Published on: October 18, 2022
ಮುಖ್ಯನ್ಯಾಯಮೂರ್ತಿ ಸ್ಥಾನಕ್ಕೆ ಚಂದ್ರಚೂಡ್
ಮುಖ್ಯನ್ಯಾಯಮೂರ್ತಿ ಸ್ಥಾನಕ್ಕೆ ಚಂದ್ರಚೂಡ್
ಸುದ್ದಿಯಲ್ಲಿ ಏಕಿದೆ?
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಅವರನ್ನು ಭಾರತದ ಮುಖ್ಯನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿದ್ದಾರೆ.
ಮುಖ್ಯಾಂಶಗಳು
- ನೇಮಕಾತಿಯೂ ನವೆಂಬರ್ 9, 2022 ರಿಂದ ಜಾರಿಗೆ ಬರಲಿದ್ದು, ಅಂದು ಅವರು ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
- ಮುಖ್ಯನ್ಯಾಯಮೂರ್ತಿ ಯು ಯು ಲಲಿತ್(ಭಾರತದ 49 ನೇ ಮುಖ್ಯ ನ್ಯಾಯಮೂರ್ತಿ)ಅವರು ಅಕ್ಟೋಬರ್ 11ರಂದು ನ್ಯಾ. ಚಂದ್ರಚೂಡ್ ಅವರನ್ನು ಮುಖ್ಯನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಿದ್ದರು.
- ಈ ಶಿಫಾರಸ್ಸನ್ನು ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ಚಂದ್ರಚೂಡ್ ಅವರ ಅವಧಿಯು 2024ರ ನವೆಂಬರ್ 10 ರವರೆಗೆ ಇರಲಿದೆ.
ಮುಖ್ಯನ್ಯಾಯಾಧೀಶರ ನೇಮಕ
- ಸಂವಿಧಾನದ 124(2)ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ರಾಷ್ಟ್ರಪತಿಗಳು ಅವಶ್ಯಕವೆಂದು ಭಾವಿಸಿದರೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟಿನ ನ್ಯಾಯಾಧೀಶರೊಂದಿಗೆ ಸಮಾಲೋಚಿಸಿದ ನಂತರ ರಾಷ್ಟ್ರಪತಿಗಳು ಮುಖ್ಯನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ.
ಅರ್ಹತೆಗಳು (124(3)ನೇ ವಿಧಿ ತಿಳಿಸುತ್ತದೆ)
- ಭಾರತದ ಪ್ರಜೆಯಾಗಿರಬೇಕು
- ಯಾವುದಾದರೂ ಹೈಕೋರ್ಟಿನಲ್ಲಿ ಐದು ವರ್ಷ ನ್ಯಾಯಾಧೀಶನಾಗಿರಬೇಕು
- ಯಾವುದಾದರೂ ಹೈಕೋರ್ಟಿನಲ್ಲಿ ಹತ್ತು ವರ್ಷಗಳ ಕಾಲ ವಕೀಲರಾಗಿ ಸೇವೆಸಲ್ಲಿಸಿರಬೇಕು
- ರಾಷ್ಟ್ರಪತಿಗಳ ಅಭಿಪ್ರಾಯದಲ್ಲಿ ಪ್ರಸಿದ್ಧ ನ್ಯಾಯ ಪರಿಗಣಿತನಾಗಿರಬೇಕು.
ಮುಖ್ಯನ್ಯಾಯಾಧೀಶರ ವಜಾ
- ಮಹಾಭಿಯೋಗದ ಮೂಲಕ 124(4)ನೇ ವಿಧಿಯನ್ವಯ ಪದಚ್ಯುತಿಗೊಳಿಸಬಹುದು. ಇವರನ್ನು ಎರಡು ಕಾರಣಕ್ಕಾಗಿ ಸಂಸತ್ತು ಪದಚ್ಯುತಿಗೊಳಿಸಬಹುದು. ಅವುಗಳೆಂದರೆ ದುರ್ನಡತೆ ಹಾಗೂ ಅಸಮರ್ಥತೆ