Published on: August 15, 2022
ಮಧ್ಯಪ್ರದೇಶದಲ್ಲಿ ವಿಶ್ವದ ಅತಿದೊಡ್ಡ ತೇಲುವ ಸೌರ ಸ್ಥಾವರ
ಮಧ್ಯಪ್ರದೇಶದಲ್ಲಿ ವಿಶ್ವದ ಅತಿದೊಡ್ಡ ತೇಲುವ ಸೌರ ಸ್ಥಾವರ
ಸುದ್ದಿಯಲ್ಲಿ ಏಕಿದೆ?
ನರ್ಮದಾ ನದಿಗೆ ಕಟ್ಟಲಾಗಿರುವ ಓಂಕಾರೇಶ್ವರ ಅಣೆಕಟ್ಟೆಯಲ್ಲಿ ತೇಲುವ ಸೌರ ಸ್ಥಾವರ ನಿರ್ಮಿಸಲಾಗುತ್ತದೆ. 2022-23 ರ ವೇಳೆಗೆ 600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ತೇಲುವ ಸೌರ ವಿದ್ಯುತ್ ಸ್ಥಾವರವನ್ನು ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಿರ್ಮಿಸಲು ಯೋಜಿಸಲಾಗಿದೆ.
ಮುಖ್ಯಾಂಶಗಳು
- 3,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ವಿಶ್ವದ ಅತಿದೊಡ್ಡ ತೇಲುವ ಸೌರ ಸ್ಥಾವರ ವಾಗಿದೆ .
- “ಓಂಕಾರೇಶ್ವರ ಅಣೆಕಟ್ಟನ್ನು ನರ್ಮದಾ ನದಿಗೆ ನಿರ್ಮಿಸಲಾಗಿದೆ. ಇದು ಜಲವಿದ್ಯುತ್ ಶಕ್ತಿ ಯೋಜನೆಯಾಗಿದೆ. ಈ ಯೋಜನೆಯಲ್ಲಿ ನೀರಿನಿಂದ ಶಕ್ತಿಯನ್ನು ಉತ್ಪಾದಿಸುತ್ತೇವೆ. ಇದು ಸುಮಾರು 100 ಚದರ ಕಿಲೋಮೀಟರ್‌ಗಳಷ್ಟು ಹರಡಿದೆ” ಹೊಸ ತೇಲುವ ಸೌರ ಸ್ಥಾವರ ನಿರ್ಮಾಣದಿಂದಾಗಿ ಖಾಂಡ್ವಾವು ಉಷ್ಣ ವಿದ್ಯುತ್ ಕೇಂದ್ರ, ಜಲವಿದ್ಯುತ್ ಕೇಂದ್ರ ಮತ್ತು ಸೌರ ವಿದ್ಯುತ್ ಹೊಂದಿರುವ ಮಧ್ಯಪ್ರದೇಶದ ಏಕೈಕ ಜಿಲ್ಲೆಯಾಗಲಿದೆ. ಒಂದೇ ಜಿಲ್ಲೆಯಿಂದ 4,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಯೋಜನೆ ಕೈಗೊಳ್ಳಲಾಗುತ್ತಿದೆ.
ಉದ್ದೇಶ
- ಭೋಪಾಲ್, ಮಧ್ಯಪ್ರದೇಶದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಈ ಪ್ರದೇಶದಲ್ಲಿನ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ನಿರ್ಮಿಸಲಾಗುತ್ತಿದೆ
ನರ್ಮದಾ ನದಿ
- ನರ್ಮದಾ ನದಿಯನ್ನು ರೇವಾ ನದಿ ಎಂದೂ ಕರೆಯುತ್ತಾರೆ ಮತ್ತು ಹಿಂದೆ ನರ್ಬದಾ ಅಥವಾ ನೆರ್ಬುದ್ದ ಎಂದೂ ಕರೆಯಲಾಗುತ್ತಿತ್ತು.
- ಇದು ಭಾರತದಲ್ಲಿ 5 ನೇ ಅತಿ ಉದ್ದದ ನದಿ ಮತ್ತು ಪಶ್ಚಿಮಕ್ಕೆ ಹರಿಯುವ ನದಿಯಾಗಿದೆ. ಇದು ಮಧ್ಯಪ್ರದೇಶ ರಾಜ್ಯದಲ್ಲಿ ಹರಿಯುವ ಅತಿ ದೊಡ್ಡ ನದಿಯೂ ಹೌದು.
- ಮಧ್ಯಪ್ರದೇಶದ ಅಮರಕಂಟಕ್ ಪರ್ವತ ಶ್ರೇಣಿಯ ಬಳಿ ಹುಟ್ಟುತ್ತದೆ.
- ನರ್ಮದಾ ನದಿ ಮುಂದೆ ಸುಮಾರು ೧೩೧೨ ಕಿ. ಮೀ. ಗಳಷ್ಟು ದೂರ ಪಶ್ಚಿಮಾಭಿಮುಖವಾಗಿ ಹರಿದು ಗುಜರಾತ್ ರಾಜ್ಯದ ಬರೂಚ್ ನಗರದ ಬಳಿ ಖಂಬಾತ್ ಕೊಲ್ಲಿ(ಅರಬ್ಬೀ ಸಮುದ್ರ) ಯನ್ನುಸೇರುತ್ತದೆ.
- ವಿಂದ್ಯ ಮತ್ತು ಸಾತ್ಪುರ ಪರ್ವತಶ್ರೇಣಿಗಳ ನಡುವಿನ ಬಿರುಕು ಕಣಿವೆಯಲ್ಲಿ ಹರಿಯುವ ನರ್ಮದಾ ನದಿ ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ವಿಶಾಲ ಪ್ರದೇಶಗಳಿಗೆ ಮುಖ್ಯ ನೀರಿನಾಸರೆಯಾಗಿದೆ.
ಓಂಕಾರೇಶ್ವರ ಅಣೆಕಟ್ಟು·
- ಓಂಕಾರೇಶ್ವರ ಅಣೆಕಟ್ಟು ಭಾರತದ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ನರ್ಮದಾ ನದಿಯ ಮೇಲೆ ನಿರ್ಮಿಸಲಾಗಿದೆ.·
- ಓಂಕಾರೇಶ್ವರ(ಜ್ಯೋತಿರ್ಲಿಂಗ) ದೇವಸ್ಥಾನದಿಂದ ಇದನ್ನು ಹೆಸರಿಸಲಾಗಿದೆ.·
- 132,500 ಹೆಕ್ಟೇರ್ (327,000 ಎಕರೆ) ನೀರಾವರಿಗಾಗಿ ನೀರನ್ನು ಒದಗಿಸುವ ಉದ್ದೇಶದಿಂದ 2003 ಮತ್ತು 2007 ರ ನಡುವೆ ಅಣೆಕಟ್ಟನ್ನು ನಿರ್ಮಿಸಲಾಯಿತು. ·
- ಅಣೆಕಟ್ಟಿನ ತಳ ಭಾಗದಲ್ಲಿರುವ ಸಂಯೋಜಿತ ಜಲವಿದ್ಯುತ್ ಕೇಂದ್ರವು 520 MW ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ.