Published on: October 26, 2021

ರೊಹಿಂಗ್ಯಾ ವಲಸಿಗರ ಪರ ನಿಂತ ಕರ್ನಾಟಕ ಸರ್ಕಾರ

ರೊಹಿಂಗ್ಯಾ ವಲಸಿಗರ ಪರ ನಿಂತ ಕರ್ನಾಟಕ ಸರ್ಕಾರ

ಸುದ್ಧಿಯಲ್ಲಿ ಏಕಿದೆ? ರೊಹಿಂಗ್ಯಾ ವಲಸಿಗರು ಹಾಗೂ ಅಕ್ರಮ ಒಳನುಸುಳುಕೋರರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಬಿಜೆಪಿ ಮುಖಂಡ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪಿಐಎಲ್‌ಗೆ ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಈ ಅರ್ಜಿಯನ್ನು ವಜಾಗೊಳಿಸುವಂತೆ ಅದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ.

ಕರ್ನಾಟಕ ಸರ್ಕಾರದ ನಿಲುವೇನು ? 

  • ಈವರೆಗೂ ಬೆಂಗಳೂರಿನಲ್ಲಿ 72 ರೊಹಿಂಗ್ಯಾಗಳನ್ನು ಗುರುತಿಸಲಾಗಿದೆ. ಆದರೆ ಅವರನ್ನು ಗಡಿಪಾರು ಮಾಡುವ ಯಾವುದೇ ಯೋಜನೆಯಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರಯವ ಅಫಿಡವಿಟ್‌ನಲ್ಲಿ ಕರ್ನಾಟಕ ಸರ್ಕಾರ ಹೇಳಿದೆ. 72 ರೊಹಿಂಗ್ಯಾಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ಪ್ರತಿಕ್ರಿಯಿಸಿದೆ.
  • ರೊಹಿಂಗ್ಯಾಗಳನ್ನು ಅಕ್ರಮ ವಲಸಿಗರು ಎಂದು ಪರಿಗಣಿಸುತ್ತಿಲ್ಲ. ಅವರು ನಿರಾಶ್ರಿತರು ಎಂದು ಪರಿಗಣಿಸುವಂತೆ ಭಾರತ ಸರ್ಕಾರದ ನೀತಿಯೂ ಇದೆ. ಅವರು ದೇಶಾದ್ಯಂತ ಹರಡಿದ್ದಾರೆ. ಅವರಲ್ಲಿ ಬೆಂಗಳೂರಿನಲ್ಲಿ 72 ಮಂದಿ ಇದ್ದಾರೆ. ಯಾರಾದರೂ ಅಕ್ರಮ ವಲಸಿಗರು ಎನ್ನುವುದು ಪತ್ತೆಯಾದರೆ, ಗಡಿಪಾರು ಮಾಡುವ ಮುನ್ನ ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸಲಾಗುವುದು. ವಲಸಿಗರನ್ನು ತನಿಖೆ ವೇಳೆ ನಮ್ಮ ಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು.

ಯಾರು ಈ ರೋಹಿಂಗ್ಯಾಗಳು ?

  • ಅವರು ಒಂದು ಜನಾಂಗೀಯ ಗುಂಪು, ಹೆಚ್ಚಾಗಿ ಮುಸ್ಲಿಮರು. ಅವರಿಗೆ ಮ್ಯಾನ್ಮಾರ್ ಪೂರ್ಣ ಪೌರತ್ವವನ್ನು ನೀಡಲಿಲ್ಲ.
  • ಅವರನ್ನು “ನಿವಾಸಿ ವಿದೇಶಿಯರು ಅಥವಾ ಸಹವರ್ತಿ ನಾಗರಿಕರು” ಎಂದು ವರ್ಗೀಕರಿಸಲಾಗಿದೆ.
  • ಜನಾಂಗೀಯವಾಗಿ ಅವರು ದೇಶದ ಸಿನೋ-ಟಿಬೆಟಿಯನ್ನರಿಗಿಂತ ಭಾರತ ಮತ್ತು ಬಾಂಗ್ಲಾದೇಶದ ಇಂಡೋ-ಆರ್ಯನ್ ಜನರಿಗೆ ಹೆಚ್ಚು ಹತ್ತಿರವಾಗಿದ್ದಾರೆ.
  • ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಅವರು ರೋಹಿಂಗ್ಯಗಳನ್ನು “ಜಗತ್ತಿನ ಅತ್ಯಂತ ತಾರತಮ್ಯಕ್ಕೊಳಗಾದ ಜನರಲ್ಲಿ ಒಬ್ಬರು” ಎಂದು ವಿವರಿಸಿದ್ದಾರೆ.