Published on: February 3, 2023
ಮತ್ಸ್ಯ ಸಂಪದ ಯೋಜನೆ
ಮತ್ಸ್ಯ ಸಂಪದ ಯೋಜನೆ
2020ರ ಸೆಪ್ಟೆಂಬರ್ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಬಿಹಾರದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.
- 2020-2021 ಮತ್ತು 2024-2025 ರ ನಡುವೆ ಈ ಯೋಜನೆಗಾಗಿ ಸರ್ಕಾರವು ಅಂದಾಜು 20,050 ಕೋಟಿ ರೂ. ಹೂಡಿಕೆ ಮಾಡಲಿದೆ. ಇದರಲ್ಲಿ ಸಮುದ್ರ, ಒಳನಾಡು ಮೀನುಗಾರಿಕೆ ಅಭಿವೃದ್ಧಿಗಾಗಿ ಫಲಾನುಭವಿ ಆಧಾರಿತ ಚಟುವಟಿಕೆಗಳಿಗೆ ಮತ್ತು ಮೀನುಗಾರಿಕೆ ಮೂಲಸೌಕರ್ಯಕ್ಕಾಗಿ ಅನುದಾನ ಒದಗಿಸಲಾಗಿದೆ.
ಉದ್ದೇಶ
- ಒಂದು ದೇಶ ಸಮೃದ್ಧವಾಗಿರಲು ಅದರ ಎಲ್ಲ ಕ್ಷೇತ್ರಗಳು ಅಭಿವೃದ್ಧಿ ಹೊಂದಬೇಕು. ಭಾರತದ ಆರ್ಥಿಕತೆಗೆ ಕೃಷಿ ಅಥವಾ ಪಶುಸಂಗೋಪನೆ ಮತ್ತು ಮೀನುಗಾರಿಕೆ ಕ್ಷೇತ್ರಗಳನ್ನು ಕಡೆಗಣಿಸುವಂತಿಲ್ಲ. ಏಕೆಂದರೆ ಭಾರತವು ನದಿಪಾತ್ರದ ದೇಶವಾಗಿದೆ ಮತ್ತು ದೇಶದ ಅನೇಕ ಭಾಗಗಳಲ್ಲಿ ಮೀನುಗಳನ್ನು ಆಹಾರವಾಗಿ ಸ್ವೀಕರಿಸಲಾಗುತ್ತದೆ. ಹೀಗಾಗಿ ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿವೆ. ಅದಕ್ಕಾಗಿಯೇ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಆರಂಭಿಸಿದೆ.
ಪ್ರಯೋಜನಗಳು
- 2024 – 2025 ರ ವೇಳೆಗೆ ಮೀನು ಉತ್ಪಾದನೆಯನ್ನು ಹೆಚ್ಚುವರಿಯಾಗಿ 70 ಲಕ್ಷ ಟನ್‌ಗೆ ಹೆಚ್ಚಿಸುವುದು.
- ಮೀನು ರಫ್ತು ಆದಾಯವನ್ನು1 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸುವುದು
- ಮೀನುಗಾರಿಕೆಯ ಆದಾಯ ಹೆಚ್ಚಿಸುವ ಜತೆಗೆ ಮೀನುಗಾರರ ಆದಾಯವನ್ನು ದ್ವಿಗುಣಗೊಳಿಸುವುದು
- ಮೀನು ನಷ್ಟದ ಪ್ರಮಾಣವನ್ನು ಶೇ.20 ರಿಂದ 25 ರ ಬದಲಾಗಿ ಶೇ.10ಕ್ಕೆ ಇಳಿಸುವುದು.
- ಮೀನುಗಾರಿಕೆ ವಲಯ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ರೈತರಿಗೆ ಮತ್ತು ಮೀನುಗಾರರಿಗೆ ನೇರ ಮತ್ತು ಪರೋಕ್ಷ ಲಾಭದಾಯಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.