚ್ಚು ಉತ್ಪಾದನೆ ಗುರಿ ಹಾಗೂ ಮರುಬಳಕೆ ಸಾಧ್ಯತೆಯುಳ್ಳ ಇಂತಹ ತಂತ್ರಜ್ಞಾನಗಳು ಹಸಿರು ಬೆಳೆಸಲು ಸಹಕಾರಿ.
ಏರೋಪೋನಿಕ್ಸ್ :
- ಮಣ್ಣಿನಿಲ್ಲದೆ ಸಸ್ಯಗಳನ್ನು ಬೆಳೆಸುವ ಒಂದು ವಿಧಾನವಾಗಿದೆ. ಬದಲಾಗಿ, ಬೇರುಗಳನ್ನು ಗಾಳಿಯಲ್ಲಿ ತೆರೆದುಕೊಂಡಿರುತ್ತವೆ ಮತ್ತು ಪೋಷಕಾಂಶಯುಕ್ತ -ದಟ್ಟವಾದ ಮಂಜಿನಿಂದ ನೀರಿನ ಅಂಶವನ್ನು ಒದಗಿಸಲಾಗುತ್ತದೆ.
- ಇದರ ಅನಾನುಕೂಲಗಳು ಹೆಚ್ಚಿನ ಆರಂಭಿಕ ಹೂಡಿಕೆ ವೆಚ್ಚ, ವ್ಯವಸ್ಥೆಯ ಹೆಚ್ಚಿನ ನಿರ್ವಹಣೆ ಮತ್ತು ಹೆಚ್ಚಿನ ಮಟ್ಟದ ತಾಂತ್ರಿಕ ಜ್ಞಾನದ ಅಗತ್ಯವಿದೆ.
ಅಭಿವೃದ್ಧಿ ಪಡಿಸಿದ ಉದ್ದೇಶ:
- ನಗರೀಕರಣ ಮತ್ತು ಕೈಗಾರೀಕರಣದಿಂದಾಗಿ ಕೃಷಿಯೋಗ್ಯ ಭೂಮಿ ಕಡಿಮೆಯಾಗುತ್ತಿದೆ. ಸಾಂಪ್ರದಾಯಿಕ ಕೃಷಿಯಲ್ಲಿ ಕೃಷಿ ರಾಸಾಯನಿಕಗಳ ಅವೈಜ್ಞಾನಿಕ ಬಳಕೆಯಿಂದಾಗಿ ಪರಿಸರದ ಮೇಲೆ ವ್ಯಾಪಕವಾದ ದುಷ್ಪರಿಣಾಮಗಳು ಉಂಟಾಗುತ್ತದೆ. ಬೆಳೆಯುತ್ತಿರುವ ಜನಸಂಖ್ಯೆಯನ್ನು ಸಮರ್ಥವಾಗಿ ಪೋಷಿಸಲು ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಆಹಾರವನ್ನು ಉತ್ಪಾದಿಸುವ ವಿಧಾನಗಳು ವಿಕಾಸಗೊಳ್ಳಬೇಕು. ಮತ್ತು ಸುಸ್ಥಿರ ಬೆಳೆ ಉತ್ಪಾದನೆಗೆ, ಕ್ಷೀಣಿಸುತ್ತಿರುವ ವ್ಯವಸಾಯ ಭೂಮಿಯ ಮತ್ತು ನೀರಿನ ಸಂಪನ್ಮೂಲದ ಸದ್ಬಳಕೆಗೆ ಪರ್ಯಾಯ ಬೆಳೆ ಮಾಧ್ಯಮದ ಅನಿವಾರ್ಯತೆ ಇದೆ.
ಏನೆಲ್ಲಾ ಬೆಳೆಯಬಹುದು?
- ಈ ವಿಧಾನದಲ್ಲಿ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಯಬಹುದಾಗಿದೆ. ಅವುಗಳಲ್ಲಿ ಪ್ರಮುಖವಾದ ಬೆಳೆಗಳೆಂದರೆ ಸೊಪ್ಪು ತರಕಾರಿಗಳು, ಟೊಮೆಟೊಗಳು, ಸೌತೆಕಾಯಿಗಳು, ಮೆಣಸುಗಳು,ಸ್ಟ್ರಾಬೆರಿಗಳು ಇತ್ಯಾದಿ.
ಈ ಪದ್ದತಿಯನ್ನು ಎಲ್ಲಿ ಅಳವಡಿಸಿಕೊಳ್ಳಬಹುದು :
- ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲಿ ನೀರಿನ ಅಭಾವ ಇರುವ ಜಾಗದಲ್ಲಿ
- ಸಮಸ್ಯಾತ್ಮಕ ಮಣ್ಣು ಇರುವ ಪ್ರದೇಶಗಳಲ್ಲಿ ಹೆಚ್ಚು ಏರುಪೇರು ವಾತಾವರಣ ಇರುವ ಪ್ರದೇಶಗಳಲ್ಲಿ
- ಅತಿ ಕಡಿಮೆ ಹಿಡುವಳಿದಾರರು ಹೆಚ್ಚಿನ ಲಾಭ ಪಡೆಯಲು
- ಪಟ್ಟಣ ಪ್ರದೇಶಗಳಲ್ಲಿ ಮನೆಯ ತಾರಸಿ ಮತ್ತು ಬಾಲ್ಕನಿಗಳಲ್ಲಿ ಈ ಪದ್ದತಿಯನ್ನು ಅಳವಡಿಸಿಕೊಳ್ಳಬಹುದು.
ಪ್ರಯೋಜನಗಳು :
೧. ಕಡಿಮೆ ಅವಧಿಯಲ್ಲಿ ಶೀಘ್ರ ಬೆಳೆವಣಿಗೆ
೨. ಮಣ್ಣಿನ ಅವಶ್ಯಕತೆ ಇರುವುದಿಲ್ಲ
೩. ಕಡಿಮೆ ಸ್ಥಳಾವಕಾಶದಲ್ಲಿ ಹೆಚ್ಚು ಉತ್ಪಾದನೆ ಮಾಡಬಹುದಾಗಿದೆ.
೪.ವರ್ಷಪೂರ್ತಿ ಬೆಳೆ ಬೆಳೆಯಬಹುದು.
೫. ಪರಿಸರಕ್ಕೆ ಮಾರಕವಾದ ಕೀಟನಾಶಕ ಹಾಗೂ ಕಳೆನಾಶಕಗಳ ಬಳಕೆ ಇಲ್ಲ
೬. ನೀರಿನ ಮರುಬಳಕೆಯಿಂದ ನೀರಿನ ಉಳಿತಾಯ
೭. ಕೀಟ ಮತ್ತು ರೋಗ ಮುಕ್ತವಾದ ಬೆಳೆ
೮. ಗುಣಮಟ್ಟದ ಆಹಾರ ಉತ್ಪಾದನೆ
೯. ಸಸ್ಯಗಳಿಗೆ ಒದಗಿಸಲಾದ ಪೋಷಕಾಂಶಗಳು ವ್ಯರ್ಥವಾಗದೆ ಸದ್ಬಳಕೆಯಾಗುತ್ತದೆ.
೧೦.ರಾಸಾಯನಿಕಗಳನ್ನು ತಗ್ಗಿಸಿ ಪರಿಸರ ಸಂರಕ್ಷಿಸಬಹುದು.
ಅನನುಕೂಲತೆಗಳ
- ಎಲ್ಲ ಬೆಳೆಗಳಿಗೂ ಹೊಂದುವುದಿಲ್ಲ.
- ನಿರ್ವಹಣೆ ಕಷ್ಟವಾಗಬಹುದು
- ಘಟಕವನ್ನು ಶುರುಮಾಡುವಾಗ ಖರ್ಚು ಜಾಸ್ತಿ