Published on: June 4, 2023

ಮಾರ್ಸ್‌ರೋವರ್‌ ಆಪರ್ಚುನಿಟಿ ಪ್ರತಿಕೃತಿ

ಮಾರ್ಸ್‌ರೋವರ್‌ ಆಪರ್ಚುನಿಟಿ ಪ್ರತಿಕೃತಿ

ಸುದ್ದಿಯಲ್ಲಿ ಏಕಿದೆ? ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾವು ಮಂಗಳ ಗ್ರಹಕ್ಕೆ ಕಳುಹಿಸಿದ್ದ ಮಾರ್ಸ್‌ ಆಪರ್ಚುನಿಟಿ ರೋವರ್‌ನ ಪೂರ್ಣ ಪ್ರಮಾಣದ ಮಾದರಿಯನ್ನು  ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ  ಅನಾವರಣಗೊಳಿಸಲಾಯಿತು.

ಮುಖ್ಯಾಂಶಗಳು

  • ಮಾರ್ಸ್‌ ಆಪರ್ಚುನಿಟಿ ರೋವರ್‌ನ ಪೂರ್ಣಪ್ರಮಾಣದ ಮಾದರಿಯನ್ನು ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರೂಪಿಸಿದ್ದಾರೆ.
  • ಅಮೆರಿಕದಲ್ಲಿನ ವರ್ಜಿನಿಯದ ಡಲ್ಲಾಸ್‌ನಲ್ಲಿರುವ ಸ್ಮಿತ್‌ಸೋನಿಯನ್‌ ಅವರ ಏರ್‌ ಅಂಡ್‌ ಸ್ಪೇಸ್‌ ಮ್ಯೂಸಿಯಂನಲ್ಲಿ, 2020ರ ದುಬೈ ವರ್ಲ್ಡ್‌ ಎಕ್ಸ್‌ಪೊದಲ್ಲಿ, ಮತ್ತು ಚೆನ್ನೈ ದೂತಾವಾಸದಲ್ಲಿನ ಅಮೆರಿಕನ್‌ ಸೆಂಟರ್‌ನಲ್ಲಿ ಪ್ರದರ್ಶಿಸಲಾಗಿತ್ತು.

ಪ್ರಯೋಜನ

  • “ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌, ಮತ್ತು ಗಣಿತ (STEM) ಶಿಕ್ಷಣವನ್ನು ಪ್ರೋತ್ಸಾಹಿಸುವುದು
  • ಇದು ಮುಂದಿನ ಪೀಳಿಗೆಯ ಬಾಹ್ಯಾಕಾಶ ಪರಿಶೋಧಕರಿಗೆ ಪ್ರೇರಣೆ ಆಗಲಿದೆ.
  • ಸಾರ್ವಜನಿಕರ ಭಾಗವಹಿಸುವಿಕೆಯನ್ನು ಹೆಚ್ಚಿಸಿ, ಬಾಹ್ಯಾಕಾಶ ಪರಿಶೋಧನೆಯ ಅದ್ಭುತಗಳನ್ನು ಕಲಿಯಲು ಮತ್ತು ಸ್ಫೂರ್ತಿ ಪಡೆಯಲು ಸಮುದಾಯಕ್ಕೆ ಒಂದು ಅನನ್ಯ ಅವಕಾಶವನ್ನು ಸೃಷ್ಟಿಸುತ್ತದೆ,”

ಭಾರತ ಮತ್ತು ಅಮೇರಿಕ ದೇಶಗಳ ನಡುವಿನ ಸಹಕಾರ ಸಂಬಂಧ

ಯು.ಎಸ್‌. ಅಂಡರ್‌ ಸೆಕ್ರೆಟರಿ ಆಫ್‌ ಕಾಮರ್ಸ್‌ ಫಾರ್‌ ಇಂಟರ್‌ ನ್ಯಾಷನಲ್‌ ಟ್ರೇಡ್‌ ಮರಿಸಾ ಲಾಗೊ, ಅತ್ಯಂತ ಕೀಲಕ ವಲಯಗಳಲ್ಲಿ ಅಮೆರಿಕ ಮತ್ತು ಭಾರತಗಳ ಸಹಕಾರ ಇನ್ನಷ್ಟು ನಿಕಟವಾಗಿದೆ.

