Published on: October 30, 2021
ಲಘು ಹೆಲಿಕಾಪ್ಟರ್
ಲಘು ಹೆಲಿಕಾಪ್ಟರ್
ಸುದ್ಧಿಯಲ್ಲಿ ಏಕಿದೆ? ಭಾರತೀಯ ನೌಕಾಪಡೆಗೆ ಮುಂಬೈನ ನೌಕಾ ಹೆಲಿಕಾಪ್ಟರ್ ಬೇಸ್ ಐಎನ್ಎಸ್ ಶಿಕ್ರಾದಲ್ಲಿ ಎರಡು ಸುಧಾರಿತ ಲಘು ಹೆಲಿಕಾಪ್ಟರ್ಗಳು(ALH) MK III ಸೇರ್ಪಡೆಗೊಂಡಿವೆ.
- ಭಾರತೀಯ ನೌಕಾಪಡೆಯ ಪ್ರಕಾರ, ಪ್ರಸ್ತುತ, 321 ವಿಮಾನವು ಚೇತಕ್ ಹೆಲಿಕಾಪ್ಟರ್ಗಳನ್ನು ಒಳಗೊಂಡಿದೆ, ಇವುಗಳನ್ನು ಹಂತಹಂತವಾಗಿ ಹೆಚ್ಚು ಸಮರ್ಥ ಮತ್ತು ಬಹುಮುಖ ALH MK III ವಿಮಾನಗಳಾಗಿ ಬದಲಾಯಿಸಲಾಗುವುದು, ಅವುಗಳು ಅತ್ಯಾಧುನಿಕ ಕಣ್ಗಾವಲು, ಸಂವಹನ, ಸುರಕ್ಷಾ ಸಾಧನಗಳನ್ನು ಹೊಂದಿವೆ. ಸಮುದ್ರದಲ್ಲಿ ಮತ್ತು ತೀರದಲ್ಲಿ ಹೆಚ್ಚು ಕಾರ್ಯಕ್ಷಮತೆ ಹೊಂದಿರಲಿವೆ.
- ಈ ಹೊಸದಾಗಿ ಸೇರ್ಪಡೆಗೊಂಡ ALH MK III ಹೆಲಿಕಾಪ್ಟರ್ಗಳು ಮುಂಬೈನಲ್ಲಿ ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಸಾಮರ್ಥ್ಯಗಳಿಗೆ ಇನ್ನಷ್ಟು ಬಲ ನೀಡಲಿವೆ