Published on: January 25, 2023
ರಾಷ್ಟ್ರೀಯ ಮತದಾರರ ದಿನ
ರಾಷ್ಟ್ರೀಯ ಮತದಾರರ ದಿನ
ಸುದ್ದಿಯಲ್ಲಿ ಏಕಿದೆ? ಭಾರತವು ತನ್ನ 13 ನೇ ರಾಷ್ಟ್ರೀಯ ಮತದಾರರ ದಿನವನ್ನು ಜನವರಿ 25 ರಂದು ಆಚರಿಸುತ್ತಿದೆ
- ಥೀಮ್, 2023: “ಮತದಾನದ ಹಾಗೆ ಇನ್ನೊಂದಿಲ್ಲ, ನಾನು ಖಚಿತವಾಗಿ ಮತ ಹಾಕುತ್ತೇನೆ”. ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಮತ ಚಲಾಯಿಸಲು ನಾಗರಿಕರ ಆಕಾಂಕ್ಷೆಗಳನ್ನು ಥೀಮ್ ತಿಳಿಸುತ್ತದೆ. ಚುನಾವಣಾ ಆಯೋಗ ಥೀಮ್ ಅನ್ನು ಗುರುತಿಸುವ ಲೋಗೋವನ್ನು ವಿನ್ಯಾಸಗೊಳಿಸಿದೆ.
- ಲೋಗೋ ಅಶೋಕ ಚಕ್ರ, ಟಿಕ್ ಮಾರ್ಕ್ ಮತ್ತು ಥೀಮ್‌ನ ಪದಗಳನ್ನು ಹೊಂದಿದೆ.
ಉದ್ದೇಶ
- ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸುವ ಮುಖ್ಯ ಉದ್ದೇಶ ನಾಗರಿಕರಲ್ಲಿ ಮತದಾನದ ಅರಿವು ಮೂಡಿಸುವುದು.
- ಹೊಸ ಮತದಾರರನ್ನು ಸೆಳೆಯುವುದು, ಉತ್ತೇಜಿಸುವುದು ಹಾಗೂ ಮತದಾರರ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಇದಲ್ಲದೇ ಮತದಾನದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವುದು ಮತ್ತು ಚುನಾವಣೆ ಪ್ರಕ್ರಿಯೆಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಹೇಗೆ ಆಚರಿಸುತ್ತದೆ?
- ಚುನಾವಣಾ ಆಯೋಗ ಈ ದಿನ ಹೊಸ ಮತದಾರರಿಗೆ ಹೊಸ ಮತದಾರರ ಗುರುತಿನ ಚೀಟಿಯನ್ನು ನೀಡುತ್ತದೆ.
ರಾಷ್ಟ್ರೀಯ ಪ್ರಶಸ್ತಿಗಳು
- ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು 2022 ರ ಅವಧಿಯಲ್ಲಿ ಚುನಾವಣಾ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ 2022 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
- ಐಟಿ ಉಪಕ್ರಮಗಳು, ಭದ್ರತಾ ನಿರ್ವಹಣೆ, ಚುನಾವಣಾ ನಿರ್ವಹಣೆ, ಮತದಾರರ ಪಟ್ಟಿ ಮತ್ತು ಮತದಾರರ ಜಾಗೃತಿಗಾಗಿ ತಮ್ಮ ಅಮೂಲ್ಯ ಕೊಡುಗೆಗಾಗಿ ಸರ್ಕಾರಿ ಇಲಾಖೆಗಳು ಮತ್ತು ಮಾಧ್ಯಮ ಸಂಸ್ಥೆಗಳಂತಹ ಪ್ರಮುಖ ಪಾಲುದಾರರಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ನೀಡಲಾಗುತ್ತದೆ.
ಚುನಾವಣಾ ಆಯೋಗದ ಗೀತೆ
- “ಮೇನ್ ಹೂನ್ ಭಾರತ್” ಹಾಡನ್ನು ಪ್ರದರ್ಶಿಸುತ್ತದೆ. ಇದನ್ನು ಸುಭಾಷ್ ಘಾಯ್ ಫೌಂಡೇಶನ್ ಸಹಯೋಗದಲ್ಲಿ ಸಂಯೋಜಿಸಲಾಗಿದೆ. ಹಾಡು ಮತದಾನದ ಶಕ್ತಿಯ ಬಗ್ಗೆ ಹೇಳುತ್ತದೆ.
ಇತಿಹಾಸ ಮತ್ತು ಮಹತ್ವ
- ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಭಾರತದಲ್ಲಿ ಪ್ರತೀವರ್ಷ ಜನವರಿ 25ರಂದು ಆಚರಿಸಲಾಗುತ್ತದೆ. 1950ರಲ್ಲಿ ಸ್ಥಾಪನೆಯಾದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನ ದಿನದ ನೆನಪಿಗಾಗಿ ಈ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. 2011ರಲ್ಲಿ ಮೊದಲ ಬಾರಿಗೆ ದೇಶಾದ್ಯಂತ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಅಂದಿನ ರಾಷ್ಟ್ರಪತಿ ಪ್ರತಿಭಾ ದೇವಿ ಪಾಟೀಲ್ ಅವರು ಭಾರತದ ಚುನಾವಣಾ ಆಯೋಗದ 61ನೇ ಸಂಸ್ಥಾಪನಾ ದಿನದಂದು ಈ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಣೆ ಮಾಡಲು ಪ್ರಾರಂಭಿಸಲಾಯಿತು. ಭಾರತದ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ದೇಶದಲ್ಲಿ ಎಲ್ಲಾ ಹಂತಗಳಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ.