Published on: June 9, 2022

ಮಿಲಿಟರಿ ಸಹಕಾರ ಒಪ್ಪಂದಕ್ಕೆ ಭಾರತ- ವಿಯೆಟ್ನಾಂ ಸಹಿ

ಮಿಲಿಟರಿ ಸಹಕಾರ ಒಪ್ಪಂದಕ್ಕೆ ಭಾರತ- ವಿಯೆಟ್ನಾಂ ಸಹಿ

ಸುದ್ಧಿಯಲ್ಲಿಏಕಿದೆ?

ಭಾರತ ಮತ್ತು ವಿಯೆಟ್ನಾಂ ದ್ವಿಪಕ್ಷೀಯ ಮಿಲಿಟರಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿವೆ. 

ಮುಖ್ಯಾಂಶಗಳು

  • ಭಾರತ ಮತ್ತು ವಿಯೆಟ್ನಾಂ ದ್ವಿಪಕ್ಷೀಯ ಮಿಲಿಟರಿ ಸಹಕಾರ ಒಪ್ಪಂದಕ್ಕೆ ಜೂನ್ 8 ರಂದು  ಸಹಿ ಹಾಕಿವೆ.
  • ಈ ಮೂಲಕ ಇದೇ ಮೊದಲ ಬಾರಿಗೆ ವಿಯೆಟ್ನಾಂ ಬೇರೊಂದು ದೇಶದೊಂದಿಗೆ ಮಿಲಿಟರಿ ಸಹಕಾರ ಪ್ರಕ್ರಿಯೆಯನ್ನು ಸರಳಗೊಳಿಸುವ ಒಪ್ಪಂದ ಮಾಡಿಕೊಂಡಿದೆ.
  • ಇದೇ ವೇಳೆ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
  • 2030 ರ ಕಡೆಗೆ ಭಾರತ-ವಿಯೆಟ್ನಾಂ ರಕ್ಷಣಾ ಪಾಲುದಾರಿಕೆ ಕುರಿತು ಜಂಟಿ ವಿಷನ್ ಹೇಳಿಕೆಗೆ ಇಬ್ಬರು ರಕ್ಷಣಾ ಮಂತ್ರಿಗಳು ಸಹಿ ಹಾಕಿದರು, ಇದು ಅಸ್ತಿತ್ವದಲ್ಲಿರುವ ರಕ್ಷಣಾ ಸಹಕಾರದ ವ್ಯಾಪ್ತಿ ಮತ್ತು ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
  • ₹770 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ 12 ಅತಿ ವೇಗದ ರಕ್ಷಣಾ ಹಡಗುಗಳನ್ನು ವಿಯೆಟ್ನಾಂಗೆ ಹಸ್ತಾಂತರ ಮಾಡಿದರು.  ಜೂನ್ 8ರಿಂದ ವಿಯೆಟ್ನಾಂ ಪ್ರವಾಸ ಕೈಗೊಂಡಿರುವ ರಾಜನಾಥ್ ಸಿಂಗ್ ಅವರು, ಹಾಂಗ್ ಹಾ ಶಿಪ್‌ಯಾರ್ಡ್‌ನಲ್ಲಿ ಈ ಹಡಗುಗಳನ್ನು ಸಾಲದ ರೂಪದ ಯೋಜನೆಯಡಿ ವಿಯೆಟ್ನಾಂಗೆ ಹಸ್ತಾಂತರಿಸಿದರು.
  • ದಕ್ಷಿಣ ಚೀನಾ ಸಮುದ್ರದ ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಾಬಲ್ಯವನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ಮತ್ತು ವಿಯೆಟ್ನಾಂ ದೇಶಗಳ ಭದ್ರತಾ ಸಹಕಾರದ ನಡುವೆ ನಡೆದ ಈ ಬೆಳವಣಿಗೆ ಮಹತ್ವ ಪಡೆದಿದೆ.
  • ‘ಭಾರತ ನೀಡಿದ ಸಾಲದ ಯೋಜನೆಯಡಿ 12 ಅತಿವೇಗದ ರಕ್ಷಣಾ ಹಡಗುಗಳ ನಿರ್ಮಾಣ ಯೋಜನೆ ಪೂರ್ಣಗೊಳಿಸಲಾಗಿದೆ. ಮೊದಲ 5 ಹಡಗುಗಳನ್ನು ಭಾರತದಲ್ಲಿ ಎಲ್ಅಂಡ್‌ಟಿ ಶಿಪ್‌ಯಾರ್ಡ್‌ನಲ್ಲಿ ನಿರ್ಮಿಸಲಾಗಿತ್ತು. ಇದೀಗ ಉಳಿದ 7 ಹಡುಗಗಳನ್ನು ಹಾಂಗ್ ಹಾ ಶಿಪ್ ಯಾರ್ಡ್‌ನಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಯು ಉಭಯ ದೇಶಗಳ ನಡುವೆ ಹೆಚ್ಚಿನ ಭದ್ರತಾ ಸಹಕಾರ ಯೋಜನೆಗಳಿಗೆ ಪೂರಕವಾಗಲಿದೆ ಎಂಬ ಭರವಸೆಯಿದೆ.
  • ಈ ಯೋಜನೆಯು ವಿಶ್ವಕ್ಕಾಗಿ ಭಾರತದಲ್ಲಿ ನಿರ್ಮಿಸಿ (ಮೇಕ್ ಇನ್ ಇಂಡಿಯಾ- ಮೇಕ್ ಫಾರ್ ದಿ ವರ್ಲ್ಡ್ ಮಿಷನ್) ಎಂಬುದಕ್ಕೆ ಉದಾಹರಣೆಯಾಗಿದೆ’.