Published on: September 30, 2021

ರೈಟ್ ಲೈವ್ಲಿಹುಡ್ ಪ್ರಶಸ್ತಿ

ರೈಟ್ ಲೈವ್ಲಿಹುಡ್ ಪ್ರಶಸ್ತಿ

ಸುದ್ಧಿಯಲ್ಲಿ ಏಕಿದೆ? ನೊಬೆಲ್ ಗೆ ಸಮನಾದ ಪ್ರಶಸ್ತಿ ಎಂದೇ ಹೆಸರಾದ 2021 ಸಾಲಿನ ರೈಟ್ ಲೈವ್ಲಿಹುಡ್ ಪ್ರಶಸ್ತಿಗೆ ಈ ಬಾರಿ ನಾಲ್ಕು ಮಂದಿ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ‘ಅಲ್ಟರ್ನೇಟಿವ್ ನೊಬೆಲ್’ ಎಂದೇ ಕರೆಯಲಾಗುತ್ತದೆ.

  • ಈ ಬಾರಿ ಪ್ರಶಸ್ತಿಗೆ ಭಾಜನರಾದ ನಾಲ್ಕು ಮಂದಿಯಲ್ಲಿ ಭಾರತದ LIFE(Legal Initiative for Forest and Environment) ಎನ್ ಜಿ ಒ ಕೂಡಾ ಸೇರಿದೆ. ಸಮಾಜದ ಕೆಳವರ್ಗದ ಜನರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರನ್ನಾಗಿಸುವ ಕೆಲಸದಲ್ಲಿ ಈ ಸಂಸ್ಥೆ ನಿರತವಾಗಿದೆ. ಅಲ್ಲದೆ LIFE ಸಂಸ್ಥೆ ಪರಿಸರ ಸಂರಕ್ಷಣೆ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡಿದೆ. 2005ರಲ್ಲಿ ಇಬ್ಬರು ವಕೀಲರಾದ ರಿತ್ವಿಕ್ ದತ್ತಾ ಮತ್ತು ರಾಹುಲ್ ಚೌಧರಿ LIFE ಸಂಸ್ಥೆಯನ್ನು ಪ್ರಾರಂಭಿಸಿದ್ದರು.
  • ಕೆನಡಾದ ಸಾಮಾಜಿಕ ಕಾರ್ಯಕರ್ತೆ ಫ್ರೀಡಾ ಹ್ಯೂಸನ್, ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧ ಹೋರಾಟ ನಡೆಸುತ್ತಿರುವ ಕೆಮರೂನಿನ ವಾಂಡೋ ಮತ್ತು ರಷ್ಯಾದ ಪರಿಸರ ಹೋರಾಟಗಾರ ವ್ಲಾದಿಮಿರ್ ಸ್ಲಿವ್ಯಾಕ್ ಪ್ರಶಸ್ತಿಗೆ ಭಾಜನರಾದ ಇತರೆ ಮೂವರು.

ರೈಟ್ ಲೈವ್ಲಿಹುಡ್ ಪ್ರಶಸ್ತಿ

  • ರೈಟ್ ಲೈವ್ಲಿಹುಡ್ ಪ್ರಶಸ್ತಿಯು “ನಾವು ಇಂದು ಎದುರಿಸುತ್ತಿರುವ ಅತ್ಯಂತ ತುರ್ತು ಸವಾಲುಗಳಿಗೆ ಪ್ರಾಯೋಗಿಕ ಮತ್ತು ಅನುಕರಣೀಯ ಉತ್ತರಗಳನ್ನು ನೀಡುವವರನ್ನು ಗೌರವಿಸುವ ಮತ್ತು ಬೆಂಬಲಿಸುವ ಒಂದು ಅಂತರರಾಷ್ಟ್ರೀಯ ಪ್ರಶಸ್ತಿಯಾಗಿದೆ. ಈ ಬಹುಮಾನವನ್ನು 1980 ರಲ್ಲಿ ಜರ್ಮನ್-ಸ್ವೀಡಿಷ್ ಲೋಕೋಪಕಾರಿ ಜಾಕೋಬ್ ವಾನ್ ಯುಕ್ಸ್ಕುಲ್ ಸ್ಥಾಪಿಸಿದರು ಮತ್ತು ವಾರ್ಷಿಕವಾಗಿ ಡಿಸೆಂಬರ್ ಆರಂಭದಲ್ಲಿ ನೀಡಲಾಗುತ್ತದೆ ಐವರು ನಿಯಮಿತ ರೈಟ್ ಲೈವ್ಲಿಹುಡ್ ಅವಾರ್ಡ್ ಬೋರ್ಡ್ ಸದಸ್ಯರು ಆಹ್ವಾನಿಸಿದ ಅಂತರಾಷ್ಟ್ರೀಯ ತೀರ್ಪುಗಾರರೊಬ್ಬರು ಪರಿಸರ ರಕ್ಷಣೆ, ಮಾನವ ಹಕ್ಕುಗಳು, ಸುಸ್ಥಿರ ಅಭಿವೃದ್ಧಿ, ಆರೋಗ್ಯ, ಶಿಕ್ಷಣ ಮತ್ತು ಶಾಂತಿ ಮುಂತಾದ ಕ್ಷೇತ್ರಗಳಲ್ಲಿ ಪ್ರಶಸ್ತಿಗಳನ್ನು ನಿರ್ಧರಿಸುತ್ತಾರೆ.