Published on: September 9, 2021

ರಾಜಸ್ಥಾನದ ಬಾರ್ಮರ್ ಹೆದ್ದಾರಿ

ರಾಜಸ್ಥಾನದ ಬಾರ್ಮರ್ ಹೆದ್ದಾರಿ

ಸುದ್ಧಿಯಲ್ಲಿ ಏಕಿದೆ? ರಾಜಸ್ತಾನದ ಬರ್ಮಾರ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಗಾಗಿ ನಿರ್ಮಿಸಲಾಗಿರುವ ತುರ್ತು ಭೂಸ್ಪರ್ಶ ನೆಲೆ(ಇಎಲ್ಎಫ್)ಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದರು.

  • ಬರ್ಮಾರ್ ನ ಗಾಂಧವ್ ಭಕಾಸರ್ ವಿಭಾಗದ ರಾಷ್ಟ್ರೀಯ ಹೆದ್ದಾರಿ ಭಾರತೀಯ ವಾಯುಪಡೆ ವಿಮಾನಗಳ ಭೂ ಸ್ಪರ್ಶಕ್ಕಾಗಿ ಬಳಸುತ್ತಿರುವ ಭಾರತದ ಮೊದಲ ರಾಷ್ಟ್ರೀಯ ಹೆದ್ದಾರಿಯಾಗಿದೆ.
  • ಈ ಸಂದರ್ಭದಲ್ಲಿ, ಭಾರತೀಯ ವಾಯುಪಡೆಯ (IAF) C-130J ಸೂಪರ್ ಹರ್ಕ್ಯುಲಸ್ ಸಾರಿಗೆ ವಿಮಾನವು ರಾಜಸ್ಥಾನದ ಜಲೋರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಫೀಲ್ಡ್ ಲ್ಯಾಂಡಿಂಗ್‌ನಲ್ಲಿ ಇಳಿಯಿತು.
  • ಈ ಸೌಲಭ್ಯವನ್ನು ಯಾರು ನಿರ್ಮಿಸಿದವರು?
  • ಭಾರತೀಯ ವಾಯುಪಡೆಗೆ ತುರ್ತು ಭೂಸ್ಪರ್ಶದ ಸೌಲಭ್ಯಕ್ಕಾಗಿ ರಾಷ್ಟ್ರೀಯ ಹೆದ್ದಾರಿ 925ರ ಸತ್ತಾ-ಗಾಂಧವ್ ಸ್ಟ್ರೆಚ್ ನಲ್ಲಿ 3 ಕಿ.ಮೀ ರಸ್ತೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಭಿವೃದ್ಧಿಪಡಿಸಿದೆ.

ಇದು ಹೇಗೆ ಸಾಧ್ಯವಾಯಿತು?

  • ಪ್ರಮುಖ ಮೂಲಸೌಕರ್ಯವಾಗಿ ರಸ್ತೆಮಾರ್ಗಗಳ ಅಭಿವೃದ್ಧಿಯು ಉತ್ತಮ-ಗುಣಮಟ್ಟದ ಎಕ್ಸ್‌ಪ್ರೆಸ್‌ವೇಗಳು ಮತ್ತು ಹೆದ್ದಾರಿಗಳ ನಿರ್ಮಾಣವನ್ನು ಸಾಧ್ಯವಾಗಿಸಿತು, ಇದನ್ನು ಕೆಲವು ಮಾರ್ಪಾಡುಗಳೊಂದಿಗೆ ರನ್ವೇಗಳಾಗಿ ಬಳಸಬಹುದು. ಈ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳು ಹೆಚ್ಚುವರಿ ಮೂಲಸೌಕರ್ಯಗಳ ಸೀಮಿತ ನಿರ್ಮಾಣವನ್ನು ಹೊಂದಿವೆ. ಪರಿಣಾಮವಾಗಿ, ಅವುಗಳನ್ನು ತುರ್ತು ಸಂದರ್ಭಗಳಲ್ಲಿ ವಿವಿಧ ರೀತಿಯ ವಿಮಾನಗಳನ್ನು ನಿರ್ವಹಿಸಲು ಬಳಸಬಹುದು.