Published on: November 28, 2022
‘ರಾಪಿಡ್ ರೋಡ್ಸ್’ ತಂತ್ರಜ್ಞಾನ
‘ರಾಪಿಡ್ ರೋಡ್ಸ್’ ತಂತ್ರಜ್ಞಾನ
ಸುದ್ದಿಯಲ್ಲಿ ಏಕಿದೆ?
ರಸ್ತೆ ಗುಂಡಿ, ಸಂಚಾರ ದಟ್ಟಣೆಯಿಂದಾಗಿ ಎದುರಿಸುತ್ತಿರುವ, ಸಮಸ್ಯೆಗಳನ್ನು ದೂರಾಗಿಸಲು ಬಿಬಿಎಂಪಿ ರಾಪಿಡ್ ರೋಡ್ಸ್ ಎಂಬ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕ್ಷಿಪ್ರಗತಿಯಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ.
ಮುಖ್ಯಾಂಶಗಳು
- ಮೊದಲಿಗೆ ನಗರದ ಹಳೆ ಮದ್ರಾಸ್ ರಸ್ತೆಯಲ್ಲಿ ಈ ಹೊಸ ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. “ಇದರಲ್ಲಿ ಪ್ರಿ-ಕಾಸ್ಟ್ ವಿಧಾನವನ್ನು ಬಳಸಲಾಗುತ್ತದೆ.
ಉದ್ದೇಶ
- ವೈಟ್ ಟಾಪಿಂಗ್ ಅಥವಾ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿ ಸಮಯದಲ್ಲಿ ವಾಹನ ಸಂಚಾರ ನಿಷೇಧಿಸುವುದರಿಂದ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಹೀಗಾಗಿ ಅದನ್ನು ತಪ್ಪಿಸಲು ರಾಪಿಡ್ ರಸ್ತೆ ಎಂಬ ತಂತ್ರಜ್ಞಾನವನ್ನು ಬಿಬಿಎಂಪಿ ಅಳವಡಿಸಿಕೊಂಡಿದೆ.
ರಾಪಿಡ್ ರೋಡ್ಸ್ ತಂತ್ರಜ್ಞಾನ
- ರಾಪಿಡ್ ರಸ್ತೆಯನ್ನು ಪ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್ ಮೆಂಟ್ ನಿಂದ ನಿರ್ಮಿಸಲಾಗುತ್ತಿದೆ. ಮೊದಲಿಗೆ ರಸ್ತೆಯನ್ನು ಸಮತಟ್ಟಾಗಿ ಮಾಡಿಕೊಂಡು ಅದರ ಮೇಲೆ ಫ್ರೀಕಾಸ್ಟ್ ಪ್ಯಾನಲ್ ಗಳನ್ನು ಅಳವಡಿಸಲಾಗುತ್ತದೆ.
- ಪ್ರತಿ ಪ್ರೀಕಾಸ್ಟ್ ಪ್ಯಾನಲ್ ಗಳಲ್ಲಿ 4 ರಂಧ್ರಗಳಿರಲಿದ್ದು, ವಾಹನಗಳು ಇದರ ಮೇಲೆ ಸಂಚರಿಸುವಾಗ ವಾಹನಗಳ ಭಾರದಿಂದ ಪ್ಯಾನಲ್ ಗಳು ಅಲುಗಾಡದಂತೆ ಒಂದು ಪ್ಯಾನಲ್ ನಿಂದ ಮತ್ತೊಂದು ಪ್ಯಾನಲ್’ಗೆ ಪೋಸ್ಟ್ ಟೆನ್ಷನಿಂಗ್ ಮಾಡಲಾಗುತ್ತದೆ.
- ಇದರಿಂದ ಎಷ್ಟೇ ಭಾರದ ವಾಹನಗಳು ಸಂಚರಿಸಿದರೂ ಯಾವುದೇ ಸಮಸ್ಯೆಯಾಗುವುದಿಲ್ಲ.
ಪ್ರಿ-ಕಾಸ್ಟ್ ವಿಧಾನ
- ಅಮೆರಿಕಾದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಈ ಹೊಸ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. “ಪ್ರಿಕಾಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ವಿಧಾನದಲ್ಲಿ, ರೆಡಿಮೇಡ್ ಕಲ್ಲುಗಳನ್ನು ಹಾಕಲಾಗುತ್ತದೆ ಮತ್ತು ಕ್ರೇನ್‌ಗಳನ್ನು ಬಳಸಿಕೊಂಡು ಕೀಲುಗಳ ಎರಡೂ ಬದಿಗಳಲ್ಲಿ ಉಕ್ಕಿನ ಕೇಬಲ್‌ಗಳಿಂದ ಜೋಡಿಸಲಾಗುತ್ತದೆ.
- ಕೇವಲ ಒಂದು ಅಥವಾ ಎರಡು ದಿನಗಳಲ್ಲಿ 150 ಮೀಟರ್ ವಿಸ್ತಾರವನ್ನು ಹಾಕಬಹುದು ಮತ್ತು ಶೀಘ್ರದಲ್ಲೇ ಸಂಚಾರಕ್ಕೆ ಅನುವು ಮಾಡಿಕೊಡಬಹುದು.