Published on: October 15, 2021
ಮಾಹಿತಿ ಕಣಜ ಪೋರ್ಟಲ್
ಮಾಹಿತಿ ಕಣಜ ಪೋರ್ಟಲ್
ಸುದ್ಧಿಯಲ್ಲಿ ಏಕಿದೆ? ಒಂದೇ ಸೂರಿನಡಿ ಸರ್ಕಾರದ ಸೇವೆಗಳನ್ನು ಒದಗಿಸುವ ಮಾಹಿತಿ ಕಣಜ ಪೋರ್ಟಲ್ ಅನ್ನು ವಿವಿಧ ಇಲಾಖೆಗಳಿಂದ ನವೀಕರಿಸಿದ ಮಾಹಿತಿಗಳೊಂದಿಗೆ ರಿಲಾಂಚ್ ಮಾಡಲಾಗಿದ್ದು, ಈಗ ಯಾವುದೇ ಲಾಗಿನ್ ವ್ಯವಸ್ಥೆ ಹೊಂದಿರುವುದಿಲ್ಲ ಮತ್ತು ಆರ್ ಟಿಐ ಅರ್ಜಿ ಸಲ್ಲಿಸದಯೇ ರಾಜ್ಯ ಸರ್ಕಾರದ 157 ಸೇವೆ ಗಳ ಮಾಹಿತಿಯನ್ನು ಪಡೆಯಬಹುದು.
- ಪೋರ್ಟಲ್ ಈ ಮೊದಲು ಕೇವಲ 30 ಸ್ಕೀಮ್ಗಳನ್ನು ಮತ್ತು 10 ಇಲಾಖೆಗಳ ಮಾಹಿತಿ ಹೊಂದಿತ್ತು. ಈಗ ಶಿಕ್ಷಣ, ಎಸ್ಕಾಮ್ಸ್, ಮೆಟ್ರೋ ಮತ್ತು ಆರೋಗ್ಯ ಇಲಾಖೆ ಸೇರಿದಂತೆ 50 ಇಲಾಖೆಗಳನ್ನು ಹೊಂದಿದೆ. ಇದನ್ನು ಆಂತರಿಕವಾಗಿ ಇ-ಆಡಳಿತ ಇಲಾಖೆಯ ಪ್ರೋಗ್ರಾಮರ್ಗಳು ಅಭಿವೃದ್ಧಿಪಡಿಸಿದ್ದಾರೆ.
- ಈ ಪೋರ್ಟಲ್ ಆರ್ಟಿಐ ಕಾಯಿದೆಯ ಸೆಕ್ಷನ್ 4(2) ಗೆ ಅನುಗುಣವಾಗಿದೆ. ಇದು ಅಂತರ್ಜಾಲ ಸೇರಿದಂತೆ ವಿವಿಧ ಸಂವಹನ ವಿಧಾನಗಳ ಮೂಲಕ ನಿಯಮಿತ ಅಂತರದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿಗಳನ್ನು ನೀಡುತ್ತದೆ.
- ಮಾಹಿತಿ ಪಡೆಯಲು ಸಾರ್ವಜನಿಕರು ಆರ್ ಟಿಐ ಅರ್ಜಿಗಳನ್ನು ಸಲ್ಲಿಸುತ್ತಾರೆ. ಆದರೆ ಮಹಿತಿ ಕಣಜದಲ್ಲಿ ಆರ್ ಟಿಐ ಅರ್ಜಿ ಸಲ್ಲಿಸದೆಯೇ 157 ಸೇವೆಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದ್ದು, ಇದರಿಂದ ಆರ್ಟಿಐ ಅರ್ಜಿಗಳ ಸಂಖ್ಯೆಯಲ್ಲಿ ಶೇ.40 ರಷ್ಟು ಕಡಿಮೆ ಮಾಡಲಿದೆ.