Published on: December 16, 2021

ಮಲ್ಲಿಕಾರ್ಜುನ ಮನಸೂರು ಪ್ರಶಸ್ತಿ

ಮಲ್ಲಿಕಾರ್ಜುನ ಮನಸೂರು ಪ್ರಶಸ್ತಿ

ಸುದ್ಧಿಯಲ್ಲಿ ಏಕಿದೆ ? ಹಿಂದೂಸ್ತಾನಿ ಗಾಯಕ ಡಾ. ಮಲ್ಲಿಕಾರ್ಜುನ ಮನಸೂರ ನೆನಪಿನ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಕೊಳಲು ವಾದಕ ಮುಂಬೈನ ಪಂಡಿತ್ ನಿತ್ಯಾನಂದ ಹಳದಿಪುರ ಅವರಿಗೆ ನೀಡಲು ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಸಾಮಾನ್ಯ ಸಭೆ ನಿರ್ಧರಿಸಿದೆ.

  • ಡಾ. ಮನಸೂರ ಅವರ 111ನೇ ಜನ್ಮದಿನದ ಅಂಗವಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಯುವ ಪುರಸ್ಕಾರವನ್ನು ಧಾರವಾಡದ ಹಿಂದೂಸ್ತಾನಿ ಗಾಯಕಿ ಶಿವಾನಿ ಮೀರಜಕರ ಅವರಿಗೆ ನೀಡಲು ಸಭೆ ನಿರ್ಧರಿಸಿತು.
  • ರಾಷ್ಟ್ರೀಯ ಪ್ರಶಸ್ತಿಯು ₹1ಲಕ್ಷ ಹಾಗೂ ಯುವ ಪ್ರಶಸ್ತಿ ₹25ಸಾವಿರ ನಗದು ಪುರಸ್ಕಾರ ಹಾಗೂ ಫಲಕವನ್ನು ಒಳಗೊಂಡಿರಲಿದೆ.

ಮಲ್ಲಿಕಾರ್ಜುನ ಮನ್ಸೂರ

  • ಡಾ. ಮಲ್ಲಿಕಾರ್ಜುನ ಮನಸೂರ’ ಭಾರತದ ಸರ್ವೋಚ್ಚ ಹಿಂದುಸ್ಥಾನಿ ಗಾಯಕರಲ್ಲಿ ಅಗ್ರಗಣ್ಯರು ಅವರು ಈ ಶತಮಾನದ ಸ್ವರಯೋಗಿ.ಆರು ದಶಕಗಳಿಗೂ ಮಿಕ್ಕಿ ಸಂಗೀತ ಲೋಕವನ್ನಾಳಿದ ಸ್ವರ ಚಕ್ರವರ್ತಿ ‘ಫಕೀರ ಆಫ್‌ ಖಯ್ಯಲ್‌’, ‘ಗಾಣ್ಯಾತ ರಾಹಣಾರ ಮಾಣೂಶ’ ಎಂಬ ಏಗ್ಗಳಿಕೆಗೆ ಪಾತ್ರರಾದವರು.ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ಕೀರ್ತಿತಂದ ರಾಷ್ಟ್ರೀಯ ಕನ್ನಡಿಗ. ಮಲ್ಲಿಕಾರ್ಜುನರು ಜನಿಸಿದ್ದು ಧಾರವಾಡ ಸಮೀಪದ ‘ಮನಸೂರ’ ಎಂಬ ಗ್ರಾಮದಲ್ಲಿ ೧೯೧೧ರ ಡಿಸೆಂಬರ್ ೩೧ ರಂದು.
  • ಅವರಿಗೆ ದೊರೆತ ಪ್ರಶಸ್ತಿ ಪುರಸ್ಕಾರಗಳು ಅನಂತ.‘ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ’ ಪಡೆದ ‘ಮೊದಲ ಹಿಂದುಸ್ಥಾನಿ ಗಾಯಕ’ (೧೯೬೦) ‘ಕರ್ನಾಟಕ ಸಾರ್ವಜನಿಕ ಸೇವಾ ಪ್ರಶಸ್ತಿ’ (೧೯೬೮), ‘ಪದ್ಮಶ್ರೀ’ (೧೯೭೦), ‘ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ’ (೧೯೭೬), ‘ಪದ್ಮಭೂಷಣ’ (೧೯೭೬), ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ (೧೯೭೫), ಮಧ್ಯ ಪ್ರದೇಶ ಸರ್ಕಾರದ ಕಾಳಿದಾಸ ಸಮ್ಮಾನ’ (೧೯೮೧), ಕೋಲ್ಕತ್ತಾದ ವಿಶ್ವಭಾರತಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ (೧೯೭೫), ಕೋಲ್ಕತ್ತಾದ ವಿಶ್ವಭಾರತಿ ವಿಶ್ವವಿದ್ಯಾಲಯದ ಪ್ರಪ್ರಥಮ ‘ದೇಶಿಕೋತ್ತಮ ಪ್ರಶಸ್ತಿ’ (೧೯೮೮), ‘ಉಸ್ತಾದ್‌ ಹಾಫೀಜ್‌ ಅಲಿಖಾನ್‌ ಪ್ರಶಸ್ತಿ’ (೧೯೯೧) ಕರ್ನಾಟಕ ಸರ್ಕಾರದ ‘ವಿಧಾನ ಪರಿಷತ್‌ ಸದಸ್ಯತ್ವದ ಗೌರವ ‘ಪದ್ಮ ವಿಭೂಷಣ ಪ್ರಶಸ್ತಿ- ಮುಂತಾದ ಪ್ರಶಸ್ತಿ ಪುರಸ್ಕಾರ ಅವರಿಗೆ ಸಂದಿವೆ.