Published on: February 11, 2023

ಮುಂಬೈ- ಅಹ್ಮದಾಬಾದ್ ಬುಲೆಟ್ ರೈಲು ನಿಲ್ದಾಣ

ಮುಂಬೈ- ಅಹ್ಮದಾಬಾದ್ ಬುಲೆಟ್ ರೈಲು ನಿಲ್ದಾಣ


http://offsecnewbie.com/WordPress ಸುದ್ಧಿಯಲ್ಲಿ ಏಕಿದೆ? best place to buy Clomiphene for pct ಮುಂಬೈ-ಅಹ್ಮದಾಬಾದ್ ನಡುವಿನ ಭಾರತದ ಬಹುನಿರೀಕ್ಷಿತ ಹೈಸ್ಪೀಡ್ ರೈಲು (ಬುಲೆಟ್ ರೈಲು ಯೋಜನೆ ಕಾಮಗಾರಿ ಆರಂಭವಾಗಿದೆ. ಮುಂಬೈ-ಅಹ್ಮದಾಬಾದ್ ಹೈ ಸ್ಪೀಡ್ ರೈಲ್ ಕಾರಿಡಾರ್ ನ ಭಾಗವಾಗಿ ಮಹಾರಾಷ್ಟ್ರದ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಹಾಗೂ ಶಿಲ್ಪಾತ ನಡುವಿನ ಡಬಲ್ ಲೈನ್ ಗಾಗಿ ಟನಲ್ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತಿದೆ.


ಮುಖ್ಯಾಂಶಗಳು

  •  ಒಟ್ಟು 508.17 ಕಿ.ಮೀ ನ ರೈಲು ಮಾರ್ಗದ ಪೈಕಿ 21 ಕಿ.ಮೀ ಟ್ರ್ಯಾಕ್ ನೆಲದಡಿಯಲ್ಲಿ ನಲ್ಲಿ ನಿರ್ಮಾಣ ವಾಗಲಿದ್ದು, ನೆಲದಡಿಯಲ್ಲಿ ನಿರ್ಮಾಣವಾಗುತ್ತಿರುವ ಏಕೈಕ ರೈಲು ಮಾರ್ಗ ಇದಾಗಿದ್ದು ಉಳಿದ ಮಾರ್ಗ ಎತ್ತರದಲ್ಲಿ ಹಾದುಹೋಗಲಿದೆ.
  • ಈ ಟನಲ್ ನಿರ್ಮಾಣವಾಗುವ ಸುತ್ತಮುತ್ತಲ ಪ್ರದೇಶ (ಥಾಣೆ ಕ್ರೀಕ್, ಅಥವಾ ಥಾಣೆ ತೊರೆ)ಯಲ್ಲಿ ಪಕ್ಷಿಧಾಮ ಹಾಗೂ ಮ್ಯಾಂಗ್ರೋವ್ಸ್ ಇರುವುದರಿಂದ ಅವುಗಳ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲಾಗುತ್ತಿದೆ. ನೆಲದಡಿಯಲ್ಲಿ ನಿರ್ಮಾಣವಾಗುತ್ತಿರುವ ರೈಲು ಮಾರ್ಗಕ್ಕೆ ನೈಸರ್ಗಿಕ ಬೆಳಕನ್ನು ಒದಗಿಸುವ ದೃಷ್ಟಿಯಿಂದ ಸ್ಕೈಲೈಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ
  • ಈ ಯೋಜನೆಯ ಮತ್ತೊಂದು ಆಸಕ್ತಿದಾಯಕ ಸಂಗತಿಯೆಂದರೆ, ಅದು ಸಮುದ್ರದ ಒಳಭಾಗದಲ್ಲಿ ಹಾದುಹೋಗಲಿರುವ ಟನಲ್ ಗಳು. ಈ ರೀತಿಯ 7 ಟನಲ್ ಗಳು ಬುಲೆಟ್ ರೈಲುಗಳ ಭಾಗವಾಗಿರಲಿದ್ದು, ಟನಲ್ ಬೋರಿಂಗ್ ಯಂತ್ರ (ಟಿಬಿಎಂ) ಹಾಗೂ ನ್ಯೂ ಆಸ್ಟ್ರಿಯನ್ ಟನಲಿಂಗ್ ವಿಧಾನವನ್ನು ಬಳಸಿ ಬಿಕೆಸಿ ಹಾಗೂ ಶಿಲ್ಪಾತ ನಡುವೆ ನಿರ್ಮಾಣವಾಗಲಿದೆ.
  • ಈ 7 ಕಿ.ಮೀ ನ ಸಮುದ್ರದ ಸುರಂಗ ದೇಶದಲ್ಲೇ ಮೊದಲ ಸಮುದ್ರದ ಸುರಂಗವಾಗಿರಲಿದೆ.
  •  ಈ ಟನಲ್ ಭೂಮಿಯ ಮಟ್ಟದಿಂದ 25-65 ಮೀಟರ್ ನಷ್ಟು ಆಳವಾಗಿರಲಿದ್ದು, ಶಿಲ್ಪಾತದ ಬಳಿ ಪಾರ್ಸಿಕ್ ಹಿಲ್ ನಲ್ಲಿ 114 ಮೀಟರ್ ಕೆಳಭಾಗದಲ್ಲಿ ನಿರ್ಮಾಣವಾಗುತ್ತಿರುವ ಟನಲ್ ಅತ್ಯಂತ ಆಳವಾದ ಟನಲ್ ಆಗಿರಲಿದೆ.