Published on: September 19, 2022

ಮಾಜಾಳಿ ಬಂದರಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ

ಮಾಜಾಳಿ ಬಂದರಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ

http://sasonandpobi.com/category/diy/ ಸುದ್ದಿಯಲ್ಲಿ ಏಕಿದೆ?

prosperously ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ರೂ. 250 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ಇದರೊಂದಿಗೆ ಕರಾವಳಿಯಲ್ಲಿ ಮತ್ತೊಂದು ಬಂದರು ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಸಾಗರಮಾಲಾ’ದ ಅಡಿಯಲ್ಲಿ ಬಂದರು ನಿರ್ಮಾಣವಾಗಲಿದೆ.

ಮುಖ್ಯಾಂಶಗಳು

  • ಯಾರಿಂದ ಜಾರಿ: ಕರ್ನಾಟಕ ಮೆರಿಟೈಮ್ ಬೋರ್ಡ್ ಮತ್ತು ಮೀನುಗಾರಿಕಾ ಇಲಾಖೆಯು ಯೋಜನೆಯನ್ನು ಜಂಟಿಯಾಗಿ ಜಾರಿ ಮಾಡಲಿವೆ.
  • ಪ್ರಯೋಜನ : ಈ ಯೋಜನೆಯು ಜಾರಿಯಾದರೆ ಮಾಜಾಳಿ, ಮಧ್ಯ ದಂಡೇಬಾಗ, ದೇವಬಾಗ, ಬಾವಳ, ಹಿಪ್ಪಳಿ, ಚಿತ್ತಾಕುಲಾ, ದಾಂಡೇಬಾಗ, ನೆಚಕಿನ ಬಾಗ್, ಗಾಬಿತವಾಡ ಭಾಗದ ಮೀನುಗಾರರಿಗೆ ಅನುಕೂಲವಾಗಲಿದೆ. ಗೋವಾದ ಗಡಿಯ ಸಮೀಪವಿರುವ ಕಾರಣ ಇಲ್ಲಿನ ಮೀನುಗಾರರಿಗೆ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಅವಕಾಶವೂ ಆಗುವ ಸಾಧ್ಯತೆಯಿದೆ.

ಮಾಜಾಳಿ ಬಂದರಿನ ವಿಶೇಷತೆ

  • ರೂ. 250 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೀನುಗಾರಿಕಾ ಬಂದರಿನಲ್ಲಿ 80 ದೋಣಿಗಳು ನಿಲ್ಲಬಹುದು.
  • ಬಂದರಿನ ಉತ್ತರ ಭಾಗದಲ್ಲಿ 1,140 ಮೀಟರ್ ಹಾಗೂ ದಕ್ಷಿಣದಲ್ಲಿ 595 ಮೀಟರ್ ಉದ್ದದ ಅಲೆ ತಡೆಗೋಡೆಗಳನ್ನು ನಿರ್ಮಿಸಲಾಗುತ್ತದೆ.
  • ಬಂದರಿನಲ್ಲಿ ಮೂರು ಮೀಟರ್ ಆಳ ಇರಲಿದ್ದು, ವರ್ಷಕ್ಕೆ ಸುಮಾರು 15.50 ಟನ್‌ಗಳಷ್ಟು ಮೀನು ವಹಿವಾಟು ಆಗುವ ನಿರೀಕ್ಷೆಯಿದೆ.
  • ಉದ್ದೇಶಿತ ಮಾಜಾಳಿ ಮೀನುಗಾರಿಕಾ ಬಂದರಿನ ಸುತ್ತಮುತ್ತ 4,716‌ ಮೀನುಗಾರರು ಇದ್ದಾರೆ ಎಂದು ಮೀನುಗಾರಿಕಾ ಇಲಾಖೆಯ ಅಂಕಿ ಅಂಶ ತಿಳಿಸುತ್ತದೆ.

ಉದ್ದೇಶ

  • ಮಾಜಾಳಿಯಲ್ಲಿ ಪ್ರಸ್ತುತ ಮೀನುಗಾರಿಕಾ ದೋಣಿಗಳನ್ನು ಸಮರ್ಪಕವಾಗಿ ಲಂಗರು ಹಾಕಲು ಸೌಲಭ್ಯವಿಲ್ಲ. ಸಮುದ್ರ ದಡಕ್ಕೆ ಸಾಧ್ಯವಾದಷ್ಟು ಸಮೀಪದಲ್ಲಿ ದೋಣಿಗಳನ್ನು ಮೀನುಗಾರಿಕೆ ಹೋಗುವುದು, ನಂತರ ಹಿಡಿದ ಮೀನನ್ನು ದಡಕ್ಕೆ ಸಾಗಿಸಲಾಗುತ್ತಿದೆ. ಕಾರವಾರದ ಬೈತಖೋಲ್‌ ಬಂದರು, ಮಾಜಾಳಿಯಿಂದ ಸಾಕಷ್ಟು ದೂರದಲ್ಲಿದೆ. ಹಾಗಾಗಿ, ಇಲ್ಲೊಂದು ಮೀನುಗಾರಿಕಾ ಬಂದರು ನಿರ್ಮಿಸಬೇಕು ಎಂಬ ಬೇಡಿಕೆಯೂ ಇತ್ತು.