Published on: April 16, 2023
ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳ ಸ್ಥಾನಮಾನ
ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳ ಸ್ಥಾನಮಾನ
ಸುದ್ದಿಯಲ್ಲಿ ಏಕಿದೆ? ಅಖಿಲ ಭಾರತ ತೃಣಮೂಲ ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತುಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಈ ಮೂರೂ ಪಕ್ಷಗಳಿಗೆ ನೀಡಲಾಗಿದ್ದರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಚುನಾವಣಾ ಆಯೋಗ ರದ್ದುಪಡಿಸಿದೆ. ಇದೇ ವೇಳೆ ಆಮ್ ಆದ್ಮಿ ಪಾರ್ಟಿಗೆ (ಎಎಪಿ) ರಾಷ್ಟ್ರೀಯ ಪಕ್ಷವಾಗಿ ಮಾನ್ಯತೆ ನೀಡಿದೆ.
ಮುಖ್ಯಾಂಶಗಳು
- ಎನ್ಸಿಪಿ ನಾಗಾಲ್ಯಾಂಡ್ನಲ್ಲಿಮತ್ತುತೃಣಮೂಲ ಕಾಂಗ್ರೆಸ್ ಪಕ್ಷವು ಮೇಘಾಲಯದಲ್ಲಿಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿತಮ್ಮ ಸಾಧನೆಯ ಆಧಾರದ ಮೇಲೆ ರಾಜ್ಯ ಪಕ್ಷಗಳಾಗಿ ಗುರುತಿಸಲ್ಪಡುತ್ತವೆ ಎಂದು ಚುನಾವಣಾ ಆಯೋಗ ಹೇಳಿದೆ.
- ನಾಗಾಲ್ಯಾಂಡ್ನಲ್ಲಿಲೋಕ ಜನಶಕ್ತಿಪಕ್ಷ (ರಾಮ್ ವಿಲಾಸ್), ಮೇಘಾಲಯದಲ್ಲಿ ವಾಯ್ಸ್ ಆಫ್ ಪೀಪಲ್ ಪಾರ್ಟಿ ಮತ್ತು ತ್ರಿಪುರಾದಲ್ಲಿ ತಿಪ್ರಾ ಮೋಥಾಗೆ ರಾಜ್ಯ ರಾಜಕೀಯ ಪಕ್ಷ ಸ್ಥಾನಮಾನವನ್ನು ಆಯೋಗ ನೀಡಿದೆ.
ರಾಜ್ಯ ಪಕ್ಷದ ಸ್ಥಾನಮಾನ ಕಳೆದುಕೊಂಡ ಇತರೆ ಪಕ್ಷಗಳು
- ಉತ್ತರ ಪ್ರದೇಶದಲ್ಲಿ ಆರ್ ಎಲ್ ಡಿ, ಆಂಧ್ರಪ್ರದೇಶದಲ್ಲಿ ಬಿಆರ್ಎಸ್, ಮಣಿಪುರದಲ್ಲಿ ಪಿಡಿಎ, ಪುದುಚೇರಿಯಲ್ಲಿ ಪಿಎಂಕೆ, ಪಶ್ಚಿಮ ಬಂಗಾಳದಲ್ಲಿ ಆರ್ಎಸಪಿ ಮತ್ತು ಮಿಜೋರಾಂನಲ್ಲಿ ಎಂಪಿಸಿಗೆ ನೀಡಲಾಗಿದ್ದ ರಾಜ್ಯ ಪಕ್ಷದ ಸ್ಥಾನಮಾನವನ್ನು ಕೂಡ ಆಯೋಗವು ರದ್ದುಗೊಳಿಸಿದೆ.
ಆಮ್ ಆದ್ಮಿ ಪಾರ್ಟಿಗೆ ಹೇಗೆ ಅನ್ವಯಿಸುತ್ತದೆ
- ದೆಹಲಿ ಮತ್ತು ಪಂಜಾಬ್ನಲ್ಲಿ ಎಎಪಿ ದೊಡ್ಡಬಹುಮತದೊಂದಿಗೆ ಮತ್ತು ಅತಿ ಹೆಚ್ಚು ಮತಗಳನ್ನು ಪಡೆಯುವುದರೊಂದಿಗೆ ಅಧಿಕಾರದಲ್ಲಿದೆ.
- ಕಳೆದ ವರ್ಷ ಮಾರ್ಚ್ನಲ್ಲಿ ನಡೆದ ಗೋವಾ ವಿಧಾನಸಭೆ ಚುನಾವಣೆಯಲ್ಲಿಶೇ.6.77ರಷ್ಟು ಮತಗಳನ್ನು ಪಡೆಯಿತು.
- ಈ ಮೂಲಕ 2022ರ ಅಂತ್ಯದ ವೇಳೆ ಗೆ ಗುಜರಾತ್- ಹಿಮಾಚಲ ಚುನಾವಣೆಗೆ ಹೋಗುವಾಗ, ಪಕ್ಷವು ಮೂರು ರಾಜ್ಯಗಳಲ್ಲಿರಾಜ್ಯ ಪಕ್ಷವಾಗಿ ಗುರುತಿಸುವ ಮಾನದಂಡವನ್ನು ಪೂರೈಸಿತು. ನಂತರ ಅದಕ್ಕೆ ಹಿಮಾಚಲ ಅಥವಾ ಗುಜರಾತ್ನ ವಿಧಾನಸಭೆ ಚುನಾವಣೆಗಳಲ್ಲಿನಾಲ್ಕನೇ ರಾಜ್ಯದಲ್ಲಿಗುರುತಿಸಲು ಶೇ. 6ರಷ್ಟು ಮತಗಳ ಅಗತ್ಯವಿತ್ತು. ಇದು ರಾಷ್ಟ್ರೀಯ ಪಕ್ಷವಾಗಿ ಗುರುತಿಸುವಿಕೆಗೆ ಅರ್ಹತೆ ನೀಡುತ್ತದೆ.
- ಎಎಪಿ ಹಿಮಾಚಲದಲ್ಲಿಕೇವಲ ಶೇ. 1ರಷ್ಟು ಮತಗಳನ್ನು ಪಡೆದರೆ, ಗುಜರಾತ್ನಲ್ಲಿಅದು ಪಡೆದದ್ದುಶೇ. 13ರಷ್ಟು ಮತಗಳು. ಅಲ್ಲಿರಾಜ್ಯ ಪಕ್ಷವಾಗಿ ಗುರುತಿಸಿಕೊಳ್ಳಲು ಅಗತ್ಯವಿರುವುದಕ್ಕಿಂತ ಎರಡು ಪಟ್ಟು ಹೆಚ್ಚು ಮತಗಳನ್ನು ಪಡೆಯಿತು. ಇದರೊಂದಿಗೆ ನಾಲ್ಕು ರಾಜ್ಯಗಳಲ್ಲಿರಾಜ್ಯ ಪಕ್ಷದ ಮಾನ್ಯತೆ ಗಳಿಸಿತು. ಈ ಮೂಲಕ ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ’ಗುರುತಿಸಲ್ಪಟ್ಟಿರಬೇಕು’ ಎಂಬ ಮಾನದಂಡವನ್ನು ಪೂರೈಸಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿತು.
ರಾಷ್ಟ್ರೀಯ ಪಕ್ಷದ ಮಾನ್ಯತೆ ಹೇಗೆ?
- ಚುನಾವಣಾ ಆಯೋಗವು ಒಂದು ಪಕ್ಷವನ್ನು ರಾಷ್ಟ್ರೀಯ ಪಕ್ಷವೆಂದು ಗುರುತಿಸಲು ತಾಂತ್ರಿಕ ಮಾನದಂಡವನ್ನು ಅನುಸರಿಸುತ್ತದೆ. ಈ ಪ್ರಕಾರ, ಯಾವುದೇ ಪಕ್ಷವು ಕಾಲಕಾಲಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಪಡೆಯಬಹುದು ಅಥವಾ ಕಳೆ ದುಕೊಳ್ಳಬಹುದಾಗಿದೆ.
- ‘ರಾಜಕೀಯ ಪಕ್ಷಗಳು ಮತ್ತುಚುನಾವಣೆ ಚಿಹ್ನೆಗಳು 2019’ ಎಂಬ ಚುನಾವಣಾ ಆಯೋಗದ ಕೈಪಿಡಿ ಪ್ರಕಾರ, ಮಾನದಂಡಗಳು ಈ ರೀತಿ ಇವೆ.
ರಾಷ್ಟ್ರೀಯ ಪಕ್ಷವಾಗಿ ಗುರುತಿಸಲು ಮಾನದಂಡಗಳು
- ಯಾವುದಾದರೂ ಪಕ್ಷವು ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ‘ಗುರುತಿಸಲ್ಪಟ್ಟಿರಬೇಕು’
ಅಥವಾ
- ಲೋಕಸಭೆ ಅಥವಾ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಯಲ್ಲಿ, ಪಕ್ಷವು ನಾಲ್ಕು ರಾಜ್ಯಗಳಲ್ಲಿ 6% ಮತಗಳನ್ನು ಪಡೆದಿರಬೇಕು ಮತ್ತು ಮತ್ತು ಕಳೆದ ಲೋಕಸಭೆ ಚುನಾವಣೆಯಲ್ಲಿಕನಿಷ್ಠ ನಾಲ್ಕು ಸಂಸದರನ್ನು ಹೊಂದಿರಬೇಕು;
ಅಥವಾ
- ಪಕ್ಷವು ಕನಿಷ್ಠ 3 ವಿವಿಧ ರಾಜ್ಯಗಳಿಂದ ಲೋಕಸಭೆಯಲ್ಲಿ (11 ಸ್ಥಾನಗಳು) 2% ಸ್ಥಾನಗಳನ್ನು ಗಳಿಸಿರಬೇಕು.
ರಾಜ್ಯ ಪಕ್ಷವಾಗಿ ಗುರುತಿಸಲು ಮಾನದಂಡಗಳು:
- ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ ಶೇ. 6ರಷ್ಟು ಮತ ಪಾಲು ಮತ್ತುಕನಿಷ್ಠಇಬ್ಬರು ಶಾಸಕರನ್ನು ಹೊಂದಿರಬೇಕು ಅಥವಾ
- ಕಳೆ ದ ಲೋಕಸಭಾ ಚುನಾವಣೆಯಲ್ಲಿ ಆ ರಾಜ್ಯದಿಂದ ಶೇ. 6ರಷ್ಟು ಮತ ಪಾಲನ್ನು ಹೊಂದಿರಬೇಕು ಮತ್ತು ಆ ರಾಜ್ಯದಿಂದ ಕನಿಷ್ಠ ಒಬ್ಬ ಸಂಸದ ಆಯ್ಕೆಯಾಗಿರಬೇಕು ಅಥವಾ
- ಕಳೆದ ವಿಧಾನಸಭೆ ಚುನಾವಣೆಯಲ್ಲಿಒಟ್ಟು ಸ್ಥಾನಗಳ ಕನಿಷ್ಠ ಶೇ. 3ರಷ್ಟು ಅಥವಾ ಮೂರು ಸ್ಥಾನಗಳು, ಯಾವುದು ಹೆಚ್ಚು ಅದನ್ನು ಪರಿಗಣಿಸಲಾಗುವುದು ಅಥವಾ
- ಪ್ರತಿ 25 ಸದಸ್ಯರಿಗೆ ಕನಿಷ್ಠ ಒಬ್ಬ ಸಂಸದ ಅಥವಾ ಲೋಕಸಭೆಯಲ್ಲಿರಾಜ್ಯಕ್ಕೆ ನಿಗದಿಪಡಿಸಿದ ಯಾವುದೇ ಭಾಗ ಅಥವಾ
- ರಾಜ್ಯದಿಂದ ಕಳೆದ ವಿಧಾನಸಭೆ ಚುನಾವಣೆ ಅಥವಾ ಲೋಕಸಭೆ ಚುನಾವಣೆಯಲ್ಲಿಒಟ್ಟು ಮಾನ್ಯ ಮತಗಳ ಕನಿಷ್ಠ 8ರಷ್ಟನ್ನು ಹೊಂದಿರಬೇಕು.
ನಿಮಗಿದು ತಿಳಿದಿರಲಿ
- ಬಿಜೆಪಿ, ಕಾಂಗ್ರೆಸ್, ಸಿಪಿಐ(ಎಂ), ಬಹುಜನ ಸಮಾಜ ಪಕ್ಷ (ಬಿಎಸ್ಪಿ), ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಮತ್ತುಎಎಪಿ ಮಾತ್ರ ಈಗ ರಾಷ್ಟ್ರೀಯ ಪಕ್ಷಗಳಾಗಿ ಉಳಿದುಕೊಂಡಿವೆ.