Published on: December 19, 2022

‘ಮರ್ಮಗೋವಾ’ ಯುದ್ಧನೌಕೆ

‘ಮರ್ಮಗೋವಾ’ ಯುದ್ಧನೌಕೆ

ಸುದ್ದಿಯಲ್ಲಿ ಏಕಿದೆ? ಸಂಪೂರ್ಣ ಸ್ವದೇಶಿ ನಿರ್ಮಿತ ಪಥ ನಿರ್ದೇಶಿತ ಕ್ಷಿಪಣಿ ನಾಶಕ ಯುದ್ಧನೌಕೆ ‘ಐಎನ್ಎಸ್ ಮರ್ಮಗೋವಾ‘ ಅನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮುಂಬೈನಲ್ಲಿ ನೌಕಾಪಡೆಗೆ ನಿಯೋಜನೆ ಮಾಡಿದರು.

ಮುಖ್ಯಾಂಶಗಳು

  • ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತೀಯ ನೌಕಾಪಡೆಗೆ ಈ ನೌಕೆಯಿಂದ ಶಕ್ತಿ ಹೆಚ್ಚಬಹುದು’ ಎಂಬ ಆಶಯ ಹೊಂದಲಾಗಿದೆ.
  • 2021 ಡಿಸೆಂಬರ್ 19ರಂದು ಗೋವಾ ವಿಮೋಚನೆಯ 60ನೇ ವರ್ಷಾಚರಣೆ ಪ್ರಯುಕ್ತ ಈ ಯುದ್ಧನೌಕೆ ತನ್ನ ಮೊದಲ ಸಮುದ್ರ ಪ್ರಯಾಣ ಆರಂಭಿಸಿತ್ತು.

‘ಮರ್ಮಗೋವಾ’

  • 2015ರಲ್ಲಿ ಭಾರತೀಯ ನೌಕಾಪಡೆಗೆ INS ‌ ವಿಶಾಖಪಟ್ಟಣಂ ಎಂಬ ಶತ್ರು ಸಂಹಾರಕ ಮೊದಲ ಯುದ್ಧ ನೌಕೆ ಸೇರ್ಪಡೆಯಾಗಿತ್ತು. ಮರ್ಮಗೋವಾ ಭಾರತದಲ್ಲಿ ನಿರ್ಮಾಣವಾದ ಎರಡನೇ ಕ್ಷಿಪಣಿ ನಾಶಕ ಯುದ್ಧ ನೌಕೆಯಾಗಿದೆ.
  • 35,800 ಕೋಟಿ ವೆಚ್ಚದಲ್ಲಿ 15ಬಿ ಯೋಜನೆ ಅಡಿ ನಿರ್ಮಿಸಲಾಗಿದೆ
  • ನೌಕೆಯನ್ನು 75 ಪ್ರತಿಶತದಷ್ಟು ದೇಶೀಯ ವಸ್ತುಗಳನ್ನು ಉಪಯೋಗಿಸಿ  ತಯಾರಿಸಲಾಗಿದೆ  ಮತ್ತು ಸ್ವದೇಶಿ ಉಪಕರಣಗಳು ಮತ್ತು ಪ್ರಮುಖ ದೇಶೀಯ ಶಸ್ತ್ರಾಸ್ತ್ರಗಳನ್ನು ಅಳವಡಿಸಲಾಗಿದೆ.
  • ಮಧ್ಯಮ ವ್ಯಾಪ್ತಿಯ ಮೇಲ್ಮೈಯಿಂದ ಗಾಳಿ ಕ್ಷಿಪಣಿಗಳು, ಬ್ರಹ್ಮೋಸ್ ಮೇಲ್ಮೈಯಿಂದ ಮೇಲ್ಮೈ ಕ್ಷಿಪಣಿಗಳು 290 ಕಿ.ಮೀ ನಿಂದ 450 ಕಿ.ಮೀ ವರೆಗಿನ ವ್ಯಾಪ್ತಿಯನ್ನು ಹೊಂದಿರುವ ಹಲವಾರು ಸ್ಥಳೀಯ ಶಸ್ತ್ರಾಸ್ತ್ರಗಳೊಂದಿಗೆ ನೌಕೆಯು ಶಸ್ತ್ರಸಜ್ಜಿತವಾಗಿದೆ.
  • ಸೆನ್ಸಾರ್ ಹಾಗೂ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಒಳಗೊಂಡಿದೆ. ಇನ್ನೊಂದು ಯುದ್ಧನೌಕೆ, ಜಲಾಂತರ್ಗಾಮಿ ಅಥವಾ ಯುದ್ಧ ವಿಮಾನವನ್ನು ಹೊಡೆದು ಉರುಳಿಸುವಂತಹ ಕ್ಷಿಪಣಿ ವ್ಯವಸ್ಥೆಯನ್ನೂ ಇದು ಹೊಂದಿದೆ’.
  • 7,400 ಟನ್ ತೂಕದ ಈ ನೌಕೆಗೆ ಗೋವಾದ ಐತಿಹಾಸಿಕ ಬಂದರು ನಗರಿಯ ಹೆಸರು ಇಡಲಾಗಿದೆ.
  • ಅತ್ಯಾಧುನಿಕ ತಂತ್ರಜ್ಞಾನದ ಮರ್ಮಗೋವಾ ಯುದ್ಧನೌಕೆಯಲ್ಲಿ ಇಸ್ರೇಲ್‌ ತಂತ್ರಜ್ಞಾನದ ಸೂಕ್ಷ ್ಮ ನಿಗಾ ಕಾರ್ಯಾಚರಣೆ ವ್ಯವಸ್ಥೆ, ಅಪಾಯಕಾರಿ ಮುನ್ಸೂಚನೆ ನೀಡುವ ರಾಡಾರ್‌ ವ್ಯವಸ್ಥೆ ಇದೆ.

ಪ್ರಾಜೆಕ್ಟ್ 15 ಬಿ

  • ಭಾರತೀಯ ನೌಕಾಪಡೆಯ ಪ್ರಾಜೆಕ್ಟ್ 15B ಯ ಉದ್ದೇಶವು ಗರಿಷ್ಟ ದೇಶೀಯ ವಸ್ತುಗಳನ್ನು  ಹೊಂದಿರುವ ಶತ್ರು ಸಂಹಾರಕ ಯುದ್ಧ ನೌಕೆಗಳನ್ನು  ಅಭಿವೃದ್ಧಿಪಡಿಸುವುದು. ಈ ಯೋಜನೆಯಡಿಯಲ್ಲಿ ಒಟ್ಟು ನಾಲ್ಕು ಹಡಗುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
  • ಇವೆಲ್ಲವನ್ನೂ ಭಾರತೀಯ ನೌಕಾಪಡೆಯ ಆಂತರಿಕ ಸಂಘಟಿತ, ವಾರ್‌ಶಿಪ್ ವಿನ್ಯಾಸ ಬ್ಯೂರೋ ವಿನ್ಯಾಸಗೊಳಿಸಿದೆ.
  • ಅವುಗಳನ್ನು ಮುಂಬೈನ ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿದೆ.
  • ಅವುಗಳನ್ನು ವಿಶಾಖಪಟ್ಟಣಂ, ಮೊರ್ಮುಗೋವ, ಇಂಫಾಲ್ ಮತ್ತು ಸೂರತ್‌ನಲ್ಲಿ ಕಾರ್ಯಾರಂಭ ಮಾಡಲಾಗುವುದು.
  • ಯೋಜನೆಯ ಮೊದಲ ನೌಕೆ – INS ವಿಶಾಖಪಟ್ಟಣಂ – ಅನ್ನು ನವೆಂಬರ್ 2021 ರಲ್ಲಿ ಭಾರತೀಯ ನೌಕಾಪಡೆಗೆ ನಿಯೋಜಿಸಲಾಯಿತು. ಇದು ಪ್ರಮುಖ ಹಡಗು ಮತ್ತು ಭಾರತೀಯ ನೌಕಾಪಡೆಯ ವಿಶಾಖಪಟ್ಟಣಂ-ವರ್ಗದ ರಹಸ್ಯ ಮಾರ್ಗದರ್ಶಿ-ಕ್ಷಿಪಣಿ ಶತ್ರು ಸಂಹಾರಕಗಳಲ್ಲಿ ಮೊದಲನೆಯದು.

ಗೋವಾ ವಿಮೋಚನಾ  ದಿನ

  • ಭಾರತೀಯ ನೌಕಾಪಡೆಯಿಂದ ಪೋರ್ಚುಗೀಸರ ಪ್ರಭುತ್ವದಲ್ಲಿದ್ದ ಗೋವಾವನ್ನು ಬಿಡುಗಡೆ ಗೊಳಿಸಿದ ದಿನವಾಗಿದೆ. ಪ್ರತಿ ವರ್ಷ ಡಿಸೆಂಬರ್‌ 19 ರಂದು ಗೋವಾ ವಿಮೋಚನೆ ದಿನವನ್ನು ಆಚರಿಸಲಾಗುತ್ತದೆ.

ಇತಿಹಾಸ

  • ಬ್ರಿಟಿಷರು ಭಾರತ ಬಿಟ್ಟು ಹೋದ ನಂತರವೂ ಅವರ ನಿಯಂತ್ರಣದಲ್ಲಿದ್ದ ಏಕೈಕ ಪ್ರದೇಶ ಗೋವಾ. ಇದು ಪೋರ್ಚುಗೀಸರ ಅಂಕೆಯಲ್ಲಿತ್ತು. ಈ ಪ್ರದೇಶವನ್ನು ಅವರು ಬಿಟ್ಟುಕೊಡಲು ಸಿದ್ಧರಿರಲಿಲ್ಲ.
  • ಆಪರೇಷನ್‌ ವಿಜಯ್‌ : ಭಾರತೀಯ ನೌಕಾ ಸೈನ್ಯವು 17-12-1961ರಲ್ಲಿ ಗೋವಾ ಮೇಲೆ ಆಕ್ರಮಣ ಮಾಡಿತು. ಪೋರ್ಚುಗೀಸರ ಯುದ್ದ ನೌಕೆಯನ್ನು ನಾಶ ಮಾಡಿ, ಗೋವಾವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿತು. ಈ ಆಪರೇಷನ್‌ ಅನ್ನು ಯಾವುದೇ ರಕ್ತಪಾತವಿಲ್ಲದೆ ನಡೆಸಲಾಯಿತು.
  • ಕೊನೆಗೆ ಪೋರ್ಚುಗೀಸರ ಗವರ್ನರ್‌ ಜನರಲ್‌ ವಾಸಾಲೊ ಡಾ ಸಿಲ್ವಾ ಡಿಸೆಂಬರ್‌ 18ರಂದು ಭಾರತೀಯ ಸೈನ್ಯದ ಬ್ರಿಗೆಡಿಯರ್‌ ಕೆ.ಎಸ್‌.ಧಿಲ್ಲನ್‌ ಅವರ ಮುಂದೆ ಶರಣಾಗತಿ ಪತ್ರ ಬರೆದು ಅರ್ಪಿಸಿದರು.
  • ಕಾರ್ಯಾಚರಣೆ ಪ್ರಾರಂಭವಾಗಿ ಮೂರು ದಿನಗಳ ನಂತರ 1961ರ ಡಿಸೆಂಬರ್‌ 19 ರಂದು ಗೋವಾ ಅಂತಿಮವಾಗಿ ಭಾರತದ ಭಾಗವಾಯಿತು. ಆದ್ದರಿಂದ ಈ ದಿನವನ್ನು ಗೋವಾ ವಿಮೋಚನೆ ದಿನವಾಗಿ ಆಚರಿಸಲಾಗುತ್ತದೆ.