Published on: August 11, 2022

ರೇಡಿಯೊ ಜಯಘೋಷ್’

ರೇಡಿಯೊ ಜಯಘೋಷ್’

ಸುದ್ದಿಯಲ್ಲಿ ಏಕಿದೆ?

ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಆಚರಣೆಯ ಭಾಗವಾಗಿ ಕಾಕೋರಿ ರೈಲು ಪ್ರಕರಣದ ಸ್ಮರಣಾರ್ಥ ‘ರೇಡಿಯೊ ಜಯಘೋಷ್’ ಚಾನಲ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ  ಅವರು  ಚಾಲನೆ ನೀಡಿದರು.

ಮುಖ್ಯಾಂಶಗಳು

  • ರೇಡಿಯೊ ಜಯಘೋಷ್ 107.8 MHz ನೆಟ್ವರ್ಕ್‌ನಲ್ಲಿ ಲಭ್ಯವಾಗಲಿದ್ದು, ಲಖನೌನಲ್ಲಿರುವ ಸಂಗೀತ ನಾಟಕ ಅಕಾಡೆಮಿ ಸ್ಟುಡಿಯೊದಿಂದ ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ಕಾರ್ಯಕ್ರಮಗಳು ಪ್ರಸಾರವಾಗಲಿವೆ. ರೆಡಿಯೊದ ಮೊಬೈಲ್ ಆ್ಯಪ್ ಹಾಗೂ ಸಾಮಾಜಿಕ ಮಾಧ್ಯಮ ಪುಟಗಳಲ್ಲಿಯೂ ಕಾರ್ಯಕ್ರಮಗಳನ್ನು ಆಲಿಸಬಹುದಾಗಿದೆ.
  • ವೇಗದ ಜೀವನಶೈಲಿಯಿಂದಾಗಿ, ಜಾನಪದ ಕಥೆಗಳು ಮತ್ತು ನಂಬಿಕೆಗಳು ಯುವ ಜನರನ್ನು ತಲುಪುತ್ತಿಲ್ಲ. ಈ ಕ್ರಮವು (ರೇಡಿಯೊ ಜಯಘೋಷ್) ಯುವಕರು ಮತ್ತು ಮಕ್ಕಳನ್ನು ನಮ್ಮ ನೀತಿ, ಪದ್ಧತಿಗಳು ಮತ್ತು ಮೌಲ್ಯಗಳೊಂದಿಗೆ ಸಂಪರ್ಕಿಸುವ’ ವಿಶ್ವಾಸವನ್ನು ಹೊಂದಿದೆ.
  • ‘ಇದೇ ವೇಳೆ, ರಾಜ್ಯದ ಹಲವು ಜಿಲ್ಲೆಗಳು, ದೂರದ ಹಳ್ಳಿಗಳಲ್ಲಿರುವ ಕಲಾವಿದರನ್ನು ಗುರುತಿಸಿ ಪ್ರೋ ತ್ಸಾಹ ನೀಡಲಿದೆ. ಬ್ಯಾಕ್ಪ್ಯಾಕ್ ಸ್ಟುಡಿಯೊದ ಕಲ್ಪನೆಯನ್ನೂ ಹೊಂದಿ ದ್ದು, ಅದರ ಮೂಲಕ, ರೆಕಾರ್ಡಿಂ ಗ್ಗೆ ಬೇಕಾಗುವ ಎಲ್ಲ ಉಪಕರಣಗಳನ್ನು ಪ್ರದೇಶಕ್ಕೇ ಕೊಂಡೊಯ್ದು, ಕಲಾವಿದರು ಇರುವ ಸ್ಥಳಗಳಲ್ಲಿಯೇ ಕಾರ್ಯಕ್ರಮಗಳನ್ನು ರೆಕಾರ್ಡ್‌ಮಾಡುವ ಚಿಂತನೆಯನ್ನು ಹೊಂದಿದೆ.
  • ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಕಾಲಘಟ್ಟಗಳಲ್ಲಿ ಶೌರ್ಯ ಪ್ರದರ್ಶನ ತೋರಿದ ಯೋಧರ ಯಶೋಗಾಥೆಗಳನ್ನು ಒಳಗೊಂಡ ‘ಪರಾಕ್ರಮ’ವೂ ಚಾನಲ್ನ ನಿತ್ಯದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಇರಲಿದೆ. ಅದೇರೀತಿ ರಾಜ್ಯದ ಎಲ್ಲಾ 75 ಜಿಲ್ಲೆಗಳ ಜಾನಪದ ಕಥೆಗಳನ್ನು ಪ್ರಚಾರ ಮಾಡುವ ‘ಶೌರ್ಯ ನಗರ’ ಕಾರ್ಯಕ್ರಮ ಪ್ರಸಾರವಾಗಲಿದೆ. ವಾರಕ್ಕೊಮ್ಮೆ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮ ಇರಲಿದೆ.

ಉದ್ದೇಶ

  • ಶೌರ್ಯ ಪ್ರಶಸ್ತಿ ಪುರಸ್ಕೃ ತರು ಹಾಗೂ ಉತ್ತರ ಪ್ರದೇಶದ ಜಾನಪದ ಕಲೆ, ಆಹಾರಕ್ಕೆ ಉತ್ತೇ ಜನ ನೀಡುವ ಸಲುವಾಗಿ ರಾಜ್ಯ ಸಂಸ್ಕೃ ತಿ ಇಲಾಖೆಯು ಸಮುದಾಯ ರೇಡಿಯೊ ಚಾನಲ್ ಆರಂಭಿಸುತ್ತಿದೆ.

ಕಾಕೋರಿ ರೈಲು ಪ್ರಕರಣ :

  • ಆಗಸ್ಟ್ 9, 1925 ರಂದು ಲಕ್ನೋ ಬಳಿಯ ಕಾಕೋರಿ ಎಂಬ ಹಳ್ಳಿಯಲ್ಲಿ ಬ್ರಿಟಿಷ್ ರ ವಿರುದ್ಧದ ಭಾರತೀಯ ಸ್ವಾತಂತ್ರ್ಯ ಚಳುವಳಿಯ ಕ್ರಾಂತಿಕಾರಿಗಳು ಒಂದು ರೈಲು ದರೋಡೆಯನ್ನು ಮಾಡಿದರು.
  • ಸ್ವಾತಂತ್ರ್ಯ ಸಾಧಿಸುವ ಉದ್ದೇಶದಿಂದ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಲು ಈ ಸಂಘಟನೆಯನ್ನು ಸ್ಥಾಪಿಸಲಾಗಿತ್ತು. ಶಸ್ತ್ರಾಸ್ತ್ರಗಳ ಖರೀದಿಗೆ ಸಂಸ್ಥೆಗೆ ಹಣ ಬೇಕಾಗಿದ್ದರಿಂದ, ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್‌ನ ಕ್ರಾಂತಿಕಾರಿ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್, ರಾಜೇಂದ್ರ ಲಾಹಿರಿ, ಕೇಶವ್ ಚಕ್ರವರ್ತಿ, ಮುಕುಂದಿ ಲಾಲ್, ಬನ್ವಾರಿ ಲಾಲ್ ಸೇರಿದಂತೆ 10 ಕ್ರಾಂತಿಕಾರಿಗಳು ಈ ದರೋಡೆ ನಡೆಸಿದ್ದರು.
  • ಸ್ವಾತಂತ್ರ್ಯ ಹೋರಾಟಗಾರರಾದ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್ ಮತ್ತು ರೋಷನ್ ಸಿಂಗ್ ಅವರನ್ನು ಡಿಸೆಂಬರ್ 19, 1927 ರಂದು ಕಾಕೋರಿ ಪಿತೂರಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಗಲ್ಲಿಗೇರಿಸಲಾಯಿತು.

ಈ ದರೋಡೆಯ ಉದ್ದೇಶಗಳು ಹೀಗಿವೆ  :

  • ಬ್ರಿಟಿಷ್ ಆಡಳಿತದಿಂದ ಕದ್ದ ಹಣದಿಂದ ಎಚ್‌ಆರ್‌ಎ (ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್)ಯ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸುವುದು.
  • ಭಾರತೀಯರಲ್ಲಿ ಎಚ್‌ಆರ್‌ಎ ಬಗ್ಗೆ ಸಕಾರಾತ್ಮಕ ಚಿತ್ರಣವನ್ನು ರೂಪಿಸುವುದು.