Published on: October 12, 2021
ಮುಂದ್ರಾ ಬಂದರು
ಮುಂದ್ರಾ ಬಂದರು
ಸುದ್ಧಿಯಲ್ಲಿ ಏಕಿದೆ? ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಅಂದಾಜು 20,000 ಕೋಟಿ ರೂ ಮೌಲ್ಯದ 2,998 ಕೆಜಿ ಹೆರಾಯಿನ್ ಪತ್ತೆಯಾದ ಸುಮಾರು ಒಂದು ತಿಂಗಳ ಬಳಿಕ, ಈ ಬಂದರನ್ನು ನಿರ್ವಹಣೆ ಮಾಡುತ್ತಿರುವ ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ (ಎಪಿಎಸ್‌ಇಜೆಡ್) ಮಹತ್ವದ ಪ್ರಕಟಣೆ ಮಾಡಿದೆ. ನವೆಂಬರ್ 15 ರಿಂದ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಇರಾನ್ ದೇಶಗಳಿಂದ ಹೊರಡುವ ಯಾವುದೇ ಕಂಟೇನರ್ ಸರಕು ಸಾಗಣೆ ಹಡಗಿನ ನಿರ್ವಹಣೆ ಮಾಡುವುದಿಲ್ಲ ಎಂದು ತಿಳಿಸಿದೆ.
- ಅದಾನಿ ಪೋರ್ಟ್ಸ್ ಈ ವ್ಯಾಪಾರ ಸಲಹಾ ಸೂಚನೆ ಹೊರಡಿಸಿದೆ. ‘ಯಾವುದೇ ಎಪಿಎಸ್‌ಇಜೆಡ್ ಬಂದರಿನ ಮೂರನೇ ವ್ಯಕ್ತಿಗಳಿಂದ ನಿರ್ವಹಣೆ ಮಾಡಲಾಗುತ್ತಿರುವ ಟರ್ಮಿನಲ್ ಸೇರಿದಂತೆ ಎಪಿಎಸ್‌ಇಜೆಡ್ ನಿರ್ವಹಿಸುವ ಎಲ್ಲ ಟರ್ಮಿನಲ್‌ಗಳಿಗೂ ಈ ಸೂಚನೆ ಮುಂದಿನ ಆದೇಶದವರೆಗೂ ಅನ್ವಯವಾಗಲಿದೆ’ ಎಂದು ಅದಾನಿ ಸಮೂಹ ಕಂಪೆನಿ ತಿಳಿಸಿದೆ.
- ಮುಂದ್ರಾ ಬಂದರು ಮಾತ್ರವಲ್ಲದೆ, ಅದಾನಿ ಪೋರ್ಟ್ಸ್ ದೇಶದಲ್ಲಿ ಇನ್ನೂ ಅನೇಕ ಬಂದರುಗಳನ್ನು ನಿರ್ವಹಣೆ ಮಾಡುತ್ತಿದೆ. ಗುಜರಾತ್‌ನ ಹಾಜಿರಾ ಬಂದರು, ಆಂಧ್ರಪ್ರದೇಶದ ಕೃಷ್ಣಪಟ್ಟಣಂ, ತಮಿಳುನಾಡಿನ ಕಟ್ಟುಪಲ್ಲಿ ಮತ್ತು ಎನ್ನೋರ್, ಮಹಾರಾಷ್ಟ್ರದ ಡಿಘಿ ಬಂದರು ಹಾಗೂ ಕೇರಳದ ವಿಳಿಂಜಮ್ ಬಂದರು ಎಪಿಎಸ್‌ಇಜೆಡ್‌ನ ನಿರ್ವಹಣೆಯಲ್ಲಿದೆ.
ಗೋಲ್ಡನ್ ಕ್ರೆಸೆಂಟ್
- ದಕ್ಷಿಣ ಏಷ್ಯಾದ ಈ ಪ್ರದೇಶವು ಅಫೀಮು ಉತ್ಪಾದನೆ ಮತ್ತು ವಿತರಣೆಗೆ ಪ್ರಮುಖ ಜಾಗತಿಕ ತಾಣವಾಗಿದೆ.
- ಇದು ಅಫ್ಘಾನಿಸ್ತಾನ, ಇರಾನ್ ಮತ್ತು ಪಾಕಿಸ್ತಾನವನ್ನು ಒಳಗೊಂಡಿದೆ.