ರಾಜ್ಯಗಳ ನವೋದ್ಯಮ ರ್‍ಯಾಕಿಂಗ್ ವರದಿ
ರಾಜ್ಯಗಳ ನವೋದ್ಯಮ ರ್‍ಯಾಕಿಂಗ್ ವರದಿ
ಸುದ್ದಿಯಲ್ಲಿ ಏಕಿದೆ? ಸ್ಟಾರ್ಟಪ್ ದಿನ (ಜನವರಿ 16)ದಂದು ಕೇಂದ್ರ ಸರಕಾರದ ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವಾಣಿಜ್ಯ ಇಲಾಖೆಯು (ಡಿಪಿಐಐಟಿ) 2022ನೇ ಸಾಲಿನ ‘ರಾಜ್ಯಗಳ ನವೋದ್ಯಮ ‘ ರ್‍ಯಾಕಿಂಗ್ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕ ಸತತ ಎರಡನೇ ಬಾರಿಗೆ ‘ಶ್ರೇಷ್ಠ ಸಾಧಕ’ ರಾಜ್ಯವಾಗಿ ಹೊರಹೊಮ್ಮಿದೆ.
ಮುಖ್ಯಾಂಶಗಳು
- 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ಸ್ಪರ್ಧೆ ಇತ್ತು, ಇದೇ ಮೊದಲ ಬಾರಿಗೆ ಕೇಂದ್ರಾಡಳಿತ ಪ್ರದೇಶಗಳನ್ನು ಸೇರ್ಪಡೆಗೊಳಿಸಲಾಗಿದೆ.
- 25 ಕ್ರಿಯಾ ಅಂಶಗಳ ಆಧಾರದ ಮೇಲೆ ರ್‍ಯಾಂಕಿಂಗ್ ಅನ್ನು ಮೌಲ್ಯಮಾಪನ ಮಾಡಲಾಗಿದೆ.
- 7 ಕ್ಷೇತ್ರಗಳಾದ ಸಾಂಸ್ಥಿಕ ಬೆಂಬಲ, ಉದ್ಯಮಶೀಲತೆ ಮತ್ತು ನಾವಿನ್ಯತೆಗೆ ನೆರವು, ಮಾರುಕಟ್ಟೆ ಪ್ರವೇಶ, ನವೋದ್ಯಮಗಳ ಪೋಷಣೆ (ಇನ್‌ಕ್ಯುಬೇಷನ್) ಮತ್ತು ಮಾರ್ಗದರ್ಶನ, ಹಣಕಾಸಿನ ನೆರವು, ಸಾಮರ್ಥ್ಯವರ್ಧನೆಗೆ ಕ್ರಮಗಳು, ಸುಸ್ಥಿರ ಭವಿಷ್ಯಕ್ಕಾಗಿ ನೀಲನಕ್ಷೆ – ಈ ವಿಚಾರಗಳಲ್ಲಿ ರಾಜ್ಯಗಳು ಅನುಸರಿಸಿದ ಸುಧಾರಣಾ ಕ್ರಮಗಳನ್ನು ರ್‍ಯಾಂಕಿಂಗ್‌ಗೆ ಪರಿಗಣಿಸಲಾಗಿದೆ.
- ರ್‍ಯಾಂಕಿಂಗ್‌ಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಅವುಗಳ ಜನಸಂಖ್ಯೆ ಆಧರಿಸಿ ಎರಡು ಪ್ರಮುಖ ವರ್ಗಗಳಾಗಿ ವಿಂಗಡಿಸಲಾಗಿದೆ. 1 ಕೋಟಿಗಿಂತಲೂ ಅಧಿಕ ಜನಸಂಖ್ಯೆಯುಳ್ಳ ರಾಜ್ಯಗಳನ್ನು ‘ವರ್ಗ-ಎ’ ಮತ್ತು 1 ಕೋಟಿಗಿಂತಲೂ ಕಡಿಮೆ ಜನಸಂಖ್ಯೆಯುಳ್ಳ ರಾಜ್ಯಗಳನ್ನು ‘ವರ್ಗ-ಬಿ’ ಎಂದು ವರ್ಗೀಕರಿಸಿ, ಆಯಾ ವರ್ಗಗಳ ಅಡಿಯಲ್ಲಿ ರ್‍ಯಾಂಕಿಂಗ್ ನೀಡಲಾಗಿದೆ.
ಉದ್ದೇಶ
ನವೋದ್ಯಮ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು, ಉದಯೋನ್ಮುಖ ನವೋದ್ಯಮಿಗಳನ್ನು ಉತ್ತೇಜಿಸಲು ಸರಕಾರಗಳು ಕೈಗೊಂಡ ಉಪಕ್ರಮಗಳನ್ನು ಆಧರಿಸಿ ಈ ಶ್ರೇಣಿಗಳನ್ನು ನೀಡಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮಲ್ಲಿ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದರ ಜತೆಗೆ, ಇತರೆ ರಾಜ್ಯಗಳಲ್ಲಿರುವ ಅತ್ಯುತ್ತಮ ಕಾರ್ಯವಿಧಾನಗಳನ್ನು ನೋಡಿ ಪರಸ್ಪರ ಕಲಿಯಲು ನೆರವಾಗುವುದು ಈ ರ್‍ಯಾಂಕಿಂಗ್ ವ್ಯವಸ್ಥೆಯ ಉದ್ದೇಶವಾಗಿದೆ.
ಎ ವರ್ಗದ ರಾಜ್ಯಗಳು
ವಿಭಾಗ-ರಾಜ್ಯ
ಶ್ರೇಷ್ಠ ಸಾಧಕ ರಾಜ್ಯಗಳು-ಗುಜರಾತ್(4ನೇ ಬಾರಿಗೆ), ಕರ್ನಾಟಕ, ಕೇರಳ, ತಮಿಳುನಾಡು
ಅತ್ಯುತ್ತಮ ಸಾಧಕ ರಾಜ್ಯಗಳು-ಮಹಾರಾಷ್ಟ್ರ, ಒಡಿಶಾ, ಪಂಜಾಬ, ರಾಜಸ್ಥಾನ, ತೆಲಂಗಾಣ
ನಾಯಕ ರಾಜ್ಯಗಳು-ಆಂಧ್ರಪ್ರದೇಶ, ಅಸ್ಸಾಂ, ಮಧ್ಯಪ್ರದೇಶ
ಉತ್ತರ ಪ್ರದೇಶ, ಉತ್ತರಾಖಂಡ
ಆಕಾಂಕ್ಷೆಯ ರಾಜ್ಯಗಳು-ಬಿಹಾರ, ಹರಿಯಾಣ
ಉದಯೋನ್ಮುಖ ನವೋದ್ಯಮ ಪರಿಸರ ವ್ಯವಸ್ಥೆಯುಳ್ಳ ರಾಜ್ಯಗಳು-ಛತ್ತೀಸ್‌ಗಢ, ದೆಹಲಿ, ಜಮ್ಮು ಮತ್ತು ಕಾಶ್ಮೀರ
ಬಿ ವರ್ಗದ ರಾಜ್ಯಗಳು
ವಿಭಾಗ-ರಾಜ್ಯ
ಶ್ರೇಷ್ಠ ಸಾಧಕ ರಾಜ್ಯಗಳು-ಹಿಮಾಚಲ ಪ್ರದೇಶ
ಅತ್ಯುತ್ತಮ ಸಾಧಕ ರಾಜ್ಯಗಳು-ಅರುಣಾಚಲ ಪ್ರದೇಶ, ಮೇಘಾಲಯ
ನಾಯಕ ರಾಜ್ಯಗಳು-ಗೋವಾ, ಮಣಿಪುರ, ತ್ರಿಪುರಾ
ಆಕಾಂಕ್ಷೆಯ ರಾಜ್ಯಗಳು-ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ನಾಗಾಲ್ಯಾಂಡ್
ಉದಯೋನ್ಮುಖ ನವೋದ್ಯಮ ಪರಿಸರ ವ್ಯವಸ್ಥೆಯುಳ್ಳ ರಾಜ್ಯಗಳು-ಚಂಡೀಗಢ, ಲಡಾಖ್, ಮಿಜೋರಾಂ, ಪುದುಚೇರಿ, ಸಿಕ್ಕಿಂ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು