Published on: August 7, 2021
ಯೂನಿಕಾರ್ನ್ ಕ್ಲಬ್ ಸೇರಿದ ಭಾರತ್ ಪೇ
ಯೂನಿಕಾರ್ನ್ ಕ್ಲಬ್ ಸೇರಿದ ಭಾರತ್ ಪೇ
ಸುದ್ಧಿಯಲ್ಲಿ ಏಕಿದೆ ?
- ಇತ್ತೀಚೆಗೆ 350 ಮಿಲಿಯನ್ ಡಾಲರ್ ನಿಧಿ ಸಂಗ್ರಹದ ಮೂಲಕ ಭಾರತ್ ಪೇ ಯೂನಿಕಾರ್ನ್ ಕ್ಲಬ್ ಸೇರಿದೆ.
- ಇ-ಫಂಡಿಂಗ್ ಗೆ ಅಮೆರಿಕದ ಹೂಡಿಕೆ ದೈತ್ಯ ಟೈಗರ್ ಗ್ಲೋಬಲ್ ನೇತೃತ್ವ ವಹಿಸಿತ್ತು. ಇದರ ಜೊತೆಗೆ ಹೊಸ ಹೂಡಿಕೆದಾರರಾದ ಡ್ರ್ಯಾಗೊನೀರ್ ಹೂಡಿಕೆ ಗ್ರೂಪ್ ಹಾಗೂ ಸ್ಟೆಡ್ಫಾಸ್ಟ್ ಕ್ಯಾಪಿಟಲ್ ಕೂಡ ಇದ್ದವು.
- ಭಾರತ್ ಪೇ ಮೌಲ್ಯ ಈ ವರ್ಷದ ಪ್ರಾರಂಭದಲ್ಲಿ 900 ಮಿಲಿಯನ್ ಡಾಲರ್ ನಿಂದ 8 ಬಿಲಿಯನ್ ಡಾಲರ್ ಗೆ ಏರಿಕೆ ಕಂಡಿದೆ. ಉದ್ಯೋಗಿಗಳ ಷೇರುಗಳ ಬೈ-ಬ್ಯಾಕ್ ಯೋಜನೆಯ ಮೂಲಕ ಸೆಕೆಂಡರಿ ಷೇರು ಮಾರಾಟದಿಂದ 20 ಮಿಲಿಯನ್ ಡಾಲರ್ ಹಣ ಸಂಗ್ರಹಿಸಿರುವುದೂ ಮೌಲ್ಯದ ಏರಿಕೆಗೆ ಸೇರ್ಪಡೆಗೊಂಡಿದೆ.
ಯೂನಿಕಾರ್ನ್ ಕ್ಲಬ್
- ಯೂನಿಕಾರ್ನ್ ಎನ್ನುವುದು ವೆಂಚರ್ ಕ್ಯಾಪಿಟಲ್ ಇಂಡಸ್ಟ್ರಿಯಲ್ಲಿ 1 ಬಿಲಿಯನ್ ಡಾಲರ್ ಮೌಲ್ಯದ ಸ್ಟಾರ್ಟ್ಅಪ್ ಕಂಪನಿಯನ್ನು ವಿವರಿಸಲು ಬಳಸುವ ಪದವಾಗಿದೆ. ಯೂನಿಕಾರ್ನ್ ಎಂಬ ಪದವು ವ್ಯಾಪಾರ ಜಗತ್ತಿನಲ್ಲಿ ಇತ್ತೀಚಿನ ಮೂಲವಾಗಿದೆ ಮತ್ತು ಇದನ್ನು 2013 ರಲ್ಲಿ ಐಲೀನ್ ಲೀ ರಚಿಸಿದರು