Published on: September 27, 2022
ಲಿಜ್ ಟ್ರಸ್
ಲಿಜ್ ಟ್ರಸ್
ಸುದ್ದಿಯಲ್ಲಿ ಏಕಿದೆ?
ಇತ್ತೀಚಿಗೆ ರಾಣಿ ಎಲಿಜಬೆತ್ II ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್ ಟ್ರಸ್ ಅವರನ್ನು ಯುನೈಟೆಡ್ ಕಿಂಗ್‌ಡಂನ ಹೊಸ ಪ್ರಧಾನ ಮಂತ್ರಿಯಾಗಿ ನೇಮಿಸಿದರು.
ಮುಖ್ಯಾಂಶಗಳು
- ಬ್ರಿಟಿಷ್ ಪ್ರಧಾನಿ ಹುದ್ದೆಗಾಗಿ ನಡೆದ ಚುನಾವಣೆಯಲ್ಲಿ ಭಾರತ ಮೂಲದ ರಿಷಿ ಸುನಕ್ ಗೆ ಸೋಲು ಎದುರಾಗಿದ್ದು, ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಸ್ಪರ್ಧೆಯಲ್ಲಿ ಯುಕೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಜಯ ಸಾಧಿಸಿದ್ದಾರೆ.
- ಮಾರ್ಗರೆಟ್ ಥ್ಯಾಚರ್ ಮತ್ತು ಥೆರೆಸಾ ಮೇ ನಂತರ ಟ್ರಸ್ ಅವರು ಯುಕೆ ನಲ್ಲಿ ಮೂರನೇ ಮಹಿಳಾ ಪ್ರಧಾನ ಮಂತ್ರಿಯಾಗಿದ್ದಾರೆ.
ಲಿಜ್ ಟ್ರಸ್ ಬಗ್ಗೆ·
- ಲಿಜ್ ಟ್ರಸ್ ಅವರ ಪೂರ್ಣ ಹೆಸರು ಮೇರಿ ಎಲಿಜಬೆತ್ ಟ್ರಸ್. ಅವರು 26 ಜುಲೈ 1975 ರಂದು ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿ ಜನಿಸಿದರು.·
- 1996 ರಲ್ಲಿ ಟ್ರಸ್ ಆಕ್ಸ್‌ಫರ್ಡ್‌ನ ಮೆರ್ಟನ್ ಕಾಲೇಜಿನಿಂದ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು.