Published on: January 12, 2022

ಮುಕ್ತ ವ್ಯಾಪಾರಕ್ಕೆ ಭಾರತದ ಸಿದ್ಧತೆ

ಮುಕ್ತ ವ್ಯಾಪಾರಕ್ಕೆ ಭಾರತದ ಸಿದ್ಧತೆ

http://asideofbooks.com/2018/03/ ಸುದ್ಧಿಯಲ್ಲಿ ಏಕಿದೆ ? ಭಾರತವು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಸೇರಿದಂತೆ ನಾನಾ ದೇಶಗಳ ಜತೆಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಿದ್ಧತೆ ನಡೆಸುತ್ತಿದೆ.

Bridlington ಯಾವ ದೇಶಗಳೊಂದಿಗೆ?

  • ಭಾರತವು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ), ಬ್ರಿಟನ್‌, ಐರೋಪ್ಯ ಒಕ್ಕೂಟ, ಆಸ್ಪ್ರೇಲಿಯಾ, ಕೆನಡಾ, ಇಸ್ರೇಲ್‌ ಇತ್ಯಾದಿ ದೇಶಗಳ ಜತೆಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಜ್ಜಾಗುತ್ತಿದೆ. ಕನಿಷ್ಠ 6 ದೇಶಗಳ ಜತೆ ಮೊದಲ ಹಂತದಲ್ಲಿ ಎಫ್‌ಟಿಎ ನಿರೀಕ್ಷಿಸಲಾಗಿದೆ.

ಮಧ್ಯ ಪ್ರಾಚ್ಯದ ಜತೆ ಲಿಂಕ್‌:

  • ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಜತೆಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡುವುದರಿಂದ ಮಧ್ಯ ಪ್ರಾಚ್ಯ ವಲಯದಲ್ಲಿ ಭಾರತದ ವಹಿವಾಟು ಹೆಚ್ಚಲಿದೆ. ದುಬೈನ ಮಾರುಕಟ್ಟೆಯನ್ನು ಆಕರ್ಷಿಸಲು ಹಾದಿ ಸುಗಮವಾಗಲಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಭಾರತೀಯ ಉತ್ಪನ್ನಗಳಿಗೆ ಹೇರಳ ಬೇಡಿಕೆ ಇದ್ದು, ಅದರ ರಫ್ತು ಹೆಚ್ಚಳವಾಗಬಹುದು. ಯುಎಇ ಜತೆಗಿನ ಮಾತುಕತೆ ಪ್ರಗತಿಯ ಹಂತದಲ್ಲಿದೆ. 2022ರ ಜನವರಿ-ಫೆಬ್ರವರಿಯಲ್ಲಿ ಒಪ್ಪಂದ ನಿರೀಕ್ಷಿಸಲಾಗಿದೆ. ಆಸ್ಪ್ರೇಲಿಯಾದ ಜತೆಗೂ ಮಾತುಕತೆ ಪ್ರಗತಿಯಲ್ಲಿದೆ.

10 ವರ್ಷಗಳನಂತರ ಒಪ್ಪಂದ:

  • ಭಾರತವು ಯುಎಇ ಜತೆಗೆ 10 ವರ್ಷಗಳ ನಂತರ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದೆ. ಜವಳಿ, ಜ್ಯುವೆಲ್ಲರಿ, ಚರ್ಮದ ಉತ್ಪನ್ನಗಳು, ಎಂಜಿನಿಯರಿಂಗ್‌ ಸರಲುಗಳು, ರಾಸಾಯನಿಕ, ಸಂಬಾರ ಉತ್ಪನ್ನಗಳನ್ನು ಯುಎಇಗೆ ವ್ಯಾಪಕವಾಗಿ ರಫ್ತು ಮಾಡಲು ಸರಕಾರ ಯೋಜಿಸಿದೆ.
  • ಯುಎಇಯಿಂದ ಪೌಲ್ಟ್ರಿ ಉತ್ಪನ್ನಗಳ ನಿಷೇಧವನ್ನು ತೆರವುಗೊಳಿಸಲು ಭಾರತ ಬಯಸುತ್ತಿದೆ. ಭಾರತ ಹೆಚ್ಚು ರಫ್ತು ಮಾಡುವ ರಾಷ್ಟ್ರಗಳಲ್ಲಿ ಯುಎಇ ಮೂರನೇ ಸ್ಥಾನದಲ್ಲಿದೆ.

ರಫ್ತಿಗೆ ಅನುಕೂಲ:

  • ಭಾರತ ವಾರ್ಷಿಕ 400 ಶತಕೋಟಿ ಡಾಲರ್‌ ರಫ್ತು ಗುರಿಯನ್ನು ಹೊಂದಿದ್ದು, ಮುಕ್ತ ವ್ಯಾಪಾರ ಒಪ್ಪಂದಗಳು ಈ ನಿಟ್ಟಿನಲ್ಲಿ ಸಹಕಾರಿಯಾಗಲಿವೆ
  • ಚೀನಾದ ಬದಲಿಗೆ ಇತರ ರಾಷ್ಟ್ರಗಳ ಜತೆಗೆ ವಹಿವಾಟು ಹೆಚ್ಚಿಸಲು ಸರಕಾರ ಯೋಜಿಸಿದೆ.