Published on: September 28, 2021
ಮೌಂಟ್ ಮನಸ್ಲು ವಿಶ್ವದ 8ನೇ ಅತಿ ಎತ್ತರದ ಶಿಖರ
ಮೌಂಟ್ ಮನಸ್ಲು ವಿಶ್ವದ 8ನೇ ಅತಿ ಎತ್ತರದ ಶಿಖರ
ಸುದ್ಧಿಯಲ್ಲಿ ಏಕಿದೆ? ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಇಬ್ಬರು ಅಧಿಕಾರಿಗಳು ನೇಪಾಳದಲ್ಲಿನ ಮೌಂಟ್ ಮನಸ್ಲು ಪರ್ವತವನ್ನು ಅಳತೆ ಮಾಡಿದ್ದಾರೆ. ಇದು ಪ್ರಪಂಚದ ಎಂಟನೇ ಅತಿ ಎತ್ತರದ ಶಿಖರವಾಗಿದೆ.
- ಐಟಿಬಿಪಿಯ ಕಮಾಂಡೆಂಟ್ ರತನ್ ಸಿಂಗ್ ಸೋನಲ್ ಅವರು ಈ ಯೋಜನೆಯ ನೇತೃತ್ವ ವಹಿಸಿದ್ದರು. ಅವರೊಂದಿಗೆ ಉಪ ಕಮಾಂಡೆಂಟ್ ಅನೂಪ್ ನೇಗಿ ಇದ್ದರು.
- ಮನಸ್ಲು ಪರ್ವತವು 8,163 ಮೀಟರ್ ಎತ್ತರವಿದೆ ಎಂದು ಮಾಹಿತಿ ನೀಡಿದ್ದಾರೆ. ಇದು ನೇಪಾಳದ ಹಿಮಾಲಯದ ಮನ್ಸಿರಿ ಹಿಮಲ್ ಭಾಗದಲ್ಲಿ, ನೇಪಾಳದ ಪಶ್ಚಿಮ-ಮಧ್ಯ ಭಾಗದಲ್ಲಿದೆ.
10 ಅತಿ ಎತ್ತರದ ಪರ್ವತಗಳು
- ಮೌಂಟ್ ಎವರೆಸ್ಟ್ ,ಮೌಂಟ್ K2 (ಗಾಡ್ವಿನ್ ಆಸ್ಟೆನ್), ಮೌಂಟ್ ಕಾಂಚನಜುಂಗಾ, ಮೌಂಟ್ ಲೋಟ್ಸೆ ,ಮೌಂಟ್ ಮಕಾಲು, ಮೌಂಟ್ ಚೋ ಓಯು, ಮೌಂಟ್ ಧೌಲಗಿರಿ, ಮೌಂಟ್ ಮನಸ್ಲು, ಮೌಂಟ್ ನಂಗಾ ಪರ್ಬಟ್, ಮೌಂಟ್ ಅನ್ನಪೂರ್ಣ