  • ಬಾಹ್ಯಾಕಾಶ ವಲಯವು ಎರಡು ದೇಶಗಳ ಸಹಭಾಗಿತ್ವಕ್ಕೆ ಮತ್ತೊಂದು ಉದಾಹರಣೆ.
  • ಈ ಅನಾವರಣ ಸಮಾರಂಭವು ಪರಸ್ಪರರ ಬದ್ಧತೆಯ ಸಂಕೇತವಾಗಿದೆ.”
  • ಪ್ರತಿಕೃತಿಯ ಆಗಮನವು ಭಾರತ ಮತ್ತು ಅಮೆರಿಕಗಳ ನಡುವಣ ದೀರ್ಘಕಾಲೀನ ಬಾಹ್ಯಾಕಾಶ ಸಹಕಾರದ ಪ್ರತೀಕವಾಗಿದೆ.
  • ಅಮೆರಿಕಕ್ಕೆ ಬಾಹ್ಯಾಕಾಶ ವಲಯದಲ್ಲಿ ಭಾರತವು ಬಹುಮುಖ್ಯ ಸಹಭಾಗಿ.
  • 2005 ರಲ್ಲಿ ಆರಂಭವಾದ ಅಮೆರಿಕ ಭಾರತ ನಾಗರಿಕ ಬಾಹ್ಯಾಕಾಶ ಜಂಟಿ ಕಾರ್ಯಪಡೆಯು ನಾಗರಿಕ ಬಾಹ್ಯಾಕಾಶ ಸಹಕಾರಕ್ಕಾಗಿ ಹೊಸ ಮತ್ತು ವಿಸ್ತೃತ ಕ್ಷೇತ್ರಗಳ ಕುರಿತು ರಚನಾತ್ಮಕ ದೃಷ್ಟಿಕೋನ ಮತ್ತು ಚರ್ಚೆಯ ವಿನಿಮಯದ ಸ್ಥಳವಾಗಿದೆ. ಈ ವಿಷಯದ ಸಂಬಂಧ ಉಭಯ ದೇಶಗಳ ನಡುವಿನ ಮಾತುಕತೆಯ ಆಧಾರದಲ್ಲಿ ನಾಲ್ಕು ಕಾರ್ಯಪಡೆಗಳನ್ನು ಮಾಡಲಾಗಿದೆ.

ಮಾರ್ಸ್‌ ಆಪರ್ಚುನಿಟಿ ರೋವರ್‌

  • MER-B (ಮಾರ್ಸ್ ಎಕ್ಸ್‌ಪ್ಲೋರೇಷನ್ ರೋವರ್ – B) ಅಥವಾ MER-1 ಎಂದೂ ಕರೆಯುತ್ತಾರೆ, ಇದು 2004 ರಿಂದ 2018 ರವರೆಗೆ ಮಂಗಳ ಗ್ರಹದಲ್ಲಿ ಸಕ್ರಿಯವಾಗಿರುವ ರೋಬೋಟಿಕ್ ರೋವರ್ ಆಗಿದೆ. ಮಂಗಳ ಗ್ರಹದಲ್ಲಿ ನೀರಿನ ಕುರುಹಿದೆಯೇ ಎಂಬುದನ್ನು ಪತ್ತೆ ಹಚ್ಚಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾವು ಮಾರ್ಸ್‌ ಆಪರ್ಚುನಿಟಿ ರೋವರ್‌ ಅನ್ನು ಕಳುಹಿಸಿತ್ತು.
  • ಜುಲೈ, 2003 ರಂದು NASA ದ ಮಾರ್ಸ್ ಎಕ್ಸ್‌ಪ್ಲೋರೇಶನ್ ರೋವರ್ ಕಾರ್ಯಕ್ರಮದ ಭಾಗವಾಗಿ ಪ್ರಾರಂಭಿಸಲಾಯಿತು.