Published on: November 28, 2022

‘ರಾಪಿಡ್ ರೋಡ್ಸ್’ ತಂತ್ರಜ್ಞಾನ

‘ರಾಪಿಡ್ ರೋಡ್ಸ್’ ತಂತ್ರಜ್ಞಾನ

Mazabuka ಸುದ್ದಿಯಲ್ಲಿ ಏಕಿದೆ? 

http://pulsobeat.com/tag/carmen-ruiz/ ರಸ್ತೆ ಗುಂಡಿ, ಸಂಚಾರ ದಟ್ಟಣೆಯಿಂದಾಗಿ ಎದುರಿಸುತ್ತಿರುವ, ಸಮಸ್ಯೆಗಳನ್ನು ದೂರಾಗಿಸಲು ಬಿಬಿಎಂಪಿ  ರಾಪಿಡ್ ರೋಡ್ಸ್ ಎಂಬ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕ್ಷಿಪ್ರಗತಿಯಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ.

ಮುಖ್ಯಾಂಶಗಳು

  • ಮೊದಲಿಗೆ ನಗರದ  ಹಳೆ ಮದ್ರಾಸ್ ರಸ್ತೆಯಲ್ಲಿ ಈ ಹೊಸ ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. “ಇದರಲ್ಲಿ ಪ್ರಿ-ಕಾಸ್ಟ್ ವಿಧಾನವನ್ನು ಬಳಸಲಾಗುತ್ತದೆ.

ಉದ್ದೇಶ 

  • ವೈಟ್ ಟಾಪಿಂಗ್ ಅಥವಾ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿ ಸಮಯದಲ್ಲಿ ವಾಹನ ಸಂಚಾರ ನಿಷೇಧಿಸುವುದರಿಂದ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಹೀಗಾಗಿ ಅದನ್ನು ತಪ್ಪಿಸಲು ರಾಪಿಡ್ ರಸ್ತೆ ಎಂಬ ತಂತ್ರಜ್ಞಾನವನ್ನು ಬಿಬಿಎಂಪಿ ಅಳವಡಿಸಿಕೊಂಡಿದೆ.

ರಾಪಿಡ್ ರೋಡ್ಸ್ ತಂತ್ರಜ್ಞಾನ

  • ರಾಪಿಡ್ ರಸ್ತೆಯನ್ನು ಪ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್ ಮೆಂಟ್ ನಿಂದ ನಿರ್ಮಿಸಲಾಗುತ್ತಿದೆ. ಮೊದಲಿಗೆ ರಸ್ತೆಯನ್ನು ಸಮತಟ್ಟಾಗಿ ಮಾಡಿಕೊಂಡು ಅದರ ಮೇಲೆ ಫ್ರೀಕಾಸ್ಟ್ ಪ್ಯಾನಲ್ ಗಳನ್ನು ಅಳವಡಿಸಲಾಗುತ್ತದೆ.
  • ಪ್ರತಿ ಪ್ರೀಕಾಸ್ಟ್ ಪ್ಯಾನಲ್ ಗಳಲ್ಲಿ 4 ರಂಧ್ರಗಳಿರಲಿದ್ದು, ವಾಹನಗಳು ಇದರ ಮೇಲೆ ಸಂಚರಿಸುವಾಗ ವಾಹನಗಳ ಭಾರದಿಂದ ಪ್ಯಾನಲ್ ಗಳು ಅಲುಗಾಡದಂತೆ ಒಂದು ಪ್ಯಾನಲ್ ನಿಂದ ಮತ್ತೊಂದು ಪ್ಯಾನಲ್’ಗೆ ಪೋಸ್ಟ್ ಟೆನ್ಷನಿಂಗ್ ಮಾಡಲಾಗುತ್ತದೆ.
  • ಇದರಿಂದ ಎಷ್ಟೇ ಭಾರದ ವಾಹನಗಳು ಸಂಚರಿಸಿದರೂ ಯಾವುದೇ ಸಮಸ್ಯೆಯಾಗುವುದಿಲ್ಲ.

ಪ್ರಿ-ಕಾಸ್ಟ್ ವಿಧಾನ

  • ಅಮೆರಿಕಾದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಈ ಹೊಸ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. “ಪ್ರಿಕಾಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ವಿಧಾನದಲ್ಲಿ, ರೆಡಿಮೇಡ್ ಕಲ್ಲುಗಳನ್ನು ಹಾಕಲಾಗುತ್ತದೆ ಮತ್ತು ಕ್ರೇನ್‌ಗಳನ್ನು ಬಳಸಿಕೊಂಡು ಕೀಲುಗಳ ಎರಡೂ ಬದಿಗಳಲ್ಲಿ ಉಕ್ಕಿನ ಕೇಬಲ್‌ಗಳಿಂದ ಜೋಡಿಸಲಾಗುತ್ತದೆ.
  • ಕೇವಲ ಒಂದು ಅಥವಾ ಎರಡು ದಿನಗಳಲ್ಲಿ 150 ಮೀಟರ್ ವಿಸ್ತಾರವನ್ನು ಹಾಕಬಹುದು ಮತ್ತು ಶೀಘ್ರದಲ್ಲೇ ಸಂಚಾರಕ್ಕೆ ಅನುವು ಮಾಡಿಕೊಡಬಹುದು.