Published on: July 28, 2022

ರಾಮಯ್ಯ ಸ್ಯಾಟ್’ ನ್ಯಾನೋ ಉಪಗ್ರಹ

ರಾಮಯ್ಯ ಸ್ಯಾಟ್’ ನ್ಯಾನೋ ಉಪಗ್ರಹ

ಸುದ್ದಿಯಲ್ಲಿ ಏಕಿದೆ?

ರಾಮಯ್ಯ ಆನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕುಲ್‌ದೀಪ್ ಕೆ. ರೈನಾ ಹಾಗೂ ಭಾರತೀಯ ತಂತ್ರಜ್ಞಾನ ಕಾಂಗ್ರೆಸ್‌ ಅಸೋಸಿಯೇಷನ್‌ ಅಧ್ಯಕ್ಷ ಡಾ.ಎಲ್.ವಿ.ಮುರಳಿಕೃಷ್ಣ ರೆಡ್ಡಿ ಅವರು ‘ರಾಮಯ್ಯ ಸ್ಯಾಟ್’ ಹೆಸರಿನ ನ್ಯಾನೋ ಉಪಗ್ರಹ ಅಭಿವೃದ್ಧಿಪಡಿಸುವ ಒಡಂಬಡಿಕೆಗೆ ಸಹಿ ಹಾಕಿದರು. ‌

ಮುಖ್ಯಾಂಶಗಳು

  • ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮೇಲ್ವಿಚಾರಣೆ ಹಾಗೂ ಭಾರತೀಯ ತಂತ್ರಜ್ಞಾನ ಕಾಂಗ್ರೆಸ್‌ ಅಸೋಸಿಯೇಷನ್ ಸಹಾಯದಿಂದ ವಿದ್ಯಾರ್ಥಿಗಳು ನ್ಯಾನೋ ಉಪಗ್ರಹ ಅಭಿವೃದ್ಧಿ ಪಡಿಸುತ್ತಿದ್ದಾರೆ.
  • ಒಂದು ಉಪಗ್ರಹದ ಅಭಿವೃದ್ಧಿಗೆ ರೂ. 1 ಕೋಟಿ ವೆಚ್ಚವಾಗಲಿದೆ.‌

ಉಪಗ್ರಹದ ಪರಿಚಯ

  • ರಾಮಯ್ಯ ಸ್ಯಾಟ್’ ಉಪಗ್ರಹವು 300 ಗ್ರಾಂ ಪೇಲೋಡ್‌ ಹೊಂದಿದೆ,
  • 6 ಕೆ.ಜಿ. ತೂಕ ಇರುತ್ತದೆ.
  • ದೂರದ ಪ್ರದೇಶಗಳಿಗೆ ಸಂಪರ್ಕ ಸಂವಹನ ಜಾಲವನ್ನು ಒದಗಿಸಲು, ನೀರು ಮತ್ತು ಹವಾಮಾನದ ಗುಣಮಟ್ಟ ತಿಳಿಯಲು ಸಹಾಯ ಮಾಡುತ್ತದೆ.
  • ಈ ಉಪಗ್ರಹದ ನಿಯಂತ್ರಣವನ್ನು ವಿಶ್ವವಿದ್ಯಾಲಯದ ಪೀಣ್ಯ ಆವರಣದಲ್ಲಿ ಸ್ಥಾಪಿಸಲಾಗುವುದು. ಆಗಸ್ಟ್‌ನಲ್ಲಿ ಉಡಾವಣೆ ಮಾಡಲಾಗುವುದು.

ಇಸ್ರೋದ ಪರಿಚಯ

  • ಇದು ಬೆಂಗಳೂರಿನಲ್ಲಿಮುಖ್ಯ ಕಛೇರಿಯನ್ನು ಹೊಂದಿದ್ದು, ೧೯೬೯ ರಲ್ಲಿ ಸ್ಥಾಪಿಸಲಾಯಿತು.
  • ಇಸ್ರೋ ದ ಮುಖ್ಯ ಉದ್ದೇಶ ಅಂತರಿಕ್ಷ ತಂತ್ರಜ್ಞಾನದ ಸಂಶೋಧನೆ ಮತ್ತು ಭಾರತಕ್ಕೆ ಉಪಯೋಗವಾಗುವಂತೆ ಅವುಗಳ ಅಭಿವೃದ್ಧಿ. ಇಸ್ರೋ ಸಂಸ್ಥೆ ಉಪಗ್ರಹ ಗಳನ್ನಲ್ಲದೆ ಉಪಗ್ರಹ ವಾಹಕಗಳನ್ನುತಯಾರಿಸುತ್ತದೆ.
  • ಭಾರತ ಅಣುಶಕ್ತಿಇಲಾಖೆಯ ಅಡಿಯಲ್ಲಿ ಇಸ್ರೋ ಅನ್ನು ಸ್ಥಾಪಿಸಲಾಯಿತು. ೧೯೭೫ ರಲ್ಲಿ ಮೊದಲ ಭಾರತೀಯ ಉಪಗ್ರಹ ಆರ್ಯಭಟ ರಷ್ಯಾದ ರಾಕೆಟ್ ಒಂದರ ಮೂಲಕ ಕಕ್ಷೆಗೆ ಹಾರಿತು. ಉಪಗ್ರಹವೊಂದರ ಮೊದಲ ಭಾರತೀಯ ಉಡಾವಣೆ ೧೯೮೦ ರಲ್ಲಿ ನಡೆಯಿತು.

ಭಾರತೀಯ ತಂತ್ರಜ್ಞಾನ ಕಾಂಗ್ರೆಸ್‌ ಅಸೋಸಿಯೇಷನ್

·        ಬೆಂಗಳೂರಿನಲ್ಲಿರುವ ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ ​​ಶೈಕ್ಷಣಿಕ, ಉದ್ಯಮ ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಸಮಾನತೆಯನ್ನು ನಿರ್ಮಿಸುವತ್ತ ಗಮನಹರಿಸುತ್ತದೆ. ಇದು ಭಾರತೀಯ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಮಿಷನ್ 2022 ಪ್ರಾರಂಭಿಸಿದೆ. ಇದು 75 ವಿದ್ಯಾರ್ಥಿಗಳ ಉಪಗ್ರಹಗಳ ಒಕ್ಕೂಟವನ್ನು ಪ್ರಾರಂಭಿಸಿದೆ:.