Published on: January 12, 2022

ರಕ್ಷಣಾ ಪಾಲುದಾರಿಕೆ

ರಕ್ಷಣಾ ಪಾಲುದಾರಿಕೆ

ಸುದ್ಧಿಯಲ್ಲಿ ಏಕಿದೆ ?  ರಕ್ಷಣೆ ಮತ್ತು ಅಂತರಿಕ್ಷ ಯಾನ ತಂತ್ರಜ್ಞಾನಗಳ ಪ್ರಚಾರದ ಮೂಲಕ ಭಾರತ ಮತ್ತು ಸೌದಿ ಅರೇಬಿಯಾವನ್ನು ಹತ್ತಿರ ತರಲು ಸೌದಿ ಅರೇಬಿಯಾದ ಪವರ್ ಫಾರ್ ಡಿಫೆನ್ಸ್ ಟೆಕ್ನಾಲಜೀಸ್ ಕಂಪನಿ (ಪಿಡಿಟಿಸಿ) ಸಂಸ್ಥೆಯು ಭಾರತದ ನವರತ್ನ ಡಿಫೆನ್ಸ್ ಪಿಎಸ್‌ಯು, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಮುಖ್ಯಾಂಶಗಳು

  • ರಕ್ಷಣೆ, ಅಂತರಿಕ್ಷ ಯಾನ ಮತ್ತು ಭದ್ರತಾ ವಲಯದಲ್ಲಿ ಅತ್ಯಾಧುನಿಕ ಸ್ವಾಯತ್ತ ತಾಂತ್ರಿಕ ಪರಿಹಾರಗಳ ಪ್ರಚಾರ, ವರ್ಗಾವಣೆ ಮತ್ತು ನಿಯೋಜನೆಯ ಮೂಲಕ ಸೌದಿ ಮತ್ತು ಭಾರತದ ನಡುವೆ ಆಳವಾದ ಮತ್ತು ಉತ್ತಮವಾದ ವ್ಯಾಪಾರ, ತಾಂತ್ರಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಬೆಳೆಸುವ ದೃಷ್ಟಿಯೊಂದಿಗೆ ಶೇಖ್ ಮೊಹಮ್ಮದ್ ಮುಸ್ತಫಾ-ಝೈನಿ ಅಲ್-ಶೈಬಿ ಅವರು ಪಿಡಿಟಿಸಿಯನ್ನು ಸ್ಥಾಪಿಸಿದರು.
  • ಒಪ್ಪಂದವು ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ತಾಂತ್ರಿಕ ಪರಿಹಾರಗಳನ್ನು ಸಾಮೂಹಿಕವಾಗಿ ತರುತ್ತದೆ. ‘ಸೌದಿ ಅರೇಬಿಯಾ ಮತ್ತು ಭಾರತ ತಮ್ಮ ಪ್ರದೇಶಗಳಲ್ಲಿ ವೃದ್ಧಿಸುತ್ತಿರುವ ಶಕ್ತಿಗಳಾಗಿದ್ದು, ಪ್ರಮುಖ ಪಾತ್ರ ವಹಿಸುತ್ತಿವೆ ಮತ್ತು ಈ ಪ್ರದೇಶಗಳು ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ಪರಿಹರಿಸುವಲ್ಲಿ ಸಹಜವಾಗಿಯೇ ತೊಡಗಿಸಿಕೊಳ್ಳುತ್ತಿವೆ
  • ಸಮುದ್ರ ತೀರದ ರಾಡಾರ್ ವ್ಯವಸ್ಥೆ, ಬೆದರಿಕೆ ಪತ್ತೆಗೆ ನೆರವಾಗುವ ರಾಡಾರ್ ಸಹಿತವಾದ ಸುಧಾರಿತ ವ್ಯವಸ್ಥೆಗಳು, ಡ್ರೋನ್ ರಕ್ಷಣೆಯ ವ್ಯವಸ್ಥೆ ಮುಂತಾದವುಗಳಲ್ಲಿ ತಂತ್ರಜ್ಞಾನ ಉತ್ಪನ್ನಗಳನ್ನು ಬಿಇಎಲ್ ಒದಗಿಸುತ್ತದೆ. ಈ ಒಪ್ಪಂದವು ಉಭಯ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಭದ್ರಪಡಿಸುತ್ತದೆ ಮತ್ತು ಈ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಏರಿಸುತ್ತದೆ’