Published on: December 19, 2022

ರಫೇಲ್ ಯುದ್ಧ ವಿಮಾನ

ರಫೇಲ್ ಯುದ್ಧ ವಿಮಾನ

ಸುದ್ದಿಯಲ್ಲಿ ಏಕಿದೆ? ಕೊನೆಯ ಹಾಗೂ 36ನೇ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಬಂದಿದೆ.

ಮುಖ್ಯಾಂಶಗಳು

  • ಎರಡು ದಿನಗಳ ಕಾಲ ಈಶಾನ್ಯ ಗಡಿಯಲ್ಲಿ ನಡೆಯುವ ಸಮರಾಭ್ಯಾಸದಲ್ಲಿ ರಫೇಲ್ ಸೇರಿದಂತೆ ಈಶಾನ್ಯ ಭಾಗದಲ್ಲಿ ನಿಯೋಜಿಸಲಾಗಿರುವ ಎಲ್ಲ ಯುದ್ಧ ವಿಮಾನಗಳು ಭಾಗಿಯಾಗಲಿದ್ದು, ಯುದ್ಧಸನ್ನದ್ಧತೆಯನ್ನು ಪ್ರದರ್ಶಿಸಲಿವೆ.
  • ಸಮರಾಭ್ಯಾಸದ ಉದ್ದೇಶ : ಭಾರತದ ಸಮರಾಭ್ಯಾಸವು ಈ ಪ್ರದೇಶದಲ್ಲಿ ಐಎಎಫ್‌ನ ಒಟ್ಟಾರೆ ಯುದ್ಧ ಸಾಮರ್ಥ್ಯ ಮತ್ತು ಸೇನಾ ಸನ್ನದ್ಧತೆಯನ್ನು ಪರಿಶೀಲಿಸುವ ಗುರಿಯನ್ನು ಹೊಂದಿದೆ.

ರಫೇಲ್ ಯುದ್ಧ ವಿಮಾನ

  • 2016ರಲ್ಲಿ ಭಾರತ ಸರಕಾರ ಹಾಗೂ ಫ್ರಾನ್ಸ್‌ ಸರಕಾರದ ನಡುವೆ 36 ರಫೇಲ್‌ ಯುದ್ಧ ವಿಮಾನ ಖರೀದಿಗೆ ಒಪ್ಪಂದವಾಗಿತ್ತು.
  • 60 ಸಾವಿರ ಕೋಟಿ ರೂ. ಮೊತ್ತದ ಒಡಂಬಡಿಕೆಯಂತೆ ಎಲ್ಲಾ 36 ವಿಮಾನಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ.
  • ಈ ಮೊದಲು ಹಸ್ತಾಂತರಗೊಂಡ 35 ವಿಮಾನಗಳು ಹರಿಯಾಣದ ಅಂಬಾಲ ವಾಯುನೆಲೆ, ಪಶ್ಚಿಮ ಬಂಗಾಳದ ಹಶಿಮಾರ ಏರ್‌ಬೇಸ್‌ನಲ್ಲಿವೆ.
  • ‘‘36ನೇ ರಫೇಲ್‌ ವಿಮಾನವು ಬಿಡಿಭಾಗಗಳ ಬದಲಾವಣೆಗೆ ಅಗತ್ಯವಿರುವ ಸಲಕರಣೆಗಳೊಂದಿಗೆ ಹಸ್ತಾಂತರಗೊಂಡಿದೆ. ಇದನ್ನು ಯುದ್ಧ ವಿಮಾನಗಳ ನಿರ್ವಹಣೆಗಾಗಿಯೇ ಬಳಕೆ ಮಾಡಲಾಗುತ್ತದೆ